ಹೊಟ್ಟೆ ಸ್ವಚ್ಛವಾಗಲು ಪ್ರತಿದಿನ ಔಷಧಿಯನ್ನು ತೆಗೆದುಕೊಳ್ಳುತ್ತೀರಾ ? ಈಗಲೇ ಎಚ್ಚೆತ್ತುಕೊಳ್ಳಿ !

ಚಿಕ್ಕ ಮಕ್ಕಳಿಂದ ಹಿಡಿದು ತೀರಾ ವಯಸ್ಸಾದ ವ್ಯಕ್ತಿಗಳ ವರೆಗೆ ಮಲಬದ್ಧತೆಯ (ಕಾನಸ್ಟೀಪೇಶನ್) ತೊಂದರೆ ಬಹಳಷ್ಟು ಪ್ರಮಾಣದಲ್ಲಿ ಕಾಣಿಸುತ್ತದೆ. ಅದಕ್ಕಾಗಿ ತಮ್ಮ ಮನಸ್ಸಿನಂತೆ ಮನೆಯಲ್ಲಿಯೇ ಬಹಳಷ್ಟು ಬೇರೆ ಬೇರೆ ಔಷಧಿಗಳನ್ನು ತೆಗೆದುಕೊಂಡು ಉಪಚಾರವನ್ನು ಮಾಡುತ್ತಾರೆ. ಒಂದೆರಡು ಬಾರಿ ಅದರಿಂದ ಲಾಭ ಆಗುತ್ತದೆ; ಆದರೆ ನಂತರ ಈ ಸಮಸ್ಯೆ ಮೇಲಿಂದ ಮೇಲೆ ಆಗುತ್ತಲೇ ಇರುತ್ತದೆ. ಬಹಳಷ್ಟು ರೋಗಿಗಳಿಗೆ, ಬೆಳಗ್ಗೆ ಚಹಾ, ಕಾಫಿ, ಬಿಸಿ ನೀರು ಕುಡಿಯದ ಹೊರತು ಹೊಟ್ಟೆ ಸ್ವಚ್ಛವಾಗುವುದಿಲ್ಲ. ಇದಕ್ಕಿಂತಲೂ ಕೆಟ್ಟ ಸ್ಥಿತಿ ಎಂದರೆ ಸಿಗರೇಟ್‌ ಸೇದುವುದು, ತಂಬಾಕು ತಿನ್ನುವುದು ಅಥವಾ ತಂಬಾಕನ್ನು ಹಲ್ಲುಗಳಿಗೆ ಉಜ್ಜಿಕೊಳ್ಳದಿದ್ದರೆ ಕೆಲವು ಜನರಿಗೆ ಮಲವಿಸರ್ಜನೆಯ ಸಂವೇದನೆಗಳೇ ಬರುವುದಿಲ್ಲ. ಇವೆಲ್ಲ ನಮ್ಮ ಆರೋಗ್ಯ ಹದಗೆಡುತ್ತಿರುವುದರ ಲಕ್ಷಣವಾಗಿದೆ. ನಾವು, ಏನು ಬೇಕಾದರು ಮತ್ತು ಎಷ್ಟು ಬೇಕಾದರೂ ತಿನ್ನಿರಿ, ಮತ್ತು ರಾತ್ರಿ ಒಂದು ಮಾತ್ರೆಯನ್ನು ತೆಗೆದುಕೊಂಡರೆ ಸಾಕು ಬೆಳಗ್ಗೆ ಹೊಟ್ಟೆ ಸ್ವಚ್ಛವಾಗುತ್ತದೆ, ಎಂಬಂತಹ ಜಾಹಿರಾತುಗಳಿಗೆ ಮರುಳಾಗುತ್ತೇವೆ. ‘ಆರಂಭದಲ್ಲಿ ಒಂದು ಮಾತ್ರೆಯಿಂದ ಹೊಟ್ಟೆ ಸ್ವಚ್ಛವಾಗುತ್ತದೆ; ಆದರೆ ನಂತರ ಎರಡು ಮಾತ್ರೆಗಳನ್ನು ತೆಗೆದುಕೊಂಡರೂ ಹೊಟ್ಟೆ ಸ್ವಚ್ಛವಾಗುವುದಿಲ್ಲ’, ಎಂಬುದು ಪ್ರತ್ಯಕ್ಷ ಕಂಡು ಬರುತ್ತದೆ. ಇಂತಹ ಮಾತ್ರೆಗಳ ಅಭ್ಯಾಸ (ಸವಯ) ಆದವರು ತಕ್ಷಣ ತಮ್ಮ ದಿನಚರಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡು ಯೋಗ್ಯ ಔಷೋಧಪಚಾರವನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಇಂದಿನ ಲೇಖನದಲ್ಲಿ ನಾವು ಈ ವಿಷಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವವರಿದ್ದೇವೆ. ಮನೆಮದ್ದುಗಳಿಂದ ಮಲಬದ್ಧತೆಯ ತೊಂದರೆ ಕಡಿಮೆ ಆಗದಿದ್ದರೆ ವೈದ್ಯರ ಸಲಹೆ ಪಡೆದು ಅವರು ಹೇಳಿದ ಔಷಧಿಗಳನ್ನು ತೆಗೆದುಕೊಳ್ಳಬೇಕು.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೧. ಮಲಬದ್ಧತೆಯ ಕಾರಣಗಳು ಮೊದಲು ನಮಗೆ ಮಲಬದ್ಧತೆ ಏಕೆ ಆಗುತ್ತದೆ ? ಎಂಬುದರ ಕಾರಣಗಳನ್ನು ಕಂಡು ಹಿಡಿಯಬೇಕು; ಏಕೆಂದರೆ ಮಲಬದ್ಧತೆಗೆ ಕಾರಣವಾಗಿರುವ ಘಟಕಗಳನ್ನು ನಾವು ದೂರ ಮಾಡದಿದ್ದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ನಮಗೆ ಅದರ ಶಾಶ್ವತ ಲಾಭವಾಗಲಾರದು.

