ಕತಾರನ ಸೊಕ್ಕು ಮುರಿಯುವರೇ ?

ಕತಾರ್‌ ನ್ಯಾಯಾಲಯವು ಭಾರತೀಯ ನೌಕಾಪಡೆಯ ೮ ಮಾಜಿ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ. ಅವರು ರಕ್ಷಣಾ ಸಂಸ್ಥೆಯಾದ ‘ಅಲ್‌ ದಾಹರಾ ಗ್ಲೋಬಲ್‌ ಟೆಕ್ನಾಲಜಿ ಮತ್ತು ಕನ್ಸಲ್ಟಿಂಗ್‌ ಸರ್ವಿಸಸ್‌’ನಲ್ಲಿ ಕೆಲಸ ಮಾಡುತ್ತಿದ್ದರು. ಭಾರತೀಯ ಅಧಿಕಾರಿಗಳಿಗೆ ನೀಡಿರುವ ಶಿಕ್ಷೆಯಿಂದ ಭಾರತೀಯರ ಜೊತೆಗೆ ಭಾರತ ಸರಕಾರಕ್ಕೂ ಆಘಾತವಾಗಿದೆ. ಈ ಮಾಜಿ ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ ಎಂದು ಕಡಿಮೆ ಪಕ್ಷ ಕಲ್ಪನೆಯನ್ನು ಕೂಡ ಭಾರತ ಸರಕಾರ ಅಥವಾ ಅವರ ಕುಟುಂಬಗಳಿಗೆ ನೀಡಿರಲಿಲ್ಲ.

ಅತ್ಯಂತ ಗೌಪ್ಯವಾಗಿ ನಡೆದ ಈ ವಿಚಾರಣೆಯ ಬಗ್ಗೆ ಭಾರತ ದೇಶದ ನಾಗರಿಕರೆಂಬ ಕಾರಣಕ್ಕೆ ಭಾರತ ಸರಕಾರಕ್ಕೆ ಮಾಹಿತಿನೀಡಬೇಕಿತ್ತು ಎಂದು ಹೇಳಲಾಗುತ್ತಿದೆ. ಮಾಜಿ ಅಧಿಕಾರಿಗಳನ್ನು ಬಂಧಿಸಿದ ಸುಮಾರು ಒಂದು ತಿಂಗಳ ನಂತರ, ಕತಾರ್‌ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆ. ‘ಕತಾರ ಈ ಭಾರತೀಯ ಅಧಿಕಾರಿಗಳನ್ನು ಅಕ್ರಮವಾಗಿ ಬಂಧಿಸಿತ್ತು’ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನವು ತಲೆ ಕೆಡಿಸಿರುವ ಸಾಧ್ಯತೆ

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಈ ಮಾಜಿ ಅಧಿಕಾರಿಗಳು ಇಸ್ರೈಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದರು, ಅಂದರೆ ಅವರು ಅದನ್ನು ಸಂಸ್ಥೆಯ ಪರವಾಗಿ ಮಾಡುತ್ತಿರ ಬಹುದು ಅಥವಾ ಇತರ ವಿಷಯಗಳು ಇದರಲ್ಲಿ ಇರಬಹುದು. ಇನ್ನೂ ಕೆಲವರ ಹೇಳಿಕೆಯಂತೆ ಕತಾರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಾಜಿ ಪಾಕಿಸ್ತಾನಿ ಅಧಿಕಾರಿಗಳ ಸ್ಥಾನದಲ್ಲಿ ಭಾರತೀಯ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕತಾರನ ತಲೆ ಕೆಡಿಸಿ ಕುಲಭೂಷಣ್‌ ಜಾಧವರ ಮೇಲೆ ಆರೋಪ ಹೊರಿಸಿದಂತೆ ಭಾರತೀಯ ಅಧಿಕಾರಿಗಳ ಮೇಲೆ ಬೇಹುಗಾರಿಕೆಯ ಆರೋಪ ಹೊರಿಸಲು ಕತಾರ್‌ಗೆ ಪಾಕಿಸ್ತಾನ ಪ್ರಚೋದನೆ ನೀಡುತ್ತಿದೆ. ಇದೀಗ ಭಾರತವು ಈ ವಿಷಯಕ್ಕೆ ತುರ್ತು ಮಹತ್ವ ನೀಡಿ ಕಾನೂನು ಪ್ರಕ್ರಿಯೆಯ ಅಧ್ಯಯನ ಮಾಡಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.

