ಆರೋಪಿಯನ್ನು ಬಂಧಿಸಲು ಮುಸಲ್ಮಾನರಿಂದ ವಿರೋಧ !
ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿ ಮಣ್ಣಿನ ಹಣತೆ ಮಾರುವ ಓರ್ವ ಹುಡುಗಿಯ ಹಣತೆಗಳನ್ನು ಅಪರಿಚಿತನು ಒಡೆದಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಆ ಹುಡುಗಿಯಿಂದ ಈ ಮಾಹಿತಿ ನೀಡಿದ ನಂತರ ಪೊಲೀಸರು ಈ ವಿಡಿಯೋದ ಆಧಾರದಲ್ಲಿ ದೂರು ದಾಖಲಿಸಿಕೊಂಡು ಮಾಜಿದ್ ಎಂಬ ಆರೋಪಿಯನ್ನು ಬಂಧಿಸಿದರು. ಈ ವಿಡಿಯೋದ ಆಧಾರವಾಗಿ ಪೊಲೀಸರು ಮಾಜಿದನನ್ನು ಬಂಧಿಸುವುದಕ್ಕೆ ಹೋದಾಗ ಮುಸಲ್ಮಾನರಿಂದ ಪೊಲೀಸರಿಗೆ ವಿರೋಧ ವ್ಯಕ್ತಪಡಿಸಲಾಯಿತು. ಈ ವಿರೋಧವನ್ನು ಲೆಕ್ಕಿಸದೆ ಪೊಲೀಸರು ಮಾಜಿದನನ್ನು ಬಂಧಿಸಿ ಪೊಲೀಸ ಠಾಣೆಗೆ ಕರೆ ತಂದರು.
ಇಲ್ಲಿಯ ಬಿಲಾರಿ ಪ್ರದೇಶದಲ್ಲಿ ರಸ್ತೆಯ ಬದಿಗೆ ಈ ಹಿಂದೂ ಹುಡುಗಿ ದೀಪಾವಳಿಯ ಪ್ರಯುಕ್ತ ಹಣತೆಗಳನ್ನು ಮಾರುತಿದ್ದಳು. ಆ ಸಮಯದಲ್ಲಿ ಆಕೆಯ ಪಕ್ಕದಲ್ಲಿ ಕನ್ನಡಕದ ಅಂಗಡಿ ಇರುವ ಮಾಜಿದನು ಆಕೆಗೆ ಹಣತೆ ಮಾರಲು ವಿರೋಧಿಸಿದನು; ಆದರೆ ಈ ಹುಡುಗಿ ಅಲ್ಲಿಂದ ಹೋಗದಿದ್ದರಿಂದ ಅವನು ಕಾಲಿನಿಂದ ಹಣತೆಗಳನ್ನು ಓಡೆದು ಹಾಕಿದನು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದು, ಅಷ್ಟೊಂದು ಭಯ ನಿರ್ಮಾಣವಾಗಬೇಕು, ಎಂದು ಹಿಂದುಗಳಿಗೆ ಅನಿಸುತ್ತಿದೆ ! ಆರೋಪಿ ಮುಸಲ್ಮಾನನ್ನು ಬಂಧಿಸಲು ಹೋಗಿದ್ದ ಪೊಲೀಸರಿಗೆ ಸ್ಥಳೀಯ ಮುಸಲ್ಮಾನರು ವಿರೋಧಿಸುತ್ತಿರುವುದು ಅನೇಕ ಘಟನೆಗಳು ದೇಶದಲ್ಲಿ ಘಟಿಸುತ್ತವೆ. ಇದರ ಬಗ್ಗೆ ದೇಶದಲ್ಲಿನ ಜಾತ್ಯತೀತರು, ಕಾನೂನುಪ್ರಿಯರು, ಪ್ರಜಾಪ್ರಭುತ್ವದ ರಕ್ಷಕರು ಬಾಯಿ ತೆರೆಯುವುದಿಲ್ಲ ! |