ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರರಿಂದ ಕೆನಡಾಗೆ ತಪರಾಕಿ !
ಲಂಡನ್ (ಬ್ರಿಟನ್) – ಭಾರತ ಸರಕಾರ ಹರದೀಪ ಸಿಂಹ ನಿಜ್ಜರ ಇವರ ಹತ್ಯೆಯ ವಿಚಾರಣೆಯನ್ನು ನಡೆಸುವ ಅವಶ್ಯಕತೆಯನ್ನು ನಿರಾಕರಿಸುವುದಿಲ್ಲ; ಆದರೆ ಕೆನಡಾ ಈ ಹತ್ಯೆಯ ಹಿಂದೆ ಭಾರತದ ಕೈವಾಡದ ಬಗ್ಗೆ ಆರೋಪಿಸಿದೆ ಮತ್ತು ಈ ಹೇಳಿಕೆಯನ್ನು ಬೆಂಬಲಿಸಲು ಪುರಾವೆಗಳನ್ನು ಪ್ರಸ್ತುತಪಡಿಸಬೇಕು. ಭಾರತದ ವಿರುದ್ಧ ಆರೋಪ ಮಾಡುವಾಗ ಅದರ ವಿರುದ್ಧ ಸಾಕ್ಷ್ಯವನ್ನೂ ನೀಡಬೇಕು. ನಾವು ತನಿಖೆ ನಡೆಸುವುದನ್ನು ನಿರಾಕರಿಸುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಪುನರುಚ್ಚರಿಸಿದರು. ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.
ಡಾ. ಎಸ್. ಜೈಶಂಕರ ಇವರು ಮಾತನಾಡುತ್ತಾ, ನಾವು ಕೆನಡಾಗೆ ಈ ಬಗ್ಗೆ ತಿಳಿಸಿದ್ದೇವೆ. ನಮಗೆ ಹಿಂಸಾತ್ಮಕ ಮಾರ್ಗದೊಂದಿಗೆ ಪ್ರತ್ಯೇಕತಾವಾದವನ್ನು ಬೆಂಬಲಿಸುವ ಮತ್ತು ತೀವ್ರ ರಾಜಕೀಯ ಪಭಿಪ್ರಾಯಗಳಿಗೆ ಕೆನಡಾದ ರಾಜಕೀಯದಲ್ಲಿ ಸ್ಥಾನ ನೀಡಲಾಗುತ್ತಿದೆ. ಅಂತಹ ಜನರು ಕೆನಡಾದ ರಾಜಕಾರಣದಲ್ಲಿದ್ದಾರೆ. ಅವರಿಗೆ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯ ನೀಡಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೂ ಅದಕ್ಕೆ ಒಂದಿಷ್ಟು ಜವಾಬ್ದಾರಿಯೂ ಬರುತ್ತದೆ. ಅಂತಹ ಸ್ವಾತಂತ್ರ್ಯವನ್ನು ದುರುಪಯೋಗ ಮತ್ತು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದರೆ, ಅದನ್ನು ಸಹಿಸಿಕೊಳ್ಳುವುದು ತುಂಬಾ ತಪ್ಪಾಗುವುದು. ನಿಮಗೆ ಅಂತಹ ಆರೋಪಗಳನ್ನು ಮಾಡಲು ಕಾರಣವಿದ್ದರೆ, ದಯವಿಟ್ಟು ನಮ್ಮೊಂದಿಗೆ ಸಾಕ್ಷ್ಯವನ್ನು ‘ಹಂಚಿಕೊಳ್ಳಿರಿ’. ನಾವು ತನಿಖೆ ನಡೆಸಲು ನಿರಾಕರಿಸುವುದಿಲ್ಲ; ಆದರೆ ಅವರು ಆ ರೀತಿ ಏನನ್ನೂ ಮಾಡಿಲ್ಲ ಎಂದು ಹೇಳಿದರು.