ಆಸ್ಪತ್ರೆಯ ಕೆಳಗೆ ಹಮಾಸ್ ನ ಕೇಂದ್ರ ಇರುವ ಪುರಾವೆ ! – ಇಸ್ರೇಲ್

ಅಲ್ ಶಿಫಾ ಆಸ್ಪತ್ರೆಯ ಕೆಳಗೆ ಸುರಂಗ ಪತ್ತೆ !

ತೆಲ್ ಅವಿವ್ (ಇಸ್ರೇಲ್) – ಗಾಝಾದಲ್ಲಿನ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲಿ ಸೈನ್ಯದಿಂದ ನಿಯಂತ್ರಣ ಪಡೆದ ನಂತರ ಈಗ ಅಲ್ಲಿ ಒಂದು ಸುರಂಗ ಸಿಕ್ಕಿರುವುದು ಇಸ್ರೇಲ್ ಸೈನಿಕರು ಹೇಳಿದ್ದಾರೆ. ಹಮಾಸ್ ನ ಭಯೋತ್ಪಾದಕರು ಈ ಆಸ್ಪತ್ರೆಯ ಕೆಳಗೆ ತಮ್ಮ ಕಾರ್ಯಾಲಯ ಮಾಡಿಕೊಂಡಿದ್ದರು, ಎಂದು ಇಸ್ರೇಲಿ ಸೈನ್ಯದಿಂದ ದಾವೆ ಮಾಡಲಾಗುತ್ತಿತ್ತು, ಈ ದಾವೆ ಸತ್ಯವಾಗಿದೆ ಎಂದು ಸೈನ್ಯ ಹೇಳಿದೆ. ೫೫ ಮೀಟರ್ ಉದ್ದ ಮತ್ತು ೧೦ ಮೀಟರ್ ಆಳವಾಗಿರುವ ಈ ಸುರಂಗದ ಪ್ರವೇಶ ದ್ವಾರದ ಮೇಲೆ ವಿವಿಧ ಸೈನಿಕ ಕಾರ್ಯಾಚರಣೆಗಾಗಿ ಯಂತ್ರಗಳು ಇದ್ದವು. ಇಸ್ರಯಿಲಿ ಸೈನ್ಯವನ್ನು ತಡೆಯುವದಕ್ಕಾಗಿ ಇಲ್ಲಿ ‘ಬ್ಲಾಸ್ಟ್ ಪ್ರೂಫ್’ (ಸ್ಪೋಟ ವಿರೋಧಿ) ಬಾಗಿಲು, ಗುಂಡಿನ ದಾಳಿಗಾಗಿ ಛಿದ್ರಗಳ ವ್ಯವಸ್ಥೆ ಮಾಡಿರುವುದು ಕಂಡು ಬಂದಿದೆ. ಈ ಬಾಗಿಲಿನ ಆಚೆಗೆ ಏನು ಇದೆ ? ಇದನ್ನು ಮಾತ್ರ ಹೇಳಲಾಗಿಲ್ಲ.

ಇಸ್ರೇಲಿ ಸೈನ್ಯವು, ಕಳೆದ ೪ ವಾರಗಳಿಂದ ನಾವು, ಗಾಜಾದಲ್ಲಿನ ನಾಗರಿಕರನ್ನು ಮತ್ತು ಅಲ್ ಶಿಫಾ ಆಸ್ಪತ್ರೆಯಲ್ಲಿನ ರೋಗಿಗಳನ್ನು ಹಮಾಸ್ ಮನುಷ್ಯರನ್ನು ಗುರಾಣಿ ಹಾಗೆ ಉಪಯೋಗಿಸುತ್ತಿದ್ದಾರೆ ಎಂದು ಹೇಳುತ್ತಿದ್ದವು ಇದು ಅದರ ಸಾಕ್ಷಿ ಆಗಿದೆ ಎಂದು ಹೇಳಿದೆ.

ಅಕ್ಟೋಬರ್ ೭ ರಂದು ಆಸ್ಪತ್ರೆಯಲ್ಲಿನ ಸಿಸಿಟಿವಿಯ ದೃಶ್ಯಾವಳಿ ಬಹಿರಂಗ !

ಇಸ್ರೇಲ್ ಸೈನ್ಯವು ಈ ಸಮಯದಲ್ಲಿ ಈ ಆಸ್ಪತ್ರೆಯಲ್ಲಿನ ಸಿಸಿಟಿವಿಯ ದೃಶ್ಯಾವಳಿ ಬಹಿರಂಗಪಡಿಸಿದೆ. ಇದರಲ್ಲಿ ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿತ್ತು, ಆ ದಿನ ಬೆಳಿಗ್ಗೆ ಕೆಲವು ಒತ್ತೆ ಆಳುಗಳನ್ನು ಬಂಧಿಸಿ ಈ ಆಸ್ಪತ್ರೆಗೆ ಕರೆತರೆಲಾಗಿರುವ ದೃಶ್ಯಾವಳಿ ಇದೆ. ಇದರಿಂದ ಈ ಆಸ್ಪತ್ರೆಯ ಸುರಂಗದಲ್ಲಿ ಈ ಒತ್ತೇಯಾಳುಗಳನ್ನು ಅಡಗಿಸಿಟ್ಟಿರುವುದು ಬಹಿರಂಗವಾಗಿದೆ.

‘ಸುರಂಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ !’ (ಅಂತೆ) – ಹಮಾಸ್ ನ ಹಾಸ್ಯಸ್ಪದ ಸ್ಪಷ್ಟೀಕರಣ

ಈ ಸುರಂಗದ ಬಗ್ಗೆ ಹಮಾಸ್ ಸ್ಪಷ್ಟೀಕರಣ ನೀಡುತ್ತಾ, ಸಂಪೂರ್ಣ ಗಾಝಾದಲ್ಲಿ ನೂರಾರು ಕಿಲೋಮೀಟರನ ಗುಪ್ತ ಸುರಂಗಗಳು, ಬಂಕರ್ ಮುಂತಾದವು ಇವೆ. ಈ ಆಸ್ಪತ್ರೆಯಲ್ಲಿನ ಈ ಸುರಂಗ ಕೂಡ  ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. (ಜನರನ್ನು ಮೂರ್ಖವೆಂದು ತಿಳಿಯುವ ಹಮಾಸ್ ! – ಸಂಪಾದಕರು)