ಅ. ಮೊದಲನೇಯ ಮತ್ತು ಎಲ್ಲಕ್ಕಿಂತ ಮಹತ್ವದ ಕಾರಣ ವೆಂದರೆ ವಿರುದ್ಧ ಆಹಾರಗಳನ್ನು ಸೇವಿಸುವುದು ಮತ್ತು ಮೊದಲ ಆಹಾರ ಜೀರ್ಣವಾಗುವ ಮೊದಲೇ ಮತ್ತೆ ಮೇಲಿಂದ ಮೇಲೆ ತಿನ್ನುತ್ತಿರುವುದು. ವಿರುದ್ಧ ಆಹಾರ ವೆಂದರೇನು ? ಹಾಲು ಮತ್ತು ಹಣ್ಣುಗಳನ್ನು ಒಟ್ಟಿಗೆ ತಿನ್ನು ವುದು, ಬಿರ್ಯಾನಿಯಂತಹ ಮಾಂಸಾಹಾರ ಪದಾರ್ಥಕ್ಕೆ ಮೊಸರನ್ನು ಹಚ್ಚಿ ನಂತರ ಎಣ್ಣೆಯಲ್ಲಿ ತಿರುವುದು; ಪನೀರ್‌ನಿಂದ ತಯಾರಿಸಲಾದ ಮಸಾಲೆಯುಕ್ತ ಪಲ್ಯ ಗಳು, ಇದರಲ್ಲಿನ ಪನೀರ್‌ನ್ನು ಹಾಲನ್ನು ಕೆಡಿಸಿ ತಯಾರಿಸ ಲಾಗುತ್ತದೆ. ಇವೆಲ್ಲವೂ ವಿರುದ್ಧ ಆಹಾರವಾಗಿವೆ. ಮೇಲಿಂದ ಮೇಲೆ ತಿನ್ನುವುದು ಎಂದರೇನು ? ಹಸಿವಿಲ್ಲದಿರುವಾಗ ಯಾವುದಾದರೊಂದನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನುವುದು.

