ಬಿಹಾರದ ಶಿಕ್ಷಣ ಮಂತ್ರಿ ಪ್ರಾ. ಚಂದ್ರಶೇಖರ್ ಇವರಿಗೆ ಸವಾಲು ಹಾಕಿದ ಶ್ರೀ ರಾಮಭದ್ರಾಚಾರ್ಯ !
ಬಗಹಾ (ಬಿಹಾರ) – ಬಿಹಾರದ ಶಿಕ್ಷಣ ಸಚಿವ ಪ್ರಾ. ಚಂದ್ರಶೇಖರ್ ಇವರಿಗೆ ಧೈರ್ಯ ಇದ್ದರೆ, ಇಲ್ಲಿ ಬಂದು ಶ್ರೀ ರಾಮಚರಿತ ಮಾನಸದ ಕುರಿತು ಚರ್ಚಿಸಬೇಕು. ಅದರಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ನಾನು ಪಾಟಲಿಪುತ್ರದಲ್ಲಿನ ಗಂಗಾ ನದಿಯಲ್ಲಿ ಸಮಾಧಿ ತೆಗೆದುಕೊಳ್ಳುವೆ ಇಲ್ಲವಾದರೆ ಚಂದ್ರಶೇಖರ್ ಇವರು ರಾಜಕಾರಣದಿಂದ ಸನ್ಯಾಸ ಪಡೆಯಬೇಕೆಂದು ಶ್ರೀರಾಮಭದ್ರಾಚಾರ್ಯ ಇವರು ಸವಾಲು ಹಾಕಿದ್ದಾರೆ. ಅವರು ಬಗಹಾದಲ್ಲಿನ ರಾಮನಗರದಲ್ಲಿ ಮೂರನೇ ದಿನದ ಪ್ರವಚನದಲ್ಲಿ ಮಾತನಾಡುತ್ತಿದ್ದರು. ಶಿಕ್ಷಣ ಸಚಿವ ಪ್ರಾ . ಚಂದ್ರಶೇಖರ್ ಇವರು ಶ್ರೀ ರಾಮ ಚರಿತ ಮಾನಸದಲ್ಲಿ ‘ಪೊಟ್ಯಾಶಿಯಂ ಸಾಯನಾಯಿಡ್’ ಇರುವುದಾಗಿ ದಾವೆ ಮಾಡಿದ್ದರು. (ಜಿಹಾದಿ ಭಯೋತ್ಪಾದಕರು ಯಾವ ವಿಚಾರಧಾರೆಯವರಾಗಿರುತ್ತರೆ, ಅದರ ಬಗ್ಗೆ ಚಂದ್ರಶೇಖರ್ ಎಂದೂ ಮಾತನಾಡುವುದಿಲ್ಲ, ಕಾರಣ ಹಾಗೆ ಮಾಡಿದರೆ ಆಗ ನೇರ ಸರ್ ತನ್ ಸೆ ಜುದಾ (ದೇಹದಿಂದ ತಲೆ ಬೇರೆ ಮಾಡುವುದು) ಫಥವಾ ಹೊರಡುವುದು, ಇದು ಅವರಿಗೆ ತಿಳಿದಿದೆ ! – ಸಂಪಾದಕರು)
೧. ಶ್ರೀ ರಾಮಭದ್ರಾಚಾರ್ಯರು ಮಾತು ಮುಂದುವರೆಸುತ್ತಾ, ಚಂದ್ರಶೇಖರ್ ಇವರ ಅಭಿಪ್ರಾಯ, ಶ್ರೀ ರಾಮ ಚರಿತ ಮಾನಸದಲ್ಲಿ ವ್ಯತ್ಯಾಸ ಇರುವುದು. ಅವರಿಗೆ ಅವರ ತಾಯಿ ಪ್ರಾಮಾಣಿಕವಾಗಿ ಹಾಲು ಕುಡಿಸಿದ್ದರೆ, ಅವರು ಶ್ರೀ ರಾಮ ಚರಿತ ಮಾನಸದ ಬಗ್ಗೆ ಚರ್ಚಿಸಬೇಕು.
೨. ಪ್ರವಚನದ ಸಮಯದಲ್ಲಿ ಶ್ರೀ ರಾಮಭದ್ರಾಚಾರ್ಯ ಇವರು ಬಿಹಾರದಲ್ಲಿ ಜಾತಿ ಜನಗಣತಿಯ ಬಗ್ಗೆ ಕೂಡ ನಿತೀಶ ಕುಮಾರ ಇವರ ಸರಕಾರವನ್ನು ಟೀಕಿಸಿದರು. ಅವರು, ಶ್ರೀ ರಾಮಚರಿತ ಮಾನಸದಲ್ಲಿ ಜಾತಿಯವಾದದ ಬಗ್ಗೆ ಉಲ್ಲೇಖ ಇರುವುದರ ಬಗ್ಗೆ ಬಿಹಾರ ಸರಕಾರದ ಸಚಿವರು ಹೇಳುತ್ತಿದ್ದಾರೆ; ಆದರೆ ಇನ್ನೊಂದು ಕಡೆಗೆ ಅವರದೇ ಸರಕಾರ ಜಾತಿ ಜನಗಣತಿ ನಡೆಸಿ ಬಿಹಾರದ ವಿಭಜನೆ ಮಾಡುವ ಕೆಲಸ ಮಾಡುತ್ತಿದೆ. (ಇದು ಹಿಂದೂ ದ್ವೇಷಿ ರಾಜಕಾರಣದ ನಿಜವಾದ ರೂಪ ! – ಸಂಪಾದಕರು)
ಸಂಪಾದಕೀಯ ನಿಲುವುಹಿಂದೂ ದ್ವೇಷದ ಕಾಮಾಲೆಯಾಗಿರುವ ಜನರು ಯವಾಗಲೂ ಹಿಂದೂಧರ್ಮ ಮತ್ತು ಹಿಂದೂ ಧರ್ಮಗ್ರಂಥದ ಬಗ್ಗೆ ಚರ್ಚೆ ಮಾಡುವುದಿಲ್ಲ; ಕಾರಣ ಅವರು ಇದರ ಅಭ್ಯಾಸ ಮಾಡದೆ ಟೀಕಿಸಿರುತ್ತಾರೆ ಮತ್ತು ಈ ವಾಸ್ತವ ಬಹಿರಂಗವಾಗುವುದರಿಂದ ಅವರು ಇಂತಹ ಸವಾಲುಗಳಿಂದ ದೂರ ಇರುತ್ತಾರೆ ! |