ಮೂಲಭೂತವಾದಿ ಇಸ್ಲಾಮಿಕ್‌ ದೇಶ

ಮೂಲಭೂತವಾದಿ ಇಸ್ಲಾಮಿಕ್‌ ದೇಶ ಎಂಬ ಇತಿಹಾಸ ಇರುವ ಕತಾರ್‌ನಲ್ಲಿ ಶರಿಯಾ ಕಾನೂನು ಜಾರಿಯಲ್ಲಿದೆ. ಕತಾರ್‌ನ ಜನಸಂಖ್ಯೆಯು ಸುಮಾರು ೨೭ ಲಕ್ಷದ ೧೬ ಸಾವಿರ ಮತ್ತು ಮುಸಲ್ಮಾನರು ಈ ದೇಶದ ಜನಸಂಖ್ಯೆಯ ಶೇಕಡಾ ೬೫ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ರಾಜನು ರಾಷ್ಟ್ರಪ್ರಮುಖನಾಗಿದ್ದಾನೆ. ಜಗತ್ತಿನಲ್ಲಿ ಒಟ್ಟು ಆದಾಯದಲ್ಲಿ ಕತಾರ್‌ ‘೧ ನೇ ಕ್ರಮಾಂಕ’ದಲ್ಲಿ ಅಂದರೆ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಖನಿಜ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳು ಕತಾರನಲ್ಲಿವೆ. ಭಾರತವು ಸಹ ಕತಾರನಿಂದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಆಗಿನ ಬಿಜೆಪಿ ವಕ್ತಾರರಾದ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ ಪೈಗಂಬರ ಅವರನ್ನು ಅವಮಾನಿಸಿರುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕತಾರ್‌ ಮೊದಲು ಖಂಡನೆಯನ್ನು ವ್ಯಕ್ತಪಡಿಸಿತ್ತು ಮತ್ತು ಈ ವಿಷಯದಲ್ಲಿ ಭಾರತ ಸರಕಾರ ಕ್ಷಮೆಯಾಚಿಸು ವಂತೆ ಕೇಳಿಕೊಂಡಿತ್ತು. ಭಾರತ ಮತ್ತು ಕತಾರ್‌ ನಡುವಿನ ಸಂಬಂಧಗಳನ್ನು ಸ್ನೇಹಪರವಾಗಿದೆಯೆಂದು ಪರಿಗಣಿಸ ಲಾಗುತ್ತದೆ; ಆದರೆ ಈ ಪ್ರಕರಣದಿಂದ ಅವರು ಎಷ್ಟು ಸ್ನೇಹಪರರಾಗಿದ್ದಾರೆ ? ಎನ್ನುವುದು ಪ್ರಶ್ನೆಯೇ ಆಗಿದೆ.

ಭಯೋತ್ಪಾದಕರ ಹಣಕಾಸು ಪೂರೈಕೆದಾರ ?

