ಚಿತ್ರದುರ್ಗ – ಶ್ರೀ ಗಣಪತಿಯನ್ನು ಸ್ತುತಿಸುವುದು ಮೂಢನಂಬಿಕೆ. ಬಸವಣ್ಣನವರ ವಚನಗಳನ್ನು ಹೇಳುವುದು ನಿಜವಾದ ಪ್ರಾರ್ಥನೆಯಾಗಿದೆ. (ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗವಾಗಿದೆ; ಆದರೆ ಶಿವಾಚಾರ್ಯರಂತಹ ತಥಾಕಥಿತ ಸ್ವಾಮಿಗಳು ಹಿಂದೂ ದೇವತೆಗಳನ್ನು ಮೂಢನಂಬಿಕೆಗಳೆಂದು ಕರೆದು ಲಿಂಗಾಯತ ಧರ್ಮದವರನ್ನು ಹಿಂದೂ ಧರ್ಮದಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾರೆ ! – ಸಂಪಾದಕರು) ಕಾರ್ಯಕ್ರಮದ ಪ್ರಾರಂಭದಲ್ಲಿ ಅವರ ವಚನಗಳನ್ನು ಹಾಡಬಹುದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಇಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಿವಧ್ವಜಾರೋಹಣ ನೆರವೇರಿಸಿ ಹೇಳಿದರು.
ಸ್ವಾಮಿಗಳು ಮಾತನಾಡುತ್ತಾ, ಶ್ರೀ ಗಣಪತಿಯು ಕಾಲ್ಪನಿಕ ದೇವತೆಯಾಗಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಸೃಷ್ಟಿಯಾಗಿರುವ ದೇವತೆಯಾಗಿದ್ದಾರೆ. ಬಾಹ್ಯ ವಸ್ತುಗಳಿಂದ ನಿರ್ಮಿಸಿದ ದೇವರು ದೇವರಲ್ಲ. ಮನೆಯಲ್ಲಿ ಅಥವಾ ಯಾವುದೇ ಸಮಾರಂಭದಲ್ಲಿ ಮೊದಲು ಶ್ರೀ ಗಣಪತಿ ಪೂಜೆ, ಸ್ತೋತ್ರಗಳು ಮತ್ತು ಶ್ಲೋಕಗಳನ್ನು ಪಠಿಸಬೇಕು ಎಂದು ಹಲವರ ಶ್ರದ್ಧೆಯಾಗಿದೆ. ಅದರ ಬದಲಾಗಿ ಬಸವಣ್ಣನವರ ವಚನಗಳನ್ನು ಪ್ರಾರ್ಥನೆಯಾಗಿ ಹೇಳಬೇಕು. (ಪ್ರತಿಯೊಬ್ಬರೂ ತಮ್ಮ ತಮ್ಮ ಶ್ರದ್ಧೆಯನುಸಾರ ದೇವರ ಮೇಲೆ ನಂಬಿಕೆ ಇಟ್ಟು ಪೂಜಿಸುತ್ತಾರೆ. ಅದನ್ನು ಮಾಡದೇ, ‘ನಾನು’ ಹೇಳುವುದನ್ನೇ ಮಾಡಿರಿ, ಎಂದು ಹೇಳುವುದೆಂದರೆ ಅಹಂಕಾರವಾಗಿದೆ ! – ಸಂಪಾದಕರು) ಸ್ವಾವಲಂಬನೆ, ಸದ್ವರ್ತನೆ, ನಡುವಳಿಕೆ ಇದ್ದವರೇ ನಿಜವಾದ ದೇವರೇ ಆಗಿದ್ದಾರೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ಜನಪ್ರಿಯತೆಗಾಗಿ ಇಂತಹ ಹೇಳಿಕೆಗಳನ್ನು ತಥಾಕಥಿತ ಸ್ವಾಮಿಗಳು ನೀಡುತ್ತಿರುತ್ತಾರೆ, ಎನ್ನುವುದಕ್ಕೆ ಇದೊಂದು ಉದಾಹರಣೆ ! ಇಂತಹವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ! |