
ಸಾಸವಡ (ಪುಣೆ ಜಿಲ್ಲೆ), ನವೆಂಬರ್ 10 (ಸುದ್ದಿ) – ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ ವಿಸಾವಾ, ವಡಕಿ ನಾಲಾ, ಸಾಸವಡ ರೋಡ ಇಲ್ಲಿ ನವೆಂಬರ್ 6 ಮತ್ತು 7 ರಂದು ‘ಸಮಸ್ಯಾ ಮಾರ್ಗದರ್ಶನ ಮತ್ತು ದರ್ಶನ ಸಮಾರಂಭ’ವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ ಇವರು ನವೆಂಬರ್ 6 ರಂದು ಅನಂತ ಶ್ರೀ ವಿಭೂಷಿತ ಜಗದ್ಗುರು ರಾಮಾನಂದಾಚಾರ್ಯ ಪ.ಪೂ. ಸ್ವಾಮಿ ನರೇಂದ್ರಾಚಾರ್ಯ ಮಹಾರಾಜರನ್ನು ಸದಿಚ್ಛೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರ ಹಸ್ತದಿಂದ ಮರಾಠಿ ಭಾಷೆಯ ‘ಸನಾತನ ಪಂಚಾಂಗ 2024’ ದ ಪೂಜೆ ಮಾಡಿ ಲೋಕಾರ್ಪಣೆ ಮಾಡಿದರು. ಈ ಸಮಯದಲ್ಲಿ ಮಹಾರಾಜರು ಪ್ರಪಂಚದಾದ್ಯಂತದ ಯುದ್ಧ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದರು.

ಜಗದ್ಗುರು ರಾಮಾನಂದಾಚಾರ್ಯ ಪ.ಪೂ. ಸ್ವಾಮಿ ನರೇಂದ್ರಾಚಾರ್ಯ ಮಹಾರಾಜರು, “ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಇಡೀ ಜಗತ್ತನ್ನು ಎಳೆಯಲಾಗುತ್ತಿದೆ. ನನ್ನ ಎಲ್ಲಾ ಪ್ರವಚನಗಳಲ್ಲಿ ನಾನು ಯಾವಾಗಲೂ ಭಕ್ತರನ್ನು ನಾವೆಲ್ಲರೂ ಜಾಗೃತರಾಗಬೇಕಾದ ಸಮಯ ಇದಾಗಿದೆಯೆಂದು ಎಚ್ಚರಿಸುತ್ತಿರುತ್ತೇನೆ” ಎಂದು ಹೇಳಿದರು.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರೊಂದಿಗೆ ಅವರು ಅನುಭವಿಸಿದ ವಿವಿಧ ಆನಂದಮಯ ಅನುಭವಗಳನ್ನು ಹೇಳಿದರು. ‘ ಸನಾತನ ಸಂಸ್ಥೆಯ ಮೇಲೆ ಮಹಾರಾಜರ ಕೃಪಾಕಟಾಕ್ಷ ಇದೆ’ ಎಂದು ಅವರ ಮಾತಿನಲ್ಲಿ ಅರಿವಾಗುತ್ತಿತ್ತು. ಈ ಸಂದರ್ಭದಲ್ಲಿ ಶ್ರೀ ಸಂಪ್ರದಾಯದ ಸರ್ವಶ್ರೀ ಮಹೇಶ ಪರಬ, ಚಂದ್ರಕಾಂತ ನಾಯ್ಕ ಉಪಸ್ಥಿತರಿದ್ದರು.
ಸಾಧನೆಯ ಅತ್ಯಾವಶ್ಯಕತೆ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University