ಇಸ್ರೈಲ್‌ ಮತ್ತು ಹಮಾಸ್‌ ನಡುವಿನ ಯುದ್ಧದ ಕಾರಣದಿಂದ ಮಧ್ಯಪ್ರಾಚ್ಯದ ಸಮೀಕರಣಗಳು ಬದಲಾಗುತ್ತ ನಡೆದಿದೆ. ಇಂದು ಇಸ್ರೈಲ್‌ ಮತ್ತು ಹಮಾಸ್‌ ನಡುವಿನ ಯುದ್ಧದ ಕಡೆಗೆ ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಗಮನ ನೆಟ್ಟಿದೆ. ಇಸ್ರೈಲ್‌ ಪೂರ್ಣ ಕ್ಷಮತೆಯಿಂದ ಹಮಾಸ್‌ನ ಸೊಕ್ಕು ಮುರಿಯಲು ಹೆಚ್ಚು ತೀವ್ರವಾದ ದಾಳಿಗಳನ್ನು ಗಾಜಾ ಪಟ್ಟಿಯಲ್ಲಿ ನಡೆಸುತ್ತಿದೆ. ಇದರಿಂದ ಕತಾರ್‌ ‘ಜನರನ್ನು ಕೊಲ್ಲಲು ಅನಿಯಂತ್ರಿತ ಅಧಿಕಾರ ಇಸ್ರೈಲ್‌ಗೆ ಸಿಗಬಾರದು’ ಎಂದು ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಿದೆ. ಕತಾರ ದೇಶವು ಹಮಾಸ ಮತ್ತು ಅಮೇರಿಕಾದೊಂದಿಗೆ ಈ ಯುದ್ಧದ ಕುರಿತು ಮಾತುಕತೆ ನಡೆಸುತ್ತಿದೆ, ಇದರಿಂದ ಅದು ಒಂದೆಡೆ ಹಮಾಸ್‌ನೊಂದಿಗಿನ ತನ್ನ ಸಂಬಂಧಗಳನ್ನು ಉಳಿಸಿಕೊಳ್ಳಲು ಬಯಸುತ್ತದೆ ಮತ್ತು ಮತ್ತೊಂದೆಡೆ, ಅದು ಯುರೋಪ್‌ ಮತ್ತು ಅಮೇರಿಕಾ ದೇಶಗಳಿಗೂ ‘ಅದು ಅವರ ಪರವಾಗಿದೆ’ ಎಂದು ತೋರಿಸಲಿಕ್ಕಿದೆ. ಇದರ ಕಾರಣವೆಂದರೆ, ‘ಹಮಾಸ’ನ ಭಯೋತ್ಪಾದಕ ಸಂಘಟನೆಯ ರಾಜಕೀಯ ಕೇಂದ್ರ ಕಚೇರಿಯು ಕತಾರ್‌ ರಾಜಧಾನಿ ದೋಹಾದಲ್ಲಿ ಹಲವು ದಶಕ ಗಳಿಂದ ಕಾರ್ಯನಿರ್ವಹಿಸುತ್ತಿದೆ. ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ ಮತ್ತು ಖಾಲೆದ ಮಶಾಲ ಇವರ ಕಚೇರಿಯೂ ಕತಾರ್‌ನಲ್ಲಿಯೇ ಇದೆ ಮತ್ತು ಅಲ್ಲಿಯೇ ಆತಿಥ್ಯವನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ, ಈ ಯುದ್ಧದಿಂದ ಕತಾರ್‌ನ ಕೆಲವು ಬುದ್ಧಿಜೀವಿಗಳು ಈ ಯುದ್ಧದ ಬಗ್ಗೆ ಕತಾರ್‌ ಸರಕಾರವನ್ನು ಟೀಕಿಸಿದ್ದಾರೆ. ಹೀಗಿದ್ದರೂ ಕತಾರ್‌ ಒಂದು ಮೂಲಭೂತವಾದಿ ಇಸ್ಲಾಮಿಕ್‌ ರಾಷ್ಟ್ರವಾಗಿರು ವುದರಿಂದ ಅದೂ ಹಮಾಸ್‌ ಸಂಘಟನೆಯನ್ನು ಬಯಸುತ್ತದೆ.ಕತಾರ್‌ ಹಮಾಸ್‌ ಮತ್ತು ಇತರ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಇರಾನ್‌ ನಂತರ ಕತಾರ ದೇಶವೇ ಆರ್ಥಿಕ ನೆರವು ನೀಡುತ್ತದೆ ಎಂದು ಈ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ. ಕತಾರ್‌ ಸಾಕಷ್ಟು ಸಂಪತ್ತನ್ನು ಹೊಂದಿರುವುದರಿಂದ ಮತ್ತು ತನ್ನದೇ ಆದ ಸೈನ್ಯವನ್ನು ಹೊಂದಿಲ್ಲದ ಕಾರಣ, ಅದು ಇತರ ದೇಶಗಳಿಂದ ಬಾಡಿಗೆ ಸೈನ್ಯವನ್ನು ಕರೆಸುತ್ತದೆ. ಕತಾರ್‌ ಪ್ರಕಾರ, ‘ಹಮಾಸ್‌ ಇದು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಘಟನೆಯಾಗಿದೆ’. ಇಸ್ರೈಲ್‌ ಹಮಾಸ್‌ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಭಾರತ ಇಸ್ರೈಲ್‌ಗೆ ಬೆಂಬಲ ಘೋಷಿಸಿದೆ. ಅದೇ ಸಮಯದಲ್ಲಿ, ಗಾಝಾದ ನಾಗರಿಕರಿಗೆ ತುರ್ತು ಸಹಾಯ ವನ್ನು ಒದಗಿಸಲಾಗಿದೆ. ಭಾರತವು ದ್ವಂದ್ವ ನಿಲುವನ್ನು ತೋರಿಸಿದ್ದರೂ ಈ ಬಗ್ಗೆಯೂ ಕತಾರ್‌ ಭಾರತಕ್ಕೆ ಹೆಬ್ಬೆಟ್ಟು ತೋರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಬಹುದು.

