ಸರ್ವೋಚ್ಚ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ ದೆಹಲಿ ಸಹಿತ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪಟಾಕಿಯ ಸದ್ದು !

ನವ ದೆಹಲಿ – ದೇಶದಲ್ಲಿ ದೀಪಾವಳಿಯ ಹಬ್ಬ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಎಲ್ಲಾ ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪೋತ್ಸವ ನಡೆಯುವಾಗ ಪಟಾಕಿಗಳ ಕೂಡ ಅಷ್ಟೇ ಪ್ರಮಾಣದಲ್ಲಿ ಬಳಕೆ ಆಗುತ್ತದೆ. ದೇಶದ ರಾಜಧಾನಿ ದೆಹಲಿಯ ಸಹಿತ ಅನೇಕ ನಗರಗಳಲ್ಲಿ ವಾಯುಮಾಲಿನ್ಯ ಅಪಾಯಮಟ್ಟ ಹೆಚ್ಚಿನ ಮಟ್ಟದಲ್ಲಿ ದಾಟಿರುವಾಗ ದೇಶವಾಸಿಯರಿಂದ ಅದನ್ನು ನಿರ್ಲಕ್ಷಿಸಿ ಪಟಾಕಿ ಸಿಡಿಸಲಾಗುತ್ತಿದೆ. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ಆದೇಶ ನೀಡಿದ್ದರು ಕೂಡ ದೆಹಲಿ ಸಹಿತ ಅನೇಕ ನಗರಗಳಲ್ಲಿ ಇದನ್ನು ನಿರ್ಲಕ್ಷಿಸಿರುವುದು ಕಾಣುತ್ತಿದೆ.

ವಿಶೇಷ ಎಂದರೆ ಸರ್ವೋಚ್ಚ ನ್ಯಾಯಾಲಯ ದೆಹಲಿ-ಎನ್.ಸಿ.ಆರ್. ಪ್ರದೇಶದಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಿತ್ತು. ಆದರೂ ಕೂಡ ಇಲ್ಲಿ ಈ ಎಲ್ಲಾ ಆದೇಶವನ್ನು ಮೀರಿ ಪಟಾಕಿಯನ್ನು ಸಿಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸರವಾದಿ ಭವರಿನ ಕಂದಾರಿ ಇವರು, ಅನೇಕ ಸ್ಥಳಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಪಟಾಕಿಗಳ ಬಳಕೆ ನಡೆಯುತ್ತಿದೆ. ಪೊಲೀಸರಿಗೆ ದೂರು ನೀಡಿದ್ದರು ಕೂಡ ಏನು ಉಪಯೋಗವಾಗಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದ ಪಾಲನೆ ಆಗುತ್ತಿಲ್ಲ. ಆದೇಶದ ಪ್ರಕಾರ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯದ ಪಾತ್ರವೇನು ? ಎಂದು ಪ್ರಶ್ನೆ ಉದ್ಭವಿಸುತ್ತಿದೆ. ಉತ್ಸವದ ಹೆಸರಿನಲ್ಲಿ ನಾವು ನಮ್ಮ ಮಕ್ಕಳಿಗೆ ಮಾಲಿನ್ಯಪೂರಿತ ಜೀವನ ನಡೆಸಲು ಅನಿವಾರ್ಯಗೊಳಿಸುತ್ತಿದ್ದೇವೆ ಎಂದು ಕಂದಾರಿ ಇವರು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಪಟಾಕಿಗಳನ್ನು ಹಾರಿಸಬಾರದೆಂದು ಆದೇಶ ನೀಡುವಾಗ, ಅದರ ನಿರ್ಮಾಣ, ಮಾರಾಟ ಮತ್ತು ಸಂಗ್ರಹ ಮಾಡಬಾರದೆಂದು ಕೂಡ ಆದೇಶದಲ್ಲಿ ನೀಡುವುದು ಅನಿವಾರ್ಯವಾಗಿದೆ !

ಕೇವಲ ಪಟಾಕಿಯಿಂದ ಮಾಲಿನ್ಯವಾಗುತ್ತದೆ, ಅಂತ ಇಲ್ಲ. ವರ್ಷಪೂರ್ತಿ ವಿವಿಧ ಕಾರಣಗಳಿಂದ ಮಾಲಿನ್ಯ ಆಗುತ್ತಲೇ ಇರುತ್ತದೆ. ಅದರ ಬಗ್ಗೆ ಕೂಡ ಅಷ್ಟೇ ಕಠೋರತೆಯಿಂದ ಉಪಾಯ ಹುಡುಕಿ ಅದರ ಮೇಲೆ ಕೂಡ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ.