‘ಸ್ಪ್ರಿಂಗ್ ರಿವೀಲ್ಸ್’ ಈ ಹಿಂದುತ್ವನಿಷ್ಠ ಸಂಘಟನೆಯ ವಿನೋದ ಇವರ ವಾಹಿನಿ ಯೂಟ್ಯೂಬ್ ನಿಂದ ಅನ್ಯಾಯವಾಗಿ ನಿಲ್ಲಿಸಿದ ನಂತರ ‘ಭಾರತ ಕಾ ಓಟಿಟಿ’ ಆರಂಭ !
(‘ಓಟಿಟಿ’ ಎಂದರೆ ಓವರ್ ದ ಟಾಪ್ ! ಕಂಪನಿಯು ನೇರ ಇಂಟರ್ನೆಟ್ ಮೂಲಕ ವೀಕ್ಷಕರಿಗಾಗಿ ನೀಡಿರುವ ಸೇವೆ ಎಂದರೆ ಓಟಿಟಿ. ಓಟಿಟಿ ಮೂಲಕ ವೀಕ್ಷಕರು ಚಲನಚಿತ್ರ, ವೆಬ್ ಸೀರೀಸ್ ಮುಂತಾದ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗುತ್ತದೆ.)
ಬೆಂಗಳೂರು – ಹಿಂದುಗಳ ಮೇಲಿನ ಅತ್ಯಾಚಾರ, ಘೋರ ಅನ್ಯಾಯ ಹಾಗೂ ಸನಾತನ ಧರ್ಮದ ಮೇಲಾಗುವ ಆಘಾತ ಇವುಗಳನ್ನು ಬೆಳಕಿಗೆ ತರುವುದಕ್ಕಾಗಿ ಹಿಂದೂಗಳ ಸ್ವಂತದ ‘ಓಟಿಟಿ’ ಆರಂಭಿಸಲಾಗಿದೆ ಎಂದು ‘ಸ್ರಿಂಗ್ ರಿವೀಲ್ಸ್’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ವಿನೋದ ಇವರು ನೀಡಿದರು. ‘ಸ್ಪ್ರಿಂಗ್ ಜಿಯೋ’ ಈ ಹೆಸರಿನಿಂದ ಆರಂಭಿಸಲಾಗಿರುವ ಈ ಓಟಿಟಿ ಗೆ ವಿನೋದ್ ಇವರು ‘ಭಾರತ ಕಾ ಓಟಿಟಿ’ ಎಂದು ಸಂಭೋಧಿಸಿದರು. ಈ ಸಂದರ್ಭದಲ್ಲಿ ಅವರು ಎಕ್ಸ್ ನಿಂದ (ಹಿಂದಿನ ಟ್ವಿಟರ್ ನಿಂದ) ಇತ್ತೀಚಿಗೆ ಒಂದು ವಿಡಿಯೋ ಪ್ರಸಾರ ಮಾಡಿ ಮಾಹಿತಿ ನೀಡಿದರು.
‘ಸ್ಪ್ರಿಂಗ್ ರಿವೀಲ್ಸ್’ ಹೆಸರಿನ ಯುಟ್ಯೂಬ್ ಚಾನೆಲ್ ಕಳೆದ ಕೆಲವು ವರ್ಷಗಳಿಂದ ಹಿಂದುಗಳ ಮೇಲೆ ನಡೆಯುವ ಅಂತರಾಷ್ಟ್ರೀಯ ಷಡ್ಯಂತ್ರದ ಹಿಂದೆ ಯಾರಿರುವರು ? ಇದನ್ನು ಉದಾಹರಣೆ ಸಹಿತ ಹೇಳುತ್ತಿದ್ದರು. ಈ ಚಾನಲ್ ಗೆ ೧೪ ಲಕ್ಷಕ್ಕಿಂತಲೂ ಹೆಚ್ಚು ಸಬಸ್ಕ್ರಾಯಬರ್ಸ್ ಇದ್ದರು; ಆದರೆ ಯೂಟ್ಯೂಬ್ ಈ ಚಾನಲ್ ಸಪ್ಟೆಂಬರ್ ೨೦೨೩ ರಂದು ಅನಿರೀಕ್ಷಿತವಾಗಿ ನಿಷೇಧಿಸಿತು. ಅದರ ನಂತರ ಈ ಸಂಘಟನೆಯಿಂದ ಈಗ ಅದರ ಇನ್ನೊಂದು ಓಟಿಟಿ ಆರಂಭಿಸಲಾಗಿದೆ.
