
ರಾಯ್ ಬರೇಲಿ (ಉತ್ತರಪ್ರದೇಶ) – ಇಲ್ಲಿಯ 9 ವರ್ಷದ ಹಿಂದೂ ದಲಿತ ಬಾಲಕಿಯನ್ನು 55 ವರ್ಷದ ಪೀರ್ ಮೊಹಮ್ಮದ್ ಎಂಬ ಮುಸಲ್ಮಾನ ವ್ಯಕ್ತಿಯು ಬಲಾತ್ಕಾರ ಮಾಡಿದ್ದಾನೆ. ಅತ್ಯಾಚಾರದ ನಂತರ ಬಾಲಕಿಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆಗಾಗಿ ಬಾಲಕಿಯನ್ನು ಲಕ್ಷ್ಮಣಪುರಿಗೆ ಕಳುಹಿಸಲಾಗಿದೆ. ಅತ್ಯಾಚಾರದ ನಂತರ ಪೀರ್ ಮೊಹಮ್ಮದ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಸಾರ ಮಾಧ್ಯಮಗಳು ನೀಡಿರುವ ವರದಿಗಳ ಪ್ರಕಾರ, ರಾಯಬರೇಲಿಯ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ಹಿಂದೂ ದಲಿತ ಮಹಿಳೆಯೊಬ್ಬಳು ತಮ್ಮ 9 ವರ್ಷದ ಮಗಳನ್ನು ಪೀರ್ ಮೊಹಮ್ಮದ್ ಬಲಾತ್ಕಾರ ಮಾಡಿದ್ದಾನೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಅವರ ಮಗಳು ಸಂಜೆ ಮನೆಯ ಹೊರಗೆ ಆಟವಾಡುತ್ತಿದ್ದಳು. ಈ ವೇಳೆ ಪೀರ್ ಮುಹಮ್ಮದ್ ಅಲ್ಲಿಂದ ಹಾದು ಹೋಗುತ್ತಿದ್ದನು. ಬಾಲಕಿ ಒಬ್ಬಳೇ ಇರುವುದನ್ನು ನೋಡಿ ಅವನು ಅವಳಿಗೆ ಆಸೆಯನ್ನು ತೋರಿಸಿ ಹತ್ತಿರದ ಗದ್ದೆಗೆ ಕರೆದೊಯ್ದು ಅವಳ ಮೇಲೆ ಬಲಾತ್ಕಾರ ಮಾಡಿದ್ದಾನೆ. ಸಂತ್ರಸ್ತ ಬಾಲಕಿಯ ಅಳು ಮತ್ತು ಕಿರುಚಾಟ ಆರೋಪಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಾಲಕಿಯನ್ನು ರಕ್ತದ ಮಡುವಿನಲ್ಲಿ ಬಿಟ್ಟು ಓಡಿ ಹೋಗಿದ್ದಾನೆ. ಬಹಳ ಸಮಯದಿಂದ ಬಾಲಕಿ ಕಾಣೆಯಾಗಿದ್ದ ಕಾರಣ ಕುಟುಂಬಸ್ಥರು ಅವಳನ್ನು ಹುಡುಕುತ್ತಾ ಹೊಲಕ್ಕೆ ಹೋದಾಗ ಅವರಿಗೆ ಹುಡುಗಿ ಗಾಯಗೊಂಡ ಸ್ಥಿತಿಯಲ್ಲಿ ಅಳುತ್ತಿರುವುದು ಕಂಡು ಬಂದಿತು. ಸಂತ್ರಸ್ತ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಪೀರ್ ಮಹಮ್ಮದ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಕಾಮಾಂಧನನ್ನು ಶರಿಯತ ಕಾನೂನಿನ ಪ್ರಕಾರ ಸೊಂಟದವರೆಗೆ ಗುಂಡಿಯಲ್ಲಿ ಹೂಳಿ, ಅವನಿಗೆ ಕಲ್ಲೆಸೆದು ಕೊಲ್ಲುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು ! |
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept