ವಿಶ್ವಸಂಸ್ಥೆಯ ಯಾವುದೇ ಶಕ್ತಿಯಿಂದ ಗಾಝಾದಲ್ಲಿ ನಿಯಂತ್ರಣ ಪಡೆದರೆ ವಿರೋಧಿಸುವ ಎಚ್ಚರಿಕೆ !
ತೆಲ್ ಅವಿವ (ಇಸ್ರೇಲ್) – ಹಮಾಸದ ಸರ್ವನಾಶ ಮಾಡಿದ ನಂತರ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಅಂತರಾಷ್ಟ್ರೀಯ ಶಕ್ತಿ ಗಾಝಾದಲ್ಲಿ ನಿಯಂತ್ರಣ ಪಡೆದರೆ ಅದನ್ನು ಇಸ್ರೇಲ್ ವಿರೋಧಿಸುವುದು. ‘ಈಗಿನ ಗಾಝಾದಲ್ಲಿನ ಪರಿಸ್ಥಿತಿಗೆ ವಿಶ್ವ ಸಂಸ್ಥೆಯೇ ಹೊಣೆ, ಎಂದು ನಾವು ತಿಳಿಯುತ್ತೇವೆ, ಎಂದು ಇಸ್ರೇಲ್ ಗಂಭೀರ ಆರೋಪ ಮಾಡಿದೆ. ಇಸ್ರೇಲಿನ ವಿಶ್ವಸಂಸ್ಥೆಯಲ್ಲಿನ ರಾಯಭಾರಿ ಗಿಲಾದ್ ಏರ್ಡನ್ ಇವರು ಇಸ್ರೇಲದಲ್ಲಿನ ಒಂದು ವಾರ್ತಾ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಈ ಮೇಲಿನ ಅಭಿಪ್ರಾಯ ಮಂಡಿಸಿದರು.
ಏರ್ಡನ ಮಾತು ಮುಂದುವರಿಸಿ,
೧. ವಿಶ್ವ ಸಂಸ್ಥೆಯೇ ಹಮಾಸವನ್ನು ಇಸ್ರೇಲ್ ಮತ್ತು ಜಗತ್ತಿನ ವಿರುದ್ಧ ಗಾಝಾವನ್ನು ‘ಯುದ್ಧ ಯಂತ್ರ’ ವನ್ನಾಗಿ ಉಪಯೋಗಿಸಲು ಬಿಟ್ಟಿತು.
೨. ಯುದ್ಧ ಗೆದ್ದ ನಂತರ ವಿಶ್ವ ಸಂಸ್ಥೆಯ ಜೊತೆಗಿನ ಸಂಬಂಧದ ಬಗ್ಗೆ ಇಸ್ರೇಲ್ ಗಂಭೀರವಾಗಿಯೆ ವಿಚಾರ ಮಾಡಬೇಕಿದೆ.
೩. ವಿಶ್ವ ಸಂಸ್ಥೆಯಲ್ಲಿನ ಯಾವ ಜನರು ಅವರ ಹುದ್ದೆಯ ದುರುಪಯೋಗ ಮಾಡುತ್ತಿದ್ದಾರೆ, ಅಂತಹ ಅಧಿಕಾರಿಗಳ ‘ವೀಸಾ’ ನಿರಾಕರಿಸಬೇಕು. ಅವರು ಹಮಾಸ್ ಕುರಿತು ಮಾಡಿದ ಹುರುಳಿಲ್ಲದ ಹೇಳಿಕೆ ಪ್ರಸಾರ ಮಾಡುತ್ತಿದ್ದಾರೆ. ಆದ್ದರಿಂದಲೇ ಕಳೆದ ೧೬ ವರ್ಷದಿಂದ ಹಮಾಸ್ ವಿಶ್ವಸಂಸ್ಥೆಯ ಉಪಸ್ಥಿತಿಯಲ್ಲಿ ಅನೇಕ ಭಯಾನಕ ಘಟನೆಗಳು ನಡೆಸುತ್ತಿದೆ ಎಂದು ಹೇಳಿದರು.
ಗಾಝಾದ ಭವಿಷ್ಯದ ಬಗ್ಗೆ ಅರಬ ದೇಶಗಳ ಜೊತೆಗೆ ಚರ್ಚಿಸುವೆವು !
ಹಮಾಸ್ ನ ಸರ್ವನಾಶ ಮಾಡಿದ ನಂತರ ನಾವು ಗಾಝಾದ ಭವಿಷ್ಯದ ಸಂದರ್ಭದಲ್ಲಿ ಅರಬ ದೇಶಗಳೊಂದಿಗೆ ಚರ್ಚಿಸುವೆವು. ಮೂಲತಃ ಅರಭ ದೇಶಕ್ಕಾಗಿ ಕೂಡ ನಾವು ಹಮಾಸದ ಹೊಲಸು ಸ್ವಚ್ಛ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಹಮಾಸ್ ಹೇಗೆ ನಮಗೆ ಶತ್ರುವಾಗಿದೆ, ಹಾಗೆಯೇ ಅದು ಅನೇಕ ಅರಬ ದೇಶಗಳಿಗಾಗಿ ಕೂಡ ಶತ್ರುವಾಗಿದೆ, ಎಂಬುದು ನನಗೆ ತಿಳಿದಿದೆ ಎಂದು ಗಿಲಾದ ಏರ್ಡನ್ ಹೇಳಿಕೆ ನೀಡಿದರು.
ಸಂಪಾದಕೀಯ ನಿಲುವುಆಗಿನ ಪ್ರಧಾನಮಂತ್ರಿ ಜವಾಹರಲಾಲ ನೆಹರು ಇವರಿಂದ ಕಾಶ್ಮೀರದ ಪ್ರಶ್ನೆ ವಿಶ್ವಸಂಸ್ಥೆಯಲ್ಲಿ ಉಪಸ್ಥಿತಗೊಳಿಸಲಾಯಿತು ಮತ್ತು ಅದು ಇಂದಿನವರೆಗೆ ನೆನೆಗುದಿಗೆ ಬಿದ್ದಿದೆ. ಇದು ತಿಳಿದಿರುವುದರಿಂದ ಬಹುಷಃ ಇಸ್ರೇಲ್ ವಿಶ್ವಸಂಸ್ಥೆಗೆ ದೃಢವಾಗಿ ಹೇಳುತ್ತಿದೆ ! ಇದರಿಂದ ಈಗ ಭಾರತ ಕೂಡ ವಿಶ್ವ ಸಂಸ್ಥೆಯನ್ನು ಲೆಕ್ಕಿಸದೆ ಸಂಪೂರ್ಣ ಕಾಶ್ಮೀರದ ಮೇಲೆ ನಿಯಂತ್ರಣ ಪಡೆಯುವುದಕ್ಕಾಗಿ ಸೈನ್ಯದಿಂದ ಕಾರ್ಯಾಚರಣೆ ಕೈಗೆತ್ತಿಕೊಳ್ಳಬೇಕು ! |