Mark this Date and Time:
34 days ago, at this very moment, YouTube deleted my channel. Exactly at 8:09pm now I launched an OTT Platform🔥 I hope this is a quick come back!Name: STRING GEO
Birth Day: 24 october 2023 (Vijayadasami Day)
Time: 8:09pm
URL: https://t.co/iM3EnmjD1g…— String (@StringReveals) October 24, 2023
ಈ ವಿಡಿಯೋದಲ್ಲಿ ಶ್ರೀ. ವಿನೋದ ಇವರು,
೧. ಭಾರತ ಭೂಮಿಯೇ ಶ್ರೇಷ್ಠ ಗುರು, ಆಶ್ರಮ ಮತ್ತು ದೇವಸ್ಥಾನಗಳಿಂದ ಪವಿತ್ರವಾಗಿರುವ ಭೂಮಿ ಆಗಿದ್ದು ಇಲ್ಲಿಯ ಆಶ್ರಮದಲ್ಲಿ ನಿಮಗೆ ಸರ್ವೋಚ್ಚ ಆನಂದ ಮತ್ತು ಜೀವನದ ವಾಸ್ತವಿಕ ಅರ್ಥ ದೊರೆಯುತ್ತದೆ. ಈಗ ಇಂತಹ ಆಶ್ರಮಗಳು ಮತ್ತು ದೇವಸ್ಥಾನಗಳನ್ನು ನಾಶ ಮಾಡುವ ಷಡ್ಯಂತ್ರ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವ ಜನರು ದೊರೆಯುತ್ತಾರೆ. ಈಗ ನೀವು ಹೇಳಿರಿ ನಾವು ಏನು ಮಾಡಬೇಕಿದೆ ?
೨. ಇಂದು ಆನ್ಲೈನ್ ಪ್ರಸಾರ ಮಾಧ್ಯಮದಲ್ಲಿ (ಡಿಜಿಟಲ್ ಮೀಡಿಯಾದಲ್ಲಿ) ಬೃಹತ್ ಪ್ರಮಾಣದಲ್ಲಿ ಇಂತಹ ಜನರು ತುಂಬಿದ್ದಾರೆ. ದೊಡ್ಡ ವಾಹಿನಿಗಳು ತಪ್ಪಾದ ಮಾಹಿತಿ ನೀಡುತ್ತಾರೆ. ತಥಾಕಥಿತ ಸಮಾಜ ಸೇವಕರು ಧಾರ್ಮಿಕ ಧ್ವನಿಯನ್ನು ಪ್ರತಿಧ್ವನಿಸಲು ಬಿಡುವುದಿಲ್ಲ. ಅವರು ನಮ್ಮ ಬ್ರೈನ್ ವಾಷ್ ಮಾಡಲು ನೋಡುತ್ತಾರೆ ಮತ್ತು ಭಯೋತ್ಪಾದಕರನ್ನು ಬೆಳೆಸುವ ಪ್ರಯತ್ನ ಮಾಡುತ್ತಾರೆ.
೩. ಹಿಂದುಗಳನ್ನು ಕತ್ತಲಲ್ಲಿ ಇರಿಸುವುದಕ್ಕಾಗಿ ಮತ್ತು ನಮ್ಮಲ್ಲಿನ ಗುಲಾಮದ ಮಾನಸಿಕತೆ ದೃಢಗೊಳಿಸುವುದಕ್ಕಾಗಿ ಬಹಳಷ್ಟು ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಾರೆ. ಈ ವಿಷಯದ ಬಗ್ಗೆ ತಿಳಿಸುವುದಕ್ಕಾಗಿ ನಾನು ಈ ‘ಓಟಿಟಿ’ ಆರಂಭಿಸಿದ್ದೇನೆ.