ಭಾರತದ ಮುಂದಿರುವ ಸವಾಲು

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸುವ ಮೂಲಕ ಕತಾರ್‌ ಭಾರತಕ್ಕೆ ಸವಾಲೆಸಗಿದೆ ಎಂಬುದನ್ನು ಭಾರತ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈಗ ಭಾರತದ ರಾಜತಾಂತ್ರಿಕತೆಯ ಪರೀಕ್ಷೆಯಾಗಲಿಕ್ಕಿದೆ ? ಭಾರತವು ಜಿ-೨೦ ಶೃಂಗಸಭೆಯ ಸಮಯದಲ್ಲಿ ತನ್ನ ರಾಜತಾಂತ್ರಿಕ ಸಾಮರ್ಥ್ಯವನ್ನು ತೋರಿಸಿ ಮೊದಲನೇಯ ದಿನವೇ ಜಂಟಿ ಕಾರ್ಯ ಕ್ರಮವನ್ನು ಅಂತಿಮಗೊಳಿಸಿತು. ಈ ರಾಜತಾಂತ್ರಿಕತೆಯು ಕೆನಡಾ ವಿರುದ್ಧ ನಡೆಯುತ್ತಿರುವ ರಾಜತಾಂತ್ರಿಕ ಸಂಘರ್ಷ ದಲ್ಲಿಯೂ ಕಂಡು ಬಂದಿತು ಈಗ ಭಾರತ ಸರಕಾರವು ‘ಈ ಮಾಜಿ ಅಧಿಕಾರಿಗಳನ್ನು ಮರಣ ದಂಡನೆಯಿಂದ ಮುಕ್ತಗೊಳಿಸಬೇಕು’ ಎಂದು ಎಲ್ಲಾ ಪಕ್ಷಗಳ ನಾಯಕರು ಮತ್ತು ಭಾರತೀಯರು ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿ ಈ ನಿರ್ಧಾರವನ್ನು ಪ್ರಶ್ನಿಸಬೇಕೇ ? ಎನ್ನುವುದನ್ನು ಭಾರತವು ನಿರ್ಧರಿಸಬೇಕಾಗಿದೆ. ಮುಖ್ಯವಾಗಿ, ಡಿಸೆಂಬರ್‌ ೧೮ ಅನ್ನು ಕತಾರ್‌ನ ‘ರಾಷ್ಟ್ರೀಯ ದಿನ’ ಎಂದು ಆಚರಿಸಲಾಗುತ್ತದೆ. ಈ ದಿನದಂದು ಮರಣದಂಡನೆಗೆ ಗುರಿಯಾದವರಲ್ಲಿ ಕೆಲವರನ್ನು ಕತಾರ್‌ ರಾಜನು ದಯೆ ತೋರಿಸಿ ಮರಣದಂಡನೆಯ ಶಿಕ್ಷೆ ಯಿಂದ ಕ್ಷಮಿಸುತ್ತಾನೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಯಾವುದಾದರೂ ಪ್ರಯತ್ನಗಳು ನಡೆಯಬಹುದೇ ? ಎಂದು ಪರಿಶೀಲಿಸುವುದು ಮಹತ್ವದ್ದಾಗಿದೆ. ಕತಾರ್‌ ರಾಜ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡುವೆ ಉತ್ತಮ ಬಾಂಧವ್ಯವಿದೆ. ಈಗ ಭಾರತ ತನ್ನ ಶಕ್ತಿಯನ್ನು ಹೇಗೆ ಉಪಯೋಗಿಸುತ್ತದೆ ? ಎನ್ನುವುದು ಮುಂಬರುವ ಕೆಲವು ದಿನಗಳಲ್ಲಿ ತಿಳಿಯಬಹುದು, ಎಂಬ ಅಪೇಕ್ಷೆಯಿದೆ.