‘ಸರ್ವಧರ್ಮಸಮಭಾವ’ದ ಕನಸು ಕಾಣುವ ಸಮಾಜವು ಇದರಿಂದ ಏನಾದರೂ ಪಾಠ ಕಲಿಯಬಹುದೇ ?

ಒಂದು ನ್ಯಾಯಾಲಯದಲ್ಲಿ ಒಂದು ಜಾಮೀನು ಅರ್ಜಿಯ ಆಲಿಕೆಯಾಗುವಾಗ ಸಂತ್ರಸ್ತ ವ್ಯಕ್ತಿ ಸರ್ವಧರ್ಮ ಸಮಭಾವದ ಹಗಲುಗನಸು ಕಾಣುವ ವ್ಯಕ್ತಿಯಾಗಿದ್ದನು. ಅವನನ್ನು ಗಂಭೀರ ಸ್ವರೂಪದಲ್ಲಿ ಥಳಿಸಲಾಗಿತ್ತು ಹಾಗೂ ಅವನ ದೂರಿನಲ್ಲಿ ಶಸ್ತ್ರದಿಂದ ಥಳಿಸಿದ ಉಲ್ಲೇಖವಿತ್ತು; ಆದರೆ ಇದರಲ್ಲಿ ಆರೋಪಿ ಮತಾಂಧ ಹಾಗೂ ಯಾರಲ್ಲಿ ಈ ಪ್ರಕರಣದ ಆಲಿಕೆ ನಡೆದಿತ್ತೊ, ಆ ನ್ಯಾಯಾಧೀಶರು ಕೂಡ ಆ ಆರೋಪಿಯ ಪಂಥದವರೆ ಆಗಿದ್ದರು. ಈ ನ್ಯಾಯಾಧೀಶರು ತಮ್ಮ ಧರ್ಮಪ್ರೇಮವನ್ನು ತೋರಿಸುತ್ತಾ ನೇರವಾಗಿ ಆರೋಪಿಯ ಪರವಾಗಿ ನಿರ್ಣಯ ನೀಡಿದರು. ಇಷ್ಟು ಮಾತ್ರವಲ್ಲ, ಈ ಪ್ರಕರಣದ ತನಿಖೆಯಾಗುವಾಗ ‘ಭಾರತೀಯ ದಂಡಸಂಹಿತೆಯ ಮೃದುವಾದ ಕಲಮ್‌ ಅನ್ವಯ ಗೊಳಿಸಬೇಕೆಂದು’ ಆ ನ್ಯಾಯಾಧೀಶರು ಹೇಳಿದರು. ನಿಜವಾಗಿಯೂ ಪೊಲೀಸರು ಯೋಗ್ಯವಾದ ಕಲಮ್‌ ಅನ್ವಯಗೊಳಿಸಿದ್ದರೂ ಅವರು ಅದರಲ್ಲಿ ಸಂಶಯ ವ್ಯಕ್ತಪಡಿಸಿದರು.

ಇನ್ನೊಂದು ಪ್ರಸಂಗದಲ್ಲಿ ವಕೀಲ ಹಾಗೂ ನ್ಯಾಯಾಧೀಶರು ಒಂದೇ ಪಂಥದವರಾಗಿದ್ದರು. ಆಗ ‘ಸರ್ವಧರ್ಮಸಮಭಾವದ ಹಗಲುಗನಸು ಕಾಣುವ’ ಈ ವಕೀಲರಿಂದ ಆಯಾ ಪಂಥದ ಸೌಲಭ್ಯಗಳ ಬಗ್ಗೆ ವಿಶೇಷ ವಿಚಾರ ಮಾಡಿದರು. ಮೂಲಭೂತವಾದವು ಕೇವಲ ರಾಜಕಾರಣದಲ್ಲಿಯೆ ಇದೆ’, ಎಂದು ಹೇಳಲು ಸಾಧ್ಯವಿಲ್ಲ. ಈಗ ಅದು ನ್ಯಾಯಪಾಲಿಕೆಯಲ್ಲಿಯೂ ಸಂಚರಿಸುತ್ತಿರುವ ಚಿಹ್ನೆಗಳು ಕಾಣಿಸುತ್ತಿವೆ; ಆದರೆ ಇದೆಲ್ಲವನ್ನೂ ‘ಸರ್ವಧರ್ಮಸಮಭಾವ’ದ ಹೆಸರಿನಲ್ಲಿ ಶಾಂತವಾಗಿ ನೋಡುತ್ತಾ ಇರಬೇಕು.
– ಓರ್ವ ಧರ್ಮಪ್ರೇಮಿ ನ್ಯಾಯವಾದಿ (ಅಕ್ಟೋಬರ್‌ ೨೦೨೩)