2024 ಅಮೆರಿಕಾಗೆ ಅಪಾಯ ! – ಕ್ರೇಗ್ ಹ್ಯಾಮಿಲ್ಟನ್ ಪಾರ್ಕರ್ ಅವರ ಭವಿಷ್ಯವಾಣಿ

ವಾಷಿಂಗ್ಟನ್ (ಅಮೆರಿಕ) – ಭವಿಷ್ಯದಲ್ಲಿ ಪ್ರಕೃತಿ ವಿಕೋಪದಿಂದ ಅಮೆರಿಕದ ಹಲವು ನಗರಗಳು ನಾಶವಾಗಲಿವೆ ಎಂದು ‘ಹೊಸ ನಾಸ್ಟ್ರಾಡಾಮಸ್’ ಎಂದು ಗುರುತಿಸಲ್ಪಡುವ ಕ್ರೇಗ್ ಹ್ಯಾಮಿಲ್ಟನ್ ಪಾರ್ಕರ್ ಭವಿಷ್ಯವಾಣಿ ನುಡಿದಿದ್ದಾರೆ. ಪಾರ್ಕರ ಮಾತನಾಡುತ್ತಾ, ನೈಸರ್ಗಿಕ ವಿಕೋಪಗಳಿಂದಾಗಿ ಅಮೇರಿಕಾದ ಹೆಚ್ಚಿನ ಭಾಗಕ್ಕೆ ಕತ್ತಲೆಯನ್ನು ಹರಡುತ್ತದೆ ಎಂದು ಹೇಳಿದರು. ಒಂದು ದೊಡ್ಡ ನೈಸರ್ಗಿಕ ಸಂಕಟ ಅಥವಾ ವಿಪತ್ತು ಅನೇಕ ನಗರಗಳ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಮೂಲಸೌಕರ್ಯವನ್ನು ನಾಶಪಡಿಸುತ್ತದೆ, ಇದರ ಪರಿಣಾಮವಾಗಿ ಎಲ್ಲೆಡೆ ‘ಬ್ಲ್ಯಾಕ್ ಔಟ್ ‘ (ಕತ್ತಲೆ) ಉಂಟಾಗುತ್ತದೆ. ಅಲ್ಲದೆ ಮುಂದಿನ ವರ್ಷ ಅಮೆರಿಕಾದಲ್ಲಿ ದೊಡ್ಡ ಭೂಕಂಪ ಆಗಲಿದೆ.