ಉತ್ತರ ಪ್ರದೇಶದಲ್ಲಿ ಹಲಾಲ್ ಉತ್ಪಾದನೆಗಳ ನಿರ್ಮಾಣ, ಸಂಗ್ರಹಣೆ ಮತ್ತು ಮಾರಾಟದ ಮೇಲೆ ನಿಷೇಧ

  • ಯೋಗಿ ಆದಿತ್ಯನಾಥ್ ಸರಕಾರದ ಶ್ಲಾಘನೀಯ ನಿರ್ಧಾರ !
  • ರಫ್ತಿಗೆ ಮಾತ್ರ ಅನುಮತಿ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹಲಾಲ್ ಪ್ರಮಾಣಪತ್ರದ ವಿರುದ್ಧ ದೂರು ಸ್ವೀಕರಿಸಿದ ನಂತರ ಉತ್ತರ ಪ್ರದೇಶ ಸರಕಾರವು ಹಲಾಲ್ ಪ್ರಮಾಣಪತ್ರಗಳನ್ನು ನೀಡುವ ಇಸ್ಲಾಮಿಕ್ ಸಂಘಟನೆಗಳ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ಈಗ ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ನಿರ್ಮಾಣ, ಸಂಗ್ರಹಣೆ, ವಿತರಣೆ ಮತ್ತು ಮಾರಾಟಗಳನ್ನು ಈಗ ನಿರ್ಬಂಧಿಸಿದೆ. ಈ ಸಂಬಂಧ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಮಂಡಳಿಯ ಆಯುಕ್ತರು ನವೆಂಬರ 18ರ ರಾತ್ರಿ ಆದೇಶವನ್ನು ಹೊರಡಿಸಿದ್ದಾರೆ. ರಫ್ತುಗಾಗಿ ಮಾತ್ರ ಹಲಾಲ್ ಉತ್ಪನ್ನಗಳಿಗೆ ಅನುಮತಿ ನೀಡಲಾಗಿದೆ.

ಸಮಾನಾಂತರ ಪ್ರಮಾಣಪತ್ರವು ಆಹಾರದ ಗುಣಮಟ್ಟದ ಬಗ್ಗೆ ಗೊಂದಲವನ್ನು ಸೃಷ್ಟಿಸುತ್ತದೆ !

ಈ ಆದೇಶದಲ್ಲಿ, ‘ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣೀಕೃತ ಔಷಧಗಳು, ವೈದ್ಯಕೀಯ ಉಪಕರಣಗಳು, ಆಹಾರ ಮತ್ತು ಸೌಂದರ್ಯವರ್ಧಕಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಹಲಾಲ್ ಪ್ರಮಾಣಪತ್ರವು ಸಮಾನಾಂತರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇದರಿಂದ ಆಹಾರದ ಗುಣಮಟ್ಟದ ಬಗ್ಗೆ ಗೊಂದಲ ನಿರ್ಮಾಣವಾಗುತ್ತದೆ, ಈ ನಿಟ್ಟಿನಲ್ಲಿ ಸರಕಾರದ ನಿಯಮಗಳ ಉಲ್ಲಂಘನೆಯಾಗುತ್ತದೆ.’ ಎಂದು ಹೇಳಿದೆ.

ಕೇವಲ ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (‘FSSAI’)ಗೆ ಮಾತ್ರ ಪ್ರಮಾಣೀಕರಿಸುವ ಅಧಿಕಾರ ಇದೆ !

ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಮಂಡಳಿಯ ಆಯುಕ್ತೆ ಅನಿತಾ ಸಿಂಹ ಇವರು ಮಾತನಾಡಿ, ಈ ಹಿಂದೆ ಹಲಾಲ್ ಪ್ರಮಾಣಪತ್ರವನ್ನು ಕೇವಲ ಮಾಂಸದ ಉತ್ಪನ್ನಗಳಿಗೆ ಸೀಮಿತವಾಗಿತ್ತು; ಆದರೆ ಇಂದು ಎಣ್ಣೆ, ಸಕ್ಕರೆ, ಟೂತ್‌ಪೇಸ್ಟ್ ಮತ್ತು ಮಸಾಲೆಗಳಂತಹ ಎಲ್ಲಾ ರೀತಿಯ ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಭಾರತದಲ್ಲಿ ಆಹಾರ ಪದಾರ್ಥಗಳ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಎಲ್ಲಾ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (FSSAI) ಮಾತ್ರ ಅಧಿಕಾರ ಹೊಂದಿದ್ದು, ಪ್ರಮಾಣಪತ್ರ ನೀಡಲು ಇದು ಏಕೈಕ ಅಧಿಕೃತ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ. ಎಫ್.ಎಸ್.ಎಸ್.ಎ.ಐ. ಹೊರತುಪಡಿಸಿ ಯಾವುದೇ ಸಂಸ್ಥೆ ಅಥವಾ ಕಂಪನಿಯು ಉತ್ಪಾದನೆಗಳಿಗೆ ಪ್ರಮಾಣಪತ್ರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಹಲಾಲ್ ಪ್ರಮಾಣಪತ್ರದ ವಿರುದ್ಧ ಅರ್ಜಿ !