೪. ನಮ್ಮ ದೇವತೆಗಳ ವಿಡಂಬನೆ ಮಾಡುವುದು, ಗುರುಗಳ ಮೇಲೆ ಕಿಡಿ ಕಾರುವುದು, ಭಾರತೀಯ ಸಂಸ್ಕೃತಿಗೆ ಅವಮಾನ ಮಾಡುವುದು ಇದನ್ನು ಯೋಗ್ಯ ಭಾಷೆಯಲ್ಲಿ ತಿಳಿಸುವುದು ಅವಶ್ಯಕವಾಗಿದೆ. ಈ ಓಟಿಟಿಯನ್ನು ಅದಕ್ಕಾಗಿ ಕೂಡ ಬಳಸಲಾಗುವುದು.
೫. ಭಾರತೀಯ ಸಂಸ್ಕೃತಿ ತಿಳಿದುಕೊಳ್ಳುವುದಕ್ಕಾಗಿ ಕೂಡ ಈ ಓಟಿಟಿ ಬಳಸಬಹುದು. ಇಲ್ಲಿ ಒಳ್ಳೆಯ ವೆಬ್ ಸೀರೀಸ್, ಕಿರುಚಿತ್ರ, ಪಾಡ್ಕಾಸ್ಟ್ ಮತ್ತು ಚಲನಚಿತ್ರದ ಮಾಧ್ಯಮದಿಂದ ನಿಮಗೆ ನಮ್ಮ ಸಂಸ್ಕೃತಿ ತಿಳಿದುಕೊಳ್ಳಲು ಸಾಧ್ಯವಾಗುವುದು.
೬. ಹೇಗೆ ವೇದಗಳು ಬ್ರಾಹ್ಮಣರಿಗಾಗಿ ಆವಶ್ಯಕವಾಗಿವೆ, ಗುರುಗಳು ಈ ಅಜ್ಞಾನಿ ಜೀವಗಳಿಗಾಗಿ ಮಾರ್ಗದರ್ಶಕರಾಗಿದ್ದಾರೆ ಹಾಗೆಯೇ ‘ಸ್ಟ್ರಿಂಗ್ ಜಿಯೋ’ ಇದು ಸನಾತನ ಧರ್ಮದ ಮೇಲೆ ದಾಳಿ ಮಾಡುವ ಪಾಪೀ ರಾಕ್ಷಸರ ಮುಖವಾಡ ಕಳಚಿ ಬಹಿರಂಗ ಪಡಿಸುವುದಕ್ಕಾಗಿ ಆವಶ್ಯಕ ಮಾಧ್ಯಮವಾಗಿದೆ.
೭. ನಿಮಗೆ ಎಷ್ಟೊಂದು ವಿಷಯ ನೆಟ್ ಫ್ಲಿಕ್ಸ್, ಅಮೆಜಾನ್, ಗೂಗಲ್ ಮುಂತಾದವುಗಳಲ್ಲಿ ದೊರೆಯುವುದಿಲ್ಲ ; ಆದರೆ ನಾವು ನಿಮಗೆ ಅದರ ಮಾಹಿತಿ ನೀಡುವೆವು.
