ಸನಾತನ ಧರ್ಮಕ್ಕಾಗಿ ಪ್ರಾಣ ಕೊಡಲು ಪ್ರತಿಯೊಂದು ಮನೆಯಿಂದ ಒಬ್ಬ ಯುವಕ ಹೊರಬೀಳುತ್ತಾನೆ ! – ಸ್ವಾಮಿ ಧೀರೇಂದ್ರಕೃಷ್ಣ ಶಾಸ್ತ್ರಿ, ಬಾಗೇಶ್ವರ ಧಾಮ

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ವಾಮಿ ಧೀರೇಂದ್ರ ಶಾಸ್ತ್ರಿ ಅವರನ್ನು ಸ್ವಾಗತಿಸಿದರು

ಡೆಹರಾಡೂನ್ – ಸನಾತನ ಧರ್ಮಕ್ಕಾಗಿ ತನ್ನ ಪ್ರಾಣವನ್ನು ನೀಡಲು ಪ್ರತಿಯೊಂದು ಮನೆಯಿಂದ ಒಬ್ಬ ಯುವಕ ಹೊರಬೀಳುತ್ತಾನೆ ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪೀಠಾಧೀಶ್ವರ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದರು. ಅವರು ನಗರದ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿದ್ದ ದಿವ್ಯ ದರಬಾರಿನಲ್ಲಿ ಸಾವಿರಾರು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ವಾಮಿ ಧೀರೇಂದ್ರ ಶಾಸ್ತ್ರಿ ಅವರನ್ನು ಸ್ವಾಗತಿಸಿದರು. ಸ್ವಾಮಿ ಧೀರೇಂದ್ರ ಶಾಸ್ತ್ರಿಯವರು ಮತ್ತೊಮ್ಮೆ ಹಿಂದೂ ರಾಷ್ಟ್ರದ ಸಂಕಲ್ಪವನ್ನು ಪುನರುಚ್ಚರಿಸಿದರು ಮತ್ತು ಮತಾಂತರವನ್ನು ವಿರೋಧಿಸಿದರು.

ಸ್ವಾಮಿ ಧೀರೇಂದ್ರ ಶಾಸ್ತ್ರಿಯವರು ಮಾತು ಮುಂದುವರೆಸಿ,

1. ದೇವಭೂಮಿ ಉತ್ತರಾಖಂಡದಲ್ಲಿ ದರ್ಗಾಗಳು ಮತ್ತು ಮಸೀದಿಗಳು ವೇಗವಾಗಿ ದ್ವಿಗುಣಗೊಳ್ಳುತ್ತಿವೆ. ಈಗ ಬಾಬರನನ್ನು ತೆಗೆದು ರಘುವರ ಹೆಸರನ್ನು ಹೆಚ್ಚಿಸುವ ಆವಶ್ಯಕತೆಯಿದೆ. ಈ ದೇಶ ಬಾಬರನದ್ದಲ್ಲ ರಘುವರನದ್ದಾಗಿದೆ. ಉತ್ತರಾಖಂಡ ಭಾರತದ ಮುಕುಟವಾಗಿದೆ.

2. ಯಾವಾಗ ದೇಹವೇ ಬೇರೆ ರಕ್ತವನ್ನು ಸ್ವೀಕರಿಸುವುದಿಲ್ಲ, ಹೀಗಿರುವಾಗ ಇನ್ನೊಂದು ಧರ್ಮವನ್ನು ನಾವೇಕೆ ಸ್ವೀಕರಿಸಬೇಕು ? ಉತ್ತರಾಖಂಡದಲ್ಲಿ ಸನಾತನ-ಸನಾತನ ಕಂಡುಬಂದರೆ ಮಾತ್ರ ಭಾರತ ಹಿಂದೂ ರಾಷ್ಟ್ರವಾಗುತ್ತದೆ. ಉತ್ತರಾಖಂಡದ ಬೆಟ್ಟಗಳಲ್ಲಿ ಮಸೀದಿಗಳಲ್ಲ, ಶ್ರೀರಾಮ ಮಂದಿರ ನಿರ್ಮಿಸುವುದು ಆವಶ್ಯಕವಾಗಿದೆ.