ಆ. ಹುಳಿ ತರಿಸಿದ ಪದಾರ್ಥ ಮತ್ತು ಜೀರ್ಣವಾಗಲು ಜಡ ವಾಗಿರುವ (ಕಠಿಣ) ಆಹಾರವನ್ನು ಹೆಚ್ಚು ತಿನ್ನುವುದು, ಬೇಕರಿಯ ಪದಾರ್ಥಗಳು, ಇಡ್ಲಿ, ದೋಸೆ, ಎಣ್ಣೆಯುಕ್ತ ಪದಾರ್ಥ ಗಳು, ಚೀಜ್, ಪನೀರ್‌ ಇವುಗಳಂತಹ ಪದಾರ್ಥ ಗಳು, ಹಾಗೆಯೇ ಮಾಂಸಾಹಾರದಂತಹ ಆಹಾರ ಗಳು ಜೀರ್ಣವಾಗಲು ಜಡವಾಗಿರುತ್ತವೆ. ಇಂತಹ ಆಹಾರ ಗಳನ್ನು ಬಹಳ ಹೆಚ್ಚು ಪ್ರಮಾಣದಲ್ಲಿ ತಿಂದರೆ ಮಲಬದ್ಧತೆಯಾಗುತ್ತದೆ.

ಇ. ರಾತ್ರಿ ಜಾಗರಣೆ ಮಾಡುವುದು, ಇದು ಮಲಬದ್ಧತೆಗೆ ಮುಖ್ಯ ಕಾರಣವಾಗಿದೆ. ಬೇಗನೆ ಮಲಗಿ ಬೆಳಗ್ಗೆ ಬೇಗನೆ ಎದ್ದರೆ ಹೊಟ್ಟೆ ಸ್ವಚ್ಛವಾಗಲು ಸಹಾಯವಾಗುತ್ತದೆ.

ಈ. ಊಟವಾದ ನಂತರ ತಕ್ಷಣ ಮಲಗಿದರೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದುದರಿಂದ ಊಟದ ನಂತರ ತಕ್ಷಣ ಮಲಗಬಾರದು.

ಉ. ಕ್ಷಮತೆಗಿಂತ ಬಹಳ ಹೆಚ್ಚು ವ್ಯಾಯಾಮ ಮಾಡುವುದು ಅಥವಾ ವ್ಯಾಯಾಮವನ್ನೇ ಮಾಡದಿರುವುದು, ಇದು ಸಹ ಮಲಬದ್ಧತೆಯನ್ನುಂಟು ಮಾಡುತ್ತದೆ. ವ್ಯಾಯಾಮ ಮಾಡ ದಿರುವುದರಿಂದ ಶರೀರದ ಚಲನವಲನವಾಗುವುದಿಲ್ಲ, ಇದರಿಂದ ಜಠರಾಗ್ನಿಯು ಪ್ರಜ್ವಲಿಸುವುದಿಲ್ಲ ಮತ್ತು ಹೊಟ್ಟೆ ಸ್ವಚ್ಛವಾಗದಿರುವ ಸಮಸ್ಯೆ ಉಂಟಾಗುತ್ತದೆ.

ಊ. ನಮ್ಮ ಶರೀರ ನಮಗೆ ವಿವಿಧ ಸಂವೇದನೆಗಳ ಮೂಲಕ, ಮಲವನ್ನು ಯಾವ ಸಮಯದಲ್ಲಿ ವಿಸರ್ಜಿಸಬೇಕು, ಎಂದು ಅರಿವು ಮಾಡಿಕೊಡುತ್ತಿರುತ್ತದೆ. ಬೆಳಗ್ಗೆ ಶಾಲೆ, ವಿಶ್ವ ವಿದ್ಯಾಲಯ, ಕಚೇರಿ ಇತ್ಯಾದಿಗಳಿಗೆ ಹೋಗುವ ಗಡಿಬಿಡಿ ಇರುತ್ತದೆ. ಇಂತಹ ಗಡಿಬಿಡಿಯಲ್ಲಿ ನಾವು ನಮ್ಮ ಶರೀರದ ಸಂವೇದನೆಗಳ ಕಡೆಗೆ ದುರ್ಲಕ್ಷ ಮಾಡುತ್ತೇವೆ ಮತ್ತು ಅದರ ಪರಿಣಾಮದಿಂದ ಹೊಟ್ಟೆ ಸ್ವಚ್ಛವಾಗುವುದಿಲ್ಲ.

೨. ಹೊಟ್ಟೆ ಸ್ವಚ್ಛವಾಗದಿದ್ದರೆ ಕಂಡು ಬರುವ ಲಕ್ಷಣಗಳು

ಹೊಟ್ಟೆ ಸ್ವಚ್ಛವಾಗದಿದ್ದರೆ ನಮಗೆ ಮುಂದಿನ ಲಕ್ಷಣಗಳು ಕಾಣಿಸುತ್ತವೆ.

ಅ. ಹಸಿವು ಮಂದವಾಗುವುದು.

ಆ. ಮಲವಿಸರ್ಜನೆಯ ಸಮಯದಲ್ಲಿ ತುಂಬಾ ಒತ್ತಡ ಹಾಕಬೇಕಾಗುವುದು.

ಇ. ಅಜೀರ್ಣ, ಹುಳಿ ತೇಗುಗಳು ಬರುವುದು, ಹೊಟ್ಟೆ ತೊಳೆಸಿದಂತಾಗುವುದು, ಹೊಟ್ಟೆ ನೋಯಿಸುವುದು, ಹೊಟ್ಟೆ ಭಾರವಾಗುವುದು.

ಈ. ಎದೆಯಲ್ಲಿ ಉರಿಯುವುದು, ತಲೆ ನೋಯಿಸುವುದು, ನಿದ್ದೆ ಬಾರದಿರುವುದು.

ಉ. ಉತ್ಸಾಹ ಕಡಿಮೆಯಾಗುವುದು, ಸ್ವಭಾವ ತ್ರಾಸದಾಯಕ ಮತ್ತು ಸಿಡಿಮಿಡಿಗೊಳ್ಳುವುದು, ಇಂತಹ ಲಕ್ಷಣಗಳು ಶರೀರದಲ್ಲಿ ಉತ್ಪನ್ನವಾಗುತ್ತವೆ. ಮಲಬದ್ಧತೆಯ ತೊಂದರೆಗೆ ಸಮಯಕ್ಕೆ ಸರಿಯಾಗಿ ಉಪಾಯ ಮಾಡದಿದ್ದರೆ ಮುಂದೆ ನಿದ್ರಾನಾಶ, ತಲೆನೋವು, ಮೂಲವ್ಯಾಧಿಯಂತಹ ತೊಂದರೆಗಳು ಉತ್ಪನ್ನವಾಗುತ್ತವೆ.

೩. ಮಲಬದ್ಧತೆಯನ್ನು ದೂರ ಮಾಡಲು ದಿನಚರಿಯಲ್ಲಿ ಮಾಡಬೇಕಾದ ಬದಲಾವಣೆ

ಈಗ ಇದಕ್ಕೆ ಯಾವ ಉಪಾಯ ಮಾಡಬಹುದು, ಎಂಬುದನ್ನು ಇಲ್ಲಿ ನೀಡುತ್ತಿದ್ದೇವೆ:

ಅ. ತುಂಬಾ ಹಸಿವಾದಾಗ ಒಂದು ಪ್ರಮಾಣದಲ್ಲಿ ಊಟ ಮಾಡಬೇಕು ! : ಎರಡು ತುತ್ತು ಕಡಿಮೆ ಊಟ ಮಾಡಬೇಕು. ತೀರಾ ಹೊಟ್ಟೆತುಂಬಿ ಮೇಲೆ ಬರುವವರೆಗೆ ಊಟ ಮಾಡ ಬಾರದು. ನಮ್ಮ ಶರೀರದ ಸಂವೇದನೆಗಳ ಕಡೆಗೆ ಗಮನ ಇಡಬೇಕು. ಕೇವಲ ಊಟದ ಸಮಯವಾಯಿತೆಂದು ಊಟಕ್ಕೆ ಕುಳಿತುಕೊಳ್ಳಬಾರದು, ಇದು ಅಯೋಗ್ಯವಾಗಿದೆ. ನಿಜವಾಗಿಯೂ ನಮಗೆ ಹಸಿವೆ ಆಗಿದೆಯೇ ? ಎಂದು ನೋಡಿ ನಂತರವೇ ಊಟ ಮಾಡಬೇಕು. ಅದೇ ರೀತಿ ನಮ್ಮ ಹೊಟ್ಟೆ ತುಂಬಿದಾಗ ನಿಲ್ಲಿಸಬೇಕು.

ಆ. ಕುಳಿತು ಕೆಲಸ ಮಾಡುವವರು ವ್ಯಾಯಾಮದ ಆಯೋಜನೆ ಮಾಡಬೇಕು. ಇದರಲ್ಲಿ ಯೋಗಾಸನಗಳಿಂದ ಬಹಳ ಒಳ್ಳೆಯ ಲಾಭವಾಗುತ್ತದೆ. ಪಶ್ಚಿಮೋತ್ತನಾಸನ, ವಜ್ರಾಸನ, ಮಲಾಸನ, ಪವನಮುಕ್ತಾಸನ ಈ ಆಸನಗಳನ್ನು ನಿಯಮಿತ ಮಾಡಬೇಕು.

ಇ. ಆಹಾರದಲ್ಲಿ ವಾರದಲ್ಲಿ ಏನಿಲ್ಲೆಂದರೂ ಒಂದು ಸಲ ವಾದರೂ ಕಾಯಿಪಲ್ಲೆ ಇರಬೇಕು; ಆದರೆ ಕಾಯಿಪಲ್ಲೆಗಳನ್ನು ತಿನ್ನುವಾಗ ಅದನ್ನು ಬೇಯಿಸಿಯೇ ತಿನ್ನಬೇಕು. ಊಟದಲ್ಲಿ ಕೊಸಂಬರಿ ಇರಬೇಕು; ಆದರೆ ಕೊಸಂಬರಿಯನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಬಾರದು. ಒಂದು ಸಮಯದ ಭೋಜನ ದಲ್ಲಿ ಜೋಳದ ರೊಟ್ಟಿ ಇರಬೇಕು. ಹಣ್ಣುಗಳಲ್ಲಿ ಪಪಾಯಿ, ದ್ರಾಕ್ಷಿ, ಅಂಜೂರ ಹಣ್ಣು, ಒಣದ್ರಾಕ್ಷಿ ಇವು ಇರಬೇಕು.

ಈ. ರಾತ್ರಿಯ ಜಾಗರಣೆಯನ್ನು ಸಂಪೂರ್ಣ ನಿಲ್ಲಿಸಿ ಬೆಳಗ್ಗೆ ಸಾಧ್ಯವಿದ್ದಷ್ಟು ಬೇಗನೆ ಏಳಲು ಪ್ರಯತ್ನಿಸಬೇಕು. ಮಧ್ಯಾಹ್ನ ಮಲಗಬಾರದು. ವಯಸ್ಸಾದ ವ್ಯಕ್ತಿಗಳು ವಿಶ್ರಾಂತಿ ತೆಗೆದುಕೊಳ್ಳುವುದಿದ್ದರೆ ಅವರು ೧೫ ರಿಂದ ೨೦ ನಿಮಿಷಗಳ ಕಾಲ ಎಡ ಮಗ್ಗುಲಲ್ಲಿ ಮಲಗಬೇಕು. ಚಿಕ್ಕ ಮಕ್ಕಳು ಮತ್ತು ವಯಸ್ಸಾದವರನ್ನು ಬಿಟ್ಟರೆ ಇತರರು ಮಧ್ಯಾಹ್ನ ಮಲಗ ಬಾರದು. ರಾತ್ರಿಯ ನಿದ್ದೆ ಪೂರ್ಣವಾದರೆ ಮಧ್ಯಾಹ್ನ ಮಲಗುವ ಆವಶ್ಯಕತೆ ಇರುವುದಿಲ್ಲ.

ಉ. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಯಾರಿಗೆ ಸಾಧ್ಯವಿದೆಯೋ ಅವರು ಬೆಚ್ಚಗಿನ ನೀರನ್ನು ಕುಡಿಯಬೇಕು. ಭೋಜನದ ಮೊದಲು ಅಥವಾ ಭೋಜನದ ನಂತರ ತಕ್ಷಣ ಬಹಳಷ್ಟು ನೀರು ಕುಡಿಯಬಾರದು. ಭೋಜನದ ನಡುವೆ ಸ್ವಲ್ಪ ಸ್ವಲ್ಪ ನೀರು ಕುಡಿಯಬಹುದು.

ಊ. ಮೊಸರನ್ನು ತಿನ್ನಬಾರದು. ಅದರ ಬದಲು ಮಜ್ಜಿಗೆ ಅಥವಾ ಪಳದೆ (ಮಜ್ಜಿಗೆಹುಳಿ)ಯನ್ನು ಸೇವಿಸಬಹುದು.

೪. ಮಲಬದ್ಧತೆಯ ತೊಂದರೆಗೆ ಪರಿಹಾರೋಪಾಯ

ಯಾರಿಗೆ ಪದೇಪದೇ ಮಲಬದ್ಧತೆಯ ತೊಂದರೆ ಆಗುತ್ತದೆಯೋ, ಅವರು ಮೊದಲು ತಮ್ಮ ದಿನಚರಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಈ ಬದಲಾವಣೆ ಮಾಡಿಯೂ ಮಲಬದ್ಧತೆಯ ತೊಂದರೆಯಾಗುತ್ತಿದ್ದರೆ, ಮುಂದಿನ ಸುಲಭ ಉಪಾಯಗಳನ್ನು ಮಾಡಿ ನೋಡಬೇಕು. – ವೈದ್ಯೆ (ಸೌ.) ಮುಕ್ತಾ ಲೋಟಲೀಕರ್‌

ಅ. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ೧೨ ರಿಂದ ೧೫ ಕಪ್ಪು ಒಣ ದ್ರಾಕ್ಷಿಗಳನ್ನು ಜಗಿದು ತಿನ್ನಬೇಕು.

ಆ. ಶರೀರದಲ್ಲಿ ಬಹಳ ಉಷ್ಣತೆ ಮತ್ತು ಮಲಬದ್ಧತೆ ಇದ್ದರೆ ಅರ್ಧದಿಂದ ೧ ಚಮಚದಷ್ಟು ತುಳಸಿಯ ಬೀಜಗಳನ್ನು ಅರ್ಧ ಲೋಟ ನೀರಿನಲ್ಲಿ ನೆನೆಸಿ ತಿನ್ನಬೇಕು.

ಇ. ರಾತ್ರಿ ಮಲಗುವಾಗ ಅರ್ಧ ಕಪ್‌ ಬಿಸಿ ಹಾಲಿನಲ್ಲಿ ೨ ಚಮಚ ತುಪ್ಪವನ್ನು ಹಾಕಿ ಕುಡಿಯಬೇಕು.

ಈ. ‘ಸತ್₿ಸಾಬಗೋಲ್’ (ಕಾಮಕಸ್ತೂರಿಬೀಜ) ಹೆಸರಿನ ಪುಡಿಯು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಒಂದು ಚಮಚ ಪುಡಿಯನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಕುಡಿಯಬೇಕು.

ಉ. ಮಾರುಕಟ್ಟೆಯಲ್ಲಿ ಸಿಗುವ ಹೊಟ್ಟೆ ಸ್ವಚ್ಛ ಮಾಡುವ ಔಷಧಿಗಳನ್ನು ವಾರದಲ್ಲಿ ಒಂದು ಸಲ ತೊಂದರೆಯಾದಾಗ ತೆಗೆದುಕೊಳ್ಳಲು ಅಡ್ಡಿ ಇಲ್ಲ; ಆದರೆ ಇಂತಹ ಔಷಧಿಗಳ ಅಭ್ಯಾಸವಾಗಿದ್ದರೆ, ಮಾತ್ರ ವೈದ್ಯರ ಸಲಹೆಯಂತೆ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

ಊ. ಯಾರಿಗೆ ಇಂತಹ ಔಷಧಿಗಳ ಅಭ್ಯಾಸವಾಗಿದೆಯೋ, ಹಾಗೆಯೇ ಮಲಬದ್ಧತೆಯ ತೊಂದರೆ ಬಹಳ ಹಳೆಯದಾಗಿದೆಯೋ, ಅಂತವರಿಗಾಗಿ ಪಂಚಕರ್ಮದಲ್ಲಿನ ಬಸ್ತಿಯ ಒಳ್ಳೆಯ ಉಪಯೋಗವಾಗುತ್ತದೆ.

ಈ ಎಲ್ಲ ಉಪಚಾರಗಳೊಂದಿಗೆ ಆಗಾಗ ವೈದ್ಯರ ಸಲಹೆ ಪಡೆದುಕೊಂಡರೆ ಲಾಭವಾಗುತ್ತದೆ.

– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ. (೧೭.೧೦.೨೦೨೩)