ಹಿಂದೂಗಳ ಮೇಲಿನ ಅತ್ಯಾಚಾರದ ವಿಡಿಯೋ ನಮಗೆ ಕಳುಹಿಸಿ ನಾವು ಅದನ್ನು ಪ್ರಸಾರ ಮಾಡುವೆವು !ಯೂಟ್ಯೂಬ್ ನಿಂದ ನನ್ನ ಚಾನೆಲ್ ನಿಲ್ಲಿಸಲಾಯಿತು. ಇಲ್ಲಿಯವರೆಗೆ ನಾನು ಒಬ್ಬನೇ ವಿನೋದ ಇದ್ದೆ; ಆದರೆ ಈಗ ನಾನು ನೂರಾರು ಸ್ಟ್ರಿಂಗ್ ವಿನೋದ ರೂಪದಲ್ಲಿ ನಿಮ್ಮೆದರು ಬರುವೆ. ಇದು ನಿಮ್ಮ ಓಟಿಟಿ ಆಗಿದೆ. ನೀವು ಇಲ್ಲಿ ನಿಮ್ಮ ಅಭಿಪ್ರಾಯ ಮಂಡಿಸಬಹುದು. ಹಿಂದೂ ಧರ್ಮ ಮತ್ತು ಹಿಂದೂಗಳ ಮೇಲೆ ಆಗಿರುವ ಅನ್ಯಾಯ ಮತ್ತು ಅತ್ಯಾಚಾರದ ವಿಡಿಯೋ ತಯಾರಿಸಿ ನಮಗೆ ಕಳುಹಿಸಿ. ಇದು ಜನರ, ರಾಷ್ಟ್ರದ, ಭಾರತದ ಓಟಿಟಿ ಆಗಿದೆ. |
‘ಸ್ಪ್ರಿಂಗ್ ಜೀಯೋ’ದ ಮಾಹಿತಿ !
‘ಓಟಿಟಿ’ಯ ವಿಳಾಸ : www.stringgeo.com
ಯಾವ ಭಾಷೆಯಲ್ಲಿದೆ ? : ಹಿಂದಿ , ಇಂಗ್ಲೀಷ್, ತೆಲುಗು ಮತ್ತು ತಮಿಳು
‘ಬೇಸಿಕ್’ ಶುಲ್ಕ : ಪ್ರತಿ ತಿಂಗಳು ೯೯ ರೂಪಾಯಿ (ಇದರಲ್ಲಿ ಕೇವಲ ‘ಎಕ್ಸಕ್ಲೂಸಿವ್ ಎಕ್ಸೈಸ್’ ಇರುವುದಿಲ್ಲ)
ಸ್ಟ್ಯಾಂಡರ್ಡ್ ಶುಲ್ಕ : ಪ್ರತಿ ತಿಂಗಳು ೨೯೯ ರೂಪಾಯಿ (ಇದರಲ್ಲಿ ‘ಎಕ್ಸಕ್ಲೂಸಿವ್ ಎಕ್ಸೆಸ್’ ಇರುವುದು)
ಪ್ರೀಮಿಯಂ ಶುಲ್ಕ : ಪ್ರತಿ ತಿಂಗಳು ೩೯೯ ರೂಪಾಯಿ (ಇದರಲ್ಲಿ ‘ಎಕ್ಸಕ್ಲೂಸಿವ್ ಎಕ್ಸೆಸ್’ ಇರುವುದು)
ಸಂಪಾದಕೀಯ ನಿಲುವುಹಿಂದುಗಳ ವಿರುದ್ಧ ರೂಪಿಸಲಾಗಿದ್ದ ಷಡ್ಯಂತ್ರವನ್ನು ಬಹಿರಂಗಪಡಿಸುವ ‘ಸ್ಪ್ರಿಂಗ್ ರಿವಿಲ್ಸ್’ ಈ ಸಂಘಟನೆಯು ಮಹತ್ವದ ಹೆಜ್ಜೆ ಇಟ್ಟಿದೆ ಅದಕ್ಕಾಗಿ ಮನಃಪೂರ್ವಕವಾಗಿ ಅಭಿನಂದನೆ ! ಹಿಂದೂ ಪುನರುತ್ಥಾನಕ್ಕಾಗಿ ಕಾರ್ಯನಿರತವಾಗಿರುವ ಇಂತಹ ಸಂಘಟನೆಯೆ ಹಿಂದೂ ಧರ್ಮದ ನಿಜವಾದ ಶಕ್ತಿ ! |