ಸಿಬ್ಬಂದಿ ಕೊಠಡಿಯಲ್ಲಿ ಜನಾಂಗೀಯ ಉಲ್ಲೇಖ ಅಪರಾಧವಲ್ಲ ! – ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ

ಭೋಪಾಲ – ಸಿಬ್ಬಂದಿ ಕೊಠಡಿ (ಸ್ಟಾಫ ರೂಮ) ಇದು ಸಾರ್ವಜನಿಕ ಸ್ಥಳವಲ್ಲ. ಆದ್ದರಿಂದ ಇಲ್ಲಿ ಜನಾಂಗೀಯ ಉಲ್ಲೇಖಿಸುವುದು ಇದು ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಅಪರಾಧವಲ್ಲ ಎಂದು ಮಧ್ಯಪ್ರದೇಶದ ಉಚ್ಛ ನ್ಯಾಯಾಲಯವು ಹೇಳಿಕೆ ನೀಡಿ ಇಬ್ಬರನ್ನೂ ಖುಲಾಸೆಗೊಳಿಸಿದೆ.

೨೦೧೦ ರಲ್ಲಿ ವ್ಯಕ್ತಿಯೊಬ್ಬರು ಶಹದೋಲನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಲ್ಲಿ ಶಾಲೆಯ ಸಿಬ್ಬಂದಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಕಮಲೇಶ ಶುಕ್ಲಾ ಮತ್ತು ಅಶುತೋಷ್ ತಿವಾರಿ ದೂರುದಾರರ ವಿರುದ್ಧ ಜಾತಿನಿಂದನೆ ಟೀಕೆ ಮಾಡಿದ್ದರು ಎಂದು ಹೇಳಿದೆ. ಇದರ ಮೇಲೆ ಪೊಲೀಸರು ಕಮಲೇಶ್ ಶುಕ್ಲಾ ಮತ್ತು ಅಶುತೋಷ್ ತಿವಾರಿ ವಿರುದ್ಧ ಪರಿಶಷ್ಟ ಜಾತಿ ಮತ್ತು ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಇದಾದ ನಂತರ ಇಬ್ಬರೂ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಮ್ಮ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಮಧ್ಯಪ್ರದೇಶದ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ವಿಶಾಲ ಧಗತ ಅವರು ಈ ಪ್ರಕರಣದಲ್ಲಿ ತೀರ್ಪು ನೀಡುವಾಗ ಸಾರ್ವಜನಿಕ ಸ್ಥಳದ ವ್ಯಾಖ್ಯಾನವನ್ನು ಸ್ಪಷ್ಟಪಡಿಸಿದರು. ಸಾರ್ವಜನಿಕ ಸ್ಥಳವೆಂದರೆ ಜನರು ಬರಬಹುದಾದ ಸ್ಥಳ ಎಂದು ನ್ಯಾಯಾಲಯ ಹೇಳಿದೆ. ಶಾಲೆಯ ಸಿಬ್ಬಂದಿ ಕೊಠಡಿ ಸಾಮಾನ್ಯ ಜನರಿಗೆ ಭೇಟಿ ನೀಡುವ ಸ್ಥಳವಲ್ಲ. ಹಾಗಾಗಿ ಇದು ಸಾರ್ವಜನಿಕ ಸ್ಥಳವಲ್ಲ. ಆದ್ದರಿಂದ ಅಲ್ಲಿ ಜನಾಂಗೀಯ ನಿಂದನೆ ಆಗಿದ್ದರೆ, ಅದು ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.