ಜಾರ್ಖಂಡ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಭಯೋತ್ಪಾದಕರ ಬಂಧನ

ಪ್ಯಾಲೆಸ್ಟೈನ್‌ಗೆ ಹೋಗಿ ಯಹೂದಿಗಳೊಂದಿಗೆ ಹೋರಾಡುವ ಸಿದ್ಧತೆಯಲ್ಲಿದ್ದ ಭಯೋತ್ಪಾದಕರು!

ರಾಂಚಿ (ಜಾರ್ಖಂಡ್) – ಜಾರ್ಖಂಡ್ ನ ಭಯೋತ್ಪಾದನಾ ನಿಗ್ರಹ ದಳವು ರಾಜ್ಯದ ಆರಿಜ ಹಸನೆನ್ ಮತ್ತು ಮೊಹಮ್ಮದ್ ನಸೀಮ ಅವರನ್ನು ಬಂಧಿಸಿದೆ. ಇವರಿಬ್ಬರಿಗೂ ಇಸ್ಲಾಮಿಕ್ ಸ್ಟೇಟ್ ಜೊತೆ ಸಂಪರ್ಕವಿದೆ. ಇದಲ್ಲದೇ ಇವರಿಬ್ಬರಿಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಇದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಪ್ಯಾಲೆಸ್ತೀನ್‌ಗೆ ಹೋಗಿ ಅಲ್ಲಿನ ಅಲ್ ಅಕ್ಸಾ ಮಸೀದಿಯನ್ನು ಯಹೂದಿಗಳಿಂದ ರಕ್ಷಿಸುವುದು ಅವರ ಗುರಿಯಾಗಿತ್ತು.

ರಾಜ್ಯದ ಗೊಡ್ಡಾ ನಿವಾಸಿ ಹಸನೇನ ಎಂಬಾತನನ್ನು ಮೊದಲು ಬಂಧಿಸಲಾಯಿತು. ಈತ ನೀಡಿದ ಮಾಹಿತಿ ಮೇರೆಗೆ ಹಜಾರಿಬಾಗ್ ನ ನಸಿಮ ನನ್ನು ಬಂಧಿಸಲಾಗಿದೆ. ಹಸನೆನ್ ಟೆಲಿಗ್ರಾಮ್ ಆ್ಯಪ್ ಮಾಧ್ಯಮದ ಮೂಲಕ ಜಿಹಾದಿ ವಿಚಾರಗಳನ್ನು ಪ್ರಸಾರ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಕಾಂಗ್ರೆಸ್ ಅವಧಿಯಲ್ಲಿ ಹಿಂದೂಗಳನ್ನು ‘ಭಯೋತ್ಪಾದಕರು’ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನಗಳಾದವು; ಆದರೆ ಈ ದೇಶದಲ್ಲಿ ಕೇವಲ ಮತಾಂಧ ಮುಸಲ್ಮಾನರೇ ಭಯೋತ್ಪಾದಕರಾಗಿದ್ದು ಇಲ್ಲಿಯವರೆಗೆ ಅವರು ಮಾತ್ರ ಸಿಕ್ಕಿ ಬೀಳುತ್ತಿದ್ದಾರೆ; ಆದರೆ ಕಾಂಗ್ರೆಸ್ ಹಾಗೂ ಇತರ ಬೂಟಾಟಿಕೆಯ ಧರ್ಮನಿರಪೇಕ್ಷತಾವಾದಿ(ಜಾತ್ಯತೀತ) ಪಕ್ಷಗಳು ಈ ಬಗ್ಗೆ ಚಕಾರವನ್ನು ಎತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ!