ಕೇರಳ ಹೈಕೋರ್ಟ್ ನ ಪಟಾಕಿ ನಿಷೇಧದ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮೊರೆ !

ತಿರುವನಂತಪುರಂ (ಕೇರಳ) – ಕೇರಳ ಹೈಕೋರ್ಟ್‌ನ ಪಟಾಕಿ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯದ ದೇವಸ್ಥಾನಗಳ ನಿರ್ವಹಣೆಯನ್ನು ನೋಡಿಕೊಳ್ಳುವ ದೇವಸ್ವಂ ಬೋರ್ಡ್ ಮತ್ತು ಟ್ರಸ್ಟ್ ಮುಂದಾಗಿದೆ ಎಂದು ಕೇರಳ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ. ನವೆಂಬರ್ 3 ರಂದು ನಿಗದಿತ ಸಮಯದ ನಂತರ ಪಟಾಕಿ ಸಿಡಿಸಲು ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ಇದರ ವಿರುದ್ಧ ನವೆಂಬರ್ 5 ರಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಖಾತೆ ಸಚಿವ ಕೆ. ರಾಧಾಕೃಷ್ಣನ್ ಅವರು ಹೇಳಿದರು. ರಾಧಾಕೃಷ್ಣನ್ ಅವರು, ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ಪಟಾಕಿ ಇಲ್ಲದೆ ಧಾರ್ಮಿಕ ಹಬ್ಬಗಳನ್ನು ಆಚರಿಸುವುದು ಕಷ್ಟ ಎಂದು ಹೇಳಿದರು.