ವಕೀಲ ವಿಭೋರ ಆನಂದ ಅವರು ಏಪ್ರಿಲ್ 2022 ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ, ಹಲಾಲ್ ಉತ್ಪನ್ನಗಳು ಮತ್ತು ಹಲಾಲ ಪ್ರಮಾಣಪತ್ರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ದೂರಿನಲ್ಲಿ ಕೇವಲ ಶೇ. 15 ರಷ್ಟು ಜನರಿಗಾಗಿ ಹಲಾಲ್ ಪ್ರಮಾಣಪತ್ರಗಳ ಉತ್ಪನ್ನಗಳನ್ನು ತಯಾರಿಸಿ, ಶೇ. 85 ರಷ್ಟು ನಾಗರಿಕರ ಮೂಲಭೂತ ಅಧಿಕಾರಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಹೇಳಲಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಹಲಾಲ್ ಪ್ರಮಾಣಪತ್ರವಿರುವ ಉತ್ಪಾದನೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿತ್ತು. ‘ಹಲಾಲ್’ ಪ್ರಮಾಣಪತ್ರ ಮೊದಲು 1974 ರಲ್ಲಿ ಕತ್ತಲ್ ಮಾಡಿರುವ ಮಾಂಸದ ಉತ್ಪಾದನೆಗಳಿಗೆ ಮಾತ್ರ ಜಾರಿಗೊಳಿಸಲಾಗಿತ್ತು ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ. ಮತ್ತು 1993 ರ ತನಕ ಕೇವಲ ಮಾಂಸದ ಉತ್ಪನ್ನಗಳಿಗೆ ಜಾರಿಯಾಗಿತ್ತು, ಎಂದೂ ಸಹ ಅರ್ಜಿಯಲ್ಲಿ ಹೇಳಲಾಗಿತ್ತು.

ಹಲಾಲ ಪ್ರಮಾಣಪತ್ರಗಳಿಗೆ ದರ !

ಇಸ್ಲಾಮಿಕ್ ಸಂಘಟನೆಯಾದ `ಜಮಿಯತ್ ಉಲೇಮಾ ದೆಹಲಿ’ ಯ ಜಾಲತಾಣದಲ್ಲಿ, 3 ವರ್ಷಗಳಿಗಾಗಿ ಹಲಾಲ್ ಪ್ರಮಾಣಪತ್ರದ ಶುಲ್ಕ 61 ಸಾವಿರದ 500 ರೂಪಾಯಿಗಳಿವೆ. ಇದನ್ನು ಹೊರತುಪಡಿಸಿ ಜಿಎಸ್ಟಿ ಪ್ರತ್ಯೇಕವಾಗಿದೆ. ಮಾಂಸದ ಉತ್ಪನ್ನಗಳ ರಫ್ತಿಗೆ ರೂ. 800 ಪ್ರತಿಯೊಂದು ಒಪ್ಪಂದಕ್ಕೆ ಮತ್ತು ಮಾಂಸವನ್ನು ಹೊರತು ಪಡಿಸಿ ಇನ್ನಿತರ ಉತ್ಪನ್ನಗಳಿಗೆ 1 ಸಾವಿರ ರೂಪಾಯಿ ನಿಗದಿಪಡಿಸಿದೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶ ಸರಕಾರಕ್ಕೆ ಈ ರೀತಿ ನಿಷೇಧಿಸಲು ಸಾಧ್ಯವಾದರೆ, ಇತರ ರಾಜ್ಯಗಳು ಇದನ್ನು ಮಾಡಬೇಕು ಹಾಗೂ ಜಿಹಾದಿ ಭಯೋತ್ಪಾದಕರಿಗೆ ಹಣ ನೀಡುವ ಸಮಾನಾಂತರ ಪ್ರಮಾಣಪತ್ರದ ವ್ಯವಸ್ಥೆಯನ್ನು ನಾಶಪಡಿಸುವುದು ಆವಶ್ಯಕವಾಗಿದೆ !