ಉತ್ತರಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್ ನ ೬ ಭಯೋತ್ಪಾಧಕರ ಬಂಧನ

ಭಯೋತ್ಪಾದಕರು ಅಲೀಗಡ್ ಮುಸ್ಲಿಂ ವಿಶ್ವವಿದ್ಯಾಲಯದ ‘ಸ್ಟೂಡೆಂಟ್ಸ್ ಆಫ್ ಅಲಿಗಡ್ ಯೂನಿವರ್ಸಿಟಿ’ಯ ವಿದ್ಯಾರ್ಥಿ ಸಂಘಟನೆಯ ಜೊತೆ ನಂಟು

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಉಗ್ರ ನಿಗ್ರ ದಳವು ರಾಜ್ಯದಲ್ಲಿನ ವಿವಿಧ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್ ನ ೬ ಭಯೋತ್ಪಾದಕರನ್ನು ಬಂಧಿಸಿದೆ. ಈ ೬ ರಲ್ಲಿ ರಕೀಬ್ ಇನಾಂ, ನಾವೇದ ಸಿದ್ದಿಕೀ, ಮಹಮ್ಮದ್ ನೋಮಾನ ಮತ್ತು ಮಹಮ್ಮದ್ ನಾಝಿಮ್ ಈ ೪ ಜನರ ಹೆಸರು ಬಹಿರಂಗವಾಗಿವೆ. ಈ ಎಲ್ಲಾ ಆರೋಪಿಗಳು ಅಲೀಗಡ್ ಮುಸ್ಲಿಂ ವಿಶ್ವವಿದ್ಯಾಲಯದ ‘ಸ್ಟೂಡೆಂಟ್ಸ್ ಆಫ್ ಅಲೀಗಡ್ ಯುನಿವರ್ಸಿಟಿ’ (ಎಸ್.ಎ.ಎಂ.ಯು) ಈ ವಿದ್ಯಾರ್ಥಿ ಸಂಘಟನೆಯ ಜೊತೆ ನಂಟನ್ನು ಹೊಂದಿದ್ದಾರೆ. ಈ ಭಯೋತ್ಪಾದಕರು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕ ದಾಳಿ ನಡೆಸುವವರಿದ್ದರು. ಎಸ್.ಎ.ಎಂ.ಯು. ಈ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನಲ್ಲಿ ಹೊಸ ಜನರನ್ನು ಸೇರಿಸುವ ಶಾಖೆ ಆಗಿದೆ’, ಎಂದು ಉಗ್ರ ನಿಗ್ರ ದಳವು ದಾವೆ ಕೂಡ ಮಾಡಿದೆ.

ಸಂಪಾದಕೀಯ ನಿಲುವುಅಲೀಗಡ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಈಗ ಬೀಗ ಜಡಿಯುವುದು ಅವಶ್ಯಕ !