ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರ ಹಲಾಲ್ ಪ್ರಮಾಣಪತ್ರವನ್ನು ನಿಷೇಧಿಸಿದ ಬಳಿಕ ‘ಜಮಿಯತ್ ಉಲಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದೆ. ಟ್ರಸ್ಟಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಯಾಜ್ ಅಹಮದ್ ಮಾತನಾಡಿ, ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸುವುದು ಅಯೋಗ್ಯವಾಗಿದೆ. ಈ ಉತ್ಪಾದನೆಗಳು ವೈಯಕ್ತಿಕ ಮತ್ತು ಉತ್ಪನ್ನಗಳನ್ನು ತಯಾರಿಸುವವರ ಇಚ್ಛೆಯನ್ನು ಅವಲಂಬಿಸಿರುತ್ತದೆ. ಸರಕಾರ, ಈ ಉತ್ಪನ್ನಗಳು ಗ್ರಾಹಕರಿಗೆ ಯೋಗ್ಯವಾಗಿದೆಯೇ ಎಂಬುದನ್ನು ಮಾತ್ರ ನೋಡಬೇಕು. ಹಲಾಲ್ ಪ್ರಮಾಣಪತ್ರ ಪ್ರಕ್ರಿಯೆಯು ಭಾರತಕ್ಕೆ ರಫ್ತು ಮಾಡುವ ಉದ್ದೇಶಕ್ಕಾಗಿ ಮತ್ತು ದೇಶದ ಅಂತರಿಕ ವಿತರಣೆಯ ಉದ್ದೇಶದಿಂದ ಉತ್ಪಾದಕರ ಅವಶ್ಯಕತೆಗೆ ಅನುಗುಣವಾಗಿದೆ. (ಯಾವುದೇ ಭಾರತೀಯ ತಯಾರಕರಿಗೆ ಇದರ ಅವಶ್ಯಕತೆಯಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುವುದನ್ನು ಈಗ ಸರಕಾರವೇ ದೃಢವಾಗಿ ತಿಳಿಸಬೇಕು. ಇಲ್ಲದಿದ್ದರೆ ಈ ಜನರು ತಮ್ಮ ತಥಾಕಥಿತ ಧಾರ್ಮಿಕ ಬೇಡಿಕೆಗಳಿಗೆ ಒಪ್ಪಿಕೊಳ್ಳುವಂತೆ ಮಾಡಲು ವ್ಯವಸ್ಥೆಯನ್ನು ಮೇಲೆ ಕೆಳಗೆ ಮಾಡಲು ಹಿಂಜರಿಯುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)
ಹಲಾಲ್ ಪ್ರಮಾಣಿಕೃತ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇದೆ ಮತ್ತು ಭಾರತೀಯ ಸಂಸ್ಥೆಗಳು ಅಂತಹ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಾಗಿದೆ. ಇದರ ಕಲ್ಪನೆ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೂ ಇದೆ. (ಹೀಗಿರುವಾಗ ಕೇವಲ ರಫ್ತು ಮಾಡಲು ಹಲಾಲ್ ಪ್ರಮಾಣೀಕರಣವನ್ನು ಮಾಡಬೇಕು. ಭಾರತೀಯರಲ್ಲಿ ಅಂತಹ ಪ್ರಮಾಣೀಕರಣದ ಯಾವುದೇ ಬೇಡಿಕೆಯಿಲ್ಲ. ಅಂತಹ ಬೇಡಿಕೆಯಿದ್ದರೆ ಅದನ್ನು ಸಹ ತೀವ್ರವಾಗಿ ವಿರೋಧಿಸಬೇಕು. ಅಲ್ಲದೆ, ಉತ್ತರ ಪ್ರದೇಶ ಸರಕಾರವು ರಾಜ್ಯದಲ್ಲಿ ಮಾತ್ರ ಹಲಾಲ್ ಪ್ರಮಾಣಪತ್ರವನ್ನು ನಿಷೇಧಿಸಿದೆ. ಅವರ ರಫ್ತಿಗೆ ಸರಕಾರ ವಿರೋಧ ವ್ಯಕ್ತಪಡಿಸಿಲ್ಲ. – ಸಂಪಾದಕರು) ಗ್ರಾಹಕರು ಹಲಾಲ್ ಉತ್ಪಾದನೆಗಳನ್ನು ಬಳಸುತ್ತಾರೆ ಮತ್ತು ಅವರು ಅದನ್ನು ಉಪಯೋಗಿಸಲೇಬೇಕು. ಇದರಿಂದ ದೇಶಕ್ಕೆ ಆರ್ಥಿಕವಾಗಿ ಲಾಭವಾಗುತ್ತಿದೆ ಎಂದು ಹೇಳಿದರು.