Netanyahu On Gaza : ಇಸ್ರೇಲಿಗೆ ಗಾಝಾದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶವಿಲ್ಲ ! – ಪ್ರಧಾನ ಮಂತ್ರಿ ಬೆಂಜಾಮಿನ ನೇತಾನ್ಯುಹೂ

ತೆಲ ಆವೀವ – ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಾಮಿನ ನೇತಾನ್ಯುಹೂರವರು ಮಾತನಾಡುತ್ತಾ, ಇಸ್ರೇಲ್ ಗಾಝಾದ ಮೇಲೆ ನಿಯಂತ್ರಣ ಪಡೆಯಲು ಇಚ್ಛಿಸುತ್ತಿಲ್ಲ, ಅಧಿಕಾರ ನಡೆಸಲು ಇಚ್ಛಿಸುತ್ತಿಲ್ಲ ಅಥವಾ ಗೆಲ್ಲಲು ಇಚ್ಛಿಸುತ್ತಿಲ್ಲ ಎಂದು ಹೇಳಿದರು. ಈ ಹಿಂದೆ ನೇತಾನ್ಯುಹೂರವರು ಸಂದರ್ಶನವೊಂದರಲ್ಲಿ, ಹಮಾಸ್ ನ ವಿರುದ್ಧದ ಯುದ್ಧ ಮುಗಿದ ನಂತರ ಇಸ್ರೇಲ್ ಗಾಝಾದ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸುವುದು ಎಂದು ಹೇಳಿದ್ದರು. ಒಂದು ರೀತಿಯಲ್ಲಿ ಗಾಝಾವನ್ನು ಇಸ್ರೇಲ್ ವಶಕ್ಕೆ ಪಡೆಯಲು ಇಚ್ಚಿಸುತ್ತಿದೆ ಎಂಬಂತೆ ಈ ಹೇಳಿಕೆಯ ಬಗ್ಗೆ ನೋಡಲಾಗುತ್ತಿತ್ತು.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಅಮೇರಿಕಾವು ಇಸ್ರೇಲಿಗೆ ಬಹಿರಂಗವಾಗಿ ಬೆಂಬಲಿಸುತ್ತಿದೆ; ಆದರೆ ಅಮೇರಿಕಾದ ಅಧ್ಯಕ್ಷ ಜೋ ಬಾಯಡೆನ್ ರವರು, ಯುದ್ಧದ ನಂತರ ಇಸ್ರೇಲ್ ಗಾಝಾವನ್ನು ಕಬಳಿಸಿದರೆ ಅದನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಮೇರಿಕಾದ ವಿರೋಧದ ನಂತರ ಇಸ್ರೇಲಿನ ಸ್ವರ ಬದಲಾಗಿದೆ ಎಂಬುದು ಪ್ರಧಾನಿ ನೇತಾನ್ಯುಹೂ ರವರ ಹೇಳಿಕೆಯಿಂದ ಈಗ ಸ್ಪಷ್ಟವಾಗುತ್ತಿದೆ, ಎಂದು ಹೇಳಲಾಗುತ್ತಿದೆ.

ವೆಸ್ಟ್ ಬ್ಯಾಂಕ್ ನಲ್ಲಿ ಅಧಿಕಾರದಲ್ಲಿರುವ `ಪ್ಯಾಲಿಸ್ತೀನ ಅಥಾರಿಟಿ’ ಗಾಝಾದ ಮೇಲೆ ಅಧಿಕಾರ ನಡೆಸಬಹುದು !

ಇನ್ನೊಂದು ಕಡೆಯಲ್ಲಿ ಅಮೇರಿಕಾ ಸರಕಾರದ ಕೆಲವು ಅಧಿಕಾರಿಗಳು ವೆಸ್ಟ್ ಬ್ಯಾಂಕ್ ನಲ್ಲಿ ಅಧಿಕಾರದಲ್ಲಿರುವ `ಪ್ಯಾಲಿಸ್ತೀನ ಅಥಾರಿಟಿ’ಯ ಸರಕಾರಕ್ಕೆ ಗಾಝಾದ ಮೇಲೆ ಅಧಿಕಾರ ನಡೆಸಲು ಬಿಡಬೇಕು ಎಂದು ಹೇಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅಮೇರಿಕಾದ ವಿದೇಶಾಂಗ ಸಚಿವ ಎಂಟನಿ ಬ್ಲಿಂಕನ್ ರವರೂ ಈ ಸಂದರ್ಭದಲ್ಲಿ ವೆಸ್ಟ್ ಬ್ಯಾಂಕ್ ನ ಪ್ರವಾಸದ ಸಮಯದಲ್ಲಿ ಅಲ್ಲಿನ ರಾಷ್ಟ್ರಪತಿ ಮಹಮೂದ ಅಬ್ಬಾಸರವರನ್ನು ಭೇಟಿಯಾದಾಗ ಗಾಝಾದ ಮೇಲೆ ಅಧಿಕಾರ ನಡೆಸುವ ಹೇಳಿಕೆ ನೀಡಿದ್ದರು.