Hindu Janajagruti Samiti on Halal Cancellation : ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳ ಮೇಲಿನ ನಿಷೇಧವನ್ನು ಹೇರಲು ಸಿದ್ಧತೆ ನಡೆಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! – ಹಿಂದೂ ಜನಜಾಗೃತಿ ಸಮಿತಿ

ಹಲಾಲ್ ಪ್ರಮಾಣಪತ್ರ ನೀಡುವ ಸಂಸ್ಥೆಗಳ ನೋಂದಣಿ ರದ್ದುಪಡಿಸಲು ಆಗ್ರಹ

ಮುಂಬಯಿ – ‘ಲವ್ ಜಿಹಾದ್’ನ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವ ಮೂಲಕ ಮಾದರಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈಗ ‘ಹಲಾಲ್ ಜಿಹಾದ್’ ಮೂಲಕ ನಡೆಯುತ್ತಿರುವ ದೇಶವಿರೋಧಿ ಷಡ್ಯಂತ್ರವನ್ನು ತಡೆಯಲು ಮುಂದಾಳತ್ವ ವಹಿಸಿದ್ದಾರೆ. ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಈ ಮೂಲಕ ರಾಷ್ಟ್ರವಿರೋಧಿ ಕೃತ್ಯಗಳಿಗೆ ಆರ್ಥಿಕ ನೆರವು ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ದೇಶದ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಅಧಿಕ ಸುದೃಢವಾಗುವುದು ಎನ್ನುವ ಆಶಯವನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ ರಮೇಶ ಶಿಂದೆಯವರು ವ್ಯಕ್ತಪಡಿಸಿದರು. ಶ್ರೀ. ರಮೇಶ ಶಿಂದೆಯವರು ಕೇಂದ್ರ ಸರಕಾರದ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ ಅಂದರೆ ‘ಎಫ್‌ಎಸ್‌ಎಸ್‌ಎಐ’ ಈ ಸರಕಾರಿ ಪ್ರಮಾಣೀಕರಣ ಸಂಸ್ಥೆ ಹಾಗೂ ಪ್ರತಿಯೊಂದು ರಾಜ್ಯದಲ್ಲಿ ‘ಆಹಾರ ಮತ್ತು ಔಷಧ ಆಡಳಿತ’ (ಎಫ್.ಡಿ.ಎ.) ವ್ಯವಸ್ಥೆಯು ಅಸ್ತಿತ್ವದಲ್ಲಿರುವಾಗ ಧಾರ್ಮಿಕ ಆಧಾರದಲ್ಲಿ `ಹಲಾಲ್ ಪ್ರಮಾಣ ಪತ್ರ’ ನೀಡುವ ಅನಧಿಕೃತ ಸಂಸ್ಥೆಯ ನೊಂದಣಿಯನ್ನು ರದ್ದುಗೊಳಿಸಬೇಕು ಎಂದು ಈ ನಿಮಿತ್ತ ಬೇಡಿಕೆಯನ್ನು ಮಾಡಿದರು.

ಶ್ರೀ.ರಮೇಶ ಶಿಂದೆ

ಶ್ರೀ. ಶಿಂದೆಯವರು ಮುಂದುವರಿಸಿ,

1. ಹಿಂದೆ ಮಾಂಸವಷ್ಟೇ ಪ್ರಮಾಣೀಕೃತ ‘ಹಲಾಲ್’ ಸಿಗುತ್ತಿತ್ತು. ಈಗ ವಿವಿಧ ಆಹಾರ ಪದಾರ್ಥಗಳು, ಔಷಧಿಗಳು, ಸೌಂದರ್ಯವರ್ಧಕಗಳಿಂದ ಹಿಡಿದು ‘ವಸತಿ ಸಂಕೀರ್ಣ’, ಪ್ರವಾಸೋದ್ಯಮ, ವ್ಯಾಪಾರ ಸಂಕೀರ್ಣ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ‘ಹಲಾಲ್ ಪ್ರಮಾಣೀಕರಣ’ ಪ್ರಾರಂಭವಾಗಿದೆ.

2. ಭಾರತದಲ್ಲಿ ವಾಸಿಸುವ ಶೇ. 14 ರಷ್ಟು ಮುಸಲ್ಮಾನರಿಗಾಗಿ, ಶೇ. 86 ರಷ್ಟು ಮುಸ್ಲಿಮೇತರ ಸಮುದಾಯದ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಇತ್ಯಾದಿ) ಅವರ ಇಚ್ಛೆಯ ವಿರುದ್ಧ ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ತುಂಬಾ ಗಂಭೀರವಾಗಿದೆ ಮತ್ತು ಇದು ಧಾರ್ಮಿಕ ಬಲವಂತದ ಒಂದು ರೂಪವಾಗಿದೆ.

3. ಹಿಂದೂ ಜನಜಾಗೃತಿ ಸಮಿತಿ ಈ ಬಗ್ಗೆ ಹಲವು ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಿದೆ. ಸಮಿತಿಯು ‘ಹಲಾಲ್ ಜಿಹಾದ್’ ಪುಸ್ತಕವನ್ನು ಪ್ರಕಟಿಸಿ ಮತ್ತು ದೊಡ್ಡ ಪ್ರಮಾಣದಲ್ಲಿ ಆಂದೋಲನಗಳನ್ನು ನಡೆಸುವ ಮೂಲಕ ಈ ಸಮಸ್ಯೆಯನ್ನು ಎಲ್ಲರಿಗಿಂತ ಮೊದಲು ಗಮನ ಸೆಳೆಯಿತು.

4. ಹಲಾಲ್ ಆರ್ಥಿಕತೆಯ ಮೂಲಕ ಭಾರತ ವಿರೋಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಪಿತೂರಿಯನ್ನು ಸಮಿತಿಯು ಬಹಿರಂಗಪಡಿಸಿದೆ.

5. ಈ ಬಗ್ಗೆ ಯೋಗಿ ಆದಿತ್ಯನಾಥ್ ಅವರು ಗಮನ ಹರಿಸಿ ಕ್ರಮ ಕೈಗೊಂಡಿದ್ದಾರೆ. ಇದು ಶ್ಲಾಘನೀಯವಾಗಿದ್ದು, ಅದನ್ನು ದೇಶಾದ್ಯಂತದ ಎಲ್ಲ ಮುಖ್ಯಮಂತ್ರಿಗಳು ಇದನ್ನು ಅನುಸರಿಸಬೇಕು ಎಂದು ಹೇಳಿದರು.