ನವರಾತ್ರಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆರವೇರಿದ ‘ದಶಮಹಾವಿದ್ಯಾ ಯಾಗ’ !

ರಾಮನಾಥಿ (ಫೋಂಡಾ, ಗೋವಾ) – ನವರಾತ್ರ್ಯುತ್ಸವದ ನಿಮಿತ್ತ ಇಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ೧೫ ರಿಂದ ೨೪ ಅಕ್ಟೋಬರ್‌ ೨೦೨೩ ರ ಕಾಲಾವಧಿಯಲ್ಲಿ ‘ದಶಮಹಾವಿದ್ಯಾಯಾಗ’ ನೆರವೇರಿತು. ‘ಸನಾತನ ಧರ್ಮ ಸಂಸ್ಥಾಪನೆಯು ಆದಷ್ಟು ಬೇಗ ಆಗಬೇಕು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗವು ತಪ್ಪಿ ಅವರಿಗೆ ಆರೋಗ್ಯಕರ ದೀರ್ಘಾಯುಷ್ಯವು ಲಭಿಸಬೇಕು ಮತ್ತು ಸಾಧಕರ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗ ಬೇಕು’, ಎಂಬ ಉದ್ದೇಶದಿಂದ ಈ ಯಾಗವನ್ನು ಮಾಡಲಾಯಿತು. ಈ ಯಾಗದಲ್ಲಿ ಕರುಂಗಾಳಿ ಚೂರ್ಣ ಮತ್ತು ಮೂಲಿಕಾ ಚೂರ್ಣದ ಹವನ ಮಾಡಲಾಯಿತು. ಈ ಯಾಗಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಈ ಯಾಗದ ನಂತರ ಪ್ರತಿದಿನ ಗಾಯನ ಸೇವೆಯನ್ನು ಪ್ರಸ್ತುತ ಪಡಿಸಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರನ್ನು ಮತ್ತು ಸಾಧಕಿಯರನ್ನು ಆಹ್ವಾನಿಸಲಾಗಿತ್ತು. ಅದಕ್ಕನುಸಾರ ವಿಶ್ವವಿದ್ಯಾಲಯದ ಸಾಧಕರು ಮತ್ತು ಸಾಧಕಿಯರು ದೇವಿಯ ಆರತಿ, ಭಕ್ತಿಗೀತೆ ಮುಂತಾದ ವಿವಿಧ ಪ್ರಕಾರಗಳಲ್ಲಿನ ಗಾಯನಸೇವೆಯನ್ನು ಪ್ರಸ್ತುತಪಡಿಸಿದರು.