ಇಬ್ಬರೂ ಸಹೋದರರಿಂದ ಯುವತಿಗೆ ಕೊಡಲಿಯಿಂದ ಹೊಡೆದು ಹತ್ಯೆ !

ಕೌಶಾಂಬಿ (ಉತ್ತರ ಪ್ರದೇಶ) ಇಲ್ಲಿಯ ಘಟನೆ !

ಒಬ್ಬನಿಂದ ಸಂತ್ರಸ್ತೆಯ ಮೇಲೆ ಮೂರು ವರ್ಷಗಳ ಹಿಂದೆ ಬಲಾತ್ಕಾರ, ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿತ್ತು !

ಬಲಾತ್ಕಾರಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಲು ಸರಕಾರಿ ವ್ಯವಸ್ಥೆಯು ತತ್ಪರ್ತೆಯಿಂದ ಪ್ರಯತ್ನ ಮಾಡದೇ ಇರುವ ಪರಿಣಾಮವಿದು !

ಕೌಶಾಂಬಿ (ಉತ್ತರ ಪ್ರದೇಶ) – ಜಿಲ್ಲೆಯಲ್ಲಿನ ದೇರ್ಹಾ ಗ್ರಾಮದಲ್ಲಿ ನವಂಬರ್ ೨೧ ರಂದು ಸಂಜೆ ಓರ್ವ ೨೦ ವರ್ಷದ ಯುವತಿಯನ್ನು ಕೊಡಲಿಯಿಂದ ಹತ್ಯೆ ಮಾಡಲಾಗಿದೆ. ಅಶೋಕ ಮತ್ತು ಪವನ ನಿಷಾದ ಇಬ್ಬರು ಸಹೋದರರು ಯುವತಿಯ ಹತ್ಯೆ ಮಾಡಿರುವುದನ್ನು ಪ್ರತ್ಯಕ್ಷದರ್ಶಿ ಗ್ರಾಮಸ್ಥರು ಹೇಳಿದ್ದಾರೆ. ಇದರಲ್ಲಿನ ಅಶೋಕನು ಒಂದು ಹತ್ಯೆಯ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದು ಈಗ ಅವನು ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಅವನ ಸಹೋದರ ಪವನ್ ಇವನು ೩ ವರ್ಷಗಳ ಹಿಂದೆ ಯುವತಿಯ ಮೇಲೆ ಬಲಾತ್ಕಾರ ಮಾಡಿದ್ದನು. ಅವನ ವಿರುದ್ಧ ದೂರು ದಾಖಲಿಸಲಾಗಿತ್ತು. ಪ್ರಕರಣ ಮಹೇವಾಘಾಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ.

೧. ಸ್ಥಳೀಯ ಜನರ ಪ್ರಕಾರ, ರಸ್ತೆಯಲ್ಲಿ ಯುವತಿಯ ಮೇಲೆ ಆರೋಪಿಯು ಹರಿತಾದ ಕೊಡಲಿಯಿಂದ ಹೊಡೆಯುತ್ತಿದ್ದನು. ಆ ಸಮಯದಲ್ಲಿ ಅಲ್ಲಿದ್ದ ಜನರು ಸುಮ್ಮನೆ ನಿಂತಿದ್ದರು.

೨. ಪವನ ೩ ವರ್ಷಗಳ ಹಿಂದೆ ಯುವತಿಯ ಮೇಲೆ ಬಲತ್ಕಾರ ಮಾಡಿದನಂತರ ಸಂತ್ರಸ್ತ ಕುಟುಂಬದವರು ಅವನ ವಿರುದ್ಧ ದೂರು ದಾಖಲಿಸಿದ್ದರು. ಅವನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ನಡೆಯುತ್ತಿತ್ತು. ಪವನ ಸಂತ್ರಸ್ತೆಯ ಕುಟುಂಬದವರ ಮೇಲೆ ಮೊಕದ್ದಮೆ ಹಿಂಪಡೆಯಲು ಸತತ ಒತ್ತಡ ಹೇರುತ್ತಿದ್ದನು ಹಾಗೂ ಯುವತಿಗೆ ಜೀವ ಬೆದರಿಕೆ ಕೂಡ ನೀಡಿದ್ದನು. (ಈ ಪ್ರಕರಣದಲ್ಲಿ ಪೊಲೀಸರು ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ರಕ್ಷಣೆ ಏಕೆ ನೀಡಲಿಲ್ಲ ? ಆದ್ದರಿಂದ ಈ ಘಟನೆಗೆ ಪೊಲೀಸರು ಕೂಡ ಹೊಣೆಗಾರರೆಂದು ಹೇಳುವುದೇ ? – ಸಂಪಾದಕರು)