ಡೆಹರಾಡೂನ (ಉತ್ತರಾಖಂಡ)ನಲ್ಲಿ ಹಿಂದೂ ಯುವಕನ ಆತ್ಮಹತ್ಯೆಯ ಹಿಂದೆ ಮುಸ್ಲಿಂ ಯುವತಿಯ ಕೈವಾಡ !

  • ಯುವಕನ ತಂದೆಯ ಆರೋಪದಲ್ಲಿ ಸತ್ಯಾಂಶ ಕಂಡು ಬಂದ ಬಳಿಕ ದೂರು ದಾಖಲು !

  • ಕುಟುಂಬ ಸಹಿತ ಯುವತಿ ಪಲಾಯನ !

ಡೆಹರಾಡೂನ (ಉತ್ತರಾಖಂಡ) – ಇಲ್ಲಿಯ 21 ವರ್ಷದ ಹಿಂದೂ ರೋಹಿತ್ ಶರ್ಮಾನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಅಲಿಶಾ, ಆಕೆಯ ತಂದೆ ಇಮ್ತಿಯಾಜ್, ತಾಯಿ ರೇಷ್ಮಾ ಮತ್ತು ಮಾವ ನದೀಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಬ್ ಇನ್ಸ್ ಪೆಕ್ಟರ್ ಸನೋಜ ಕುಮಾರ ಇವರು ನೀಡಿರುವ ಮಾಹಿತಿಯನುಸಾರ ರೋಹಿತನ ತಂದೆ ಮಹಿಪಾಲ ಶರ್ಮಾ ಇವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅವರ ಮಗನನ್ನು ಅಲಿಶಾ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದಳು ಮತ್ತು ಅವಳ ಕುಟುಂಬದವರು ಅವನನ್ನು ಮಾನಸಿಕವಾಗಿ ಹಿಂಸೆ ನೀಡಿದರು. ಆತನನ್ನು ಥಳಿಸಲಾಗಿತ್ತು. ಇದರಿಂದ ಅವರ ಮಗನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಠಿಣ ನಿರ್ಧಾರವನ್ನು ಕೈಕೊಳ್ಳಬೇಕಾಯಿತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಶರ್ಮಾರವರ ಆರೋಪದಲ್ಲಿ ಸತ್ಯಾಂಶ ಕಂಡು ಬಂದಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

1. ಅಕ್ಟೋಬರ್ 25 ರಂದು ವಿಷ ಸೇವಿಸಿದ ಬಳಿಕ ರೋಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನವೆಂಬರ್ 2 ರಂದು ತೀರಿಕೊಂಡನು.

2. ಮಹಿಪಾಲ ಶರ್ಮಾ ಇವರು, ರೋಹಿತ ವಿಷ ಸೇವಿಸುವವರೆಗೂ ಇವರಿಬ್ಬರ ಪ್ರೇಮ ವಿಚಾರ ನನಗೆ ಗೊತ್ತಿರಲಿಲ್ಲ. ರೋಹಿತ್‌ನ ಮೊಬೈಲ್‌ನಲ್ಲಿ ರೋಹಿತ್ ಮತ್ತು ಅಲಿಷಾ ಅವರ ‘ವಾಟ್ಸಾಪ್ ಚಾಟ್’ ನನಗೆ ಸಿಕ್ಕಿತು. ಅದರಲ್ಲಿ ಆಕೆ ಆತನನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಅಕ್ಟೋಬರ್ 25 ರಂದು ರೋಹಿತ ವಿಷ ಸೇವಿಸಿದ ದಿನ ಅಲಿಷಾ ಮನೆಗೆ ಹೋಗಿದ್ದನು, ಅಲ್ಲದೇ ಆ ದಿನದಿಂದ ಅಲಿಶಾ ಹಾಗೂ ಆಕೆಯ ಕುಟುಂಬದವರು ತಲೆಮರೆಸಿಕೊಂಡಿದ್ದಾರೆ. ಇದರಿಂದ ನನ್ನ ಮಗನ ಹತ್ಯೆಯಲ್ಲಿ ಇವರ ಕೈವಾಡ ಇರುವುದು ಸ್ಪಷ್ಟವಾಗಿದೆ.

3. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸನೋಜ ಕುಮಾರ ಇವರು ಮಾತನಾಡಿ, ಸದ್ಯ ಆರೋಪಿಗಳು ಪರಾರಿಯಾಗಿದ್ದೂ ಅವರನ್ನು ಹುಡುಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಒಂದು ವೇಳೆ ಹಿಂದೂ ಹುಡುಗನ ಕಾರಣಕ್ಕಾಗಿ ಮುಸ್ಲಿಂ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದರೆ, ಕಮ್ಯುನಿಸ್ಟ (ಸಾಮ್ಯವಾದಿ) ಮತ್ತು ತಥಾಕಥಿತ ಜಾತ್ಯತೀತವಾದಿಗಳ ಗುಂಪು ಹಿಂದೂಗಳನ್ನು ಅತ್ಯಾಚಾರಿಗಳೆಂದು ಕರೆಯಲು ಪ್ರಾರಂಭಿಸಿರುತ್ತಿದ್ದರು ಎನ್ನುವುದು ಸತ್ಯವೇ ಆಗಿದೆ !