ಲಾಹೋರ್ ಮಾಲಿನ್ಯ ಭಾರತ: ಭಾರತದಿಂದಾಗಿ ಲಾಹೋರ್‌ನಲ್ಲಿ ಮಾಲಿನ್ಯ ಹೆಚ್ಚಾಗಿದೆ- ಪಾಕಿಸ್ತಾನದ ಕುಂಟುನೆಪ!

ಅಂತಾರಾಷ್ಟ್ರೀಯ ವಾಯು ತಪಾಸಣಾ ಮಂಡಳಿಯಿಂದ ಪಾಕಿಸ್ತಾನವು ಸುಳ್ಳುಗಾರನೆಂದು ಸಾಬೀತು!

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದ ಪಂಜಾಬ್‌ನಲ್ಲಿ ಹುಲ್ಲುಗಳನ್ನು ಸುಡುವುದರಿಂದ ಲಾಹೋರ್‌ನಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ; ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಕಡೆಗಣಿಸಲಾಗುತ್ತಿರುವುದರಿಂದ ಪಾಕಿಸ್ತಾನಕ್ಕೆ ಕೈಹೊಸೆಯುತ್ತ ಕುಳಿತುಕೊಳ್ಳುವುದನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಕಂಡು ಬರುತ್ತಿದೆ.

1. ಭಾರತದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶ ಈ ರಾಜ್ಯಗಳಲ್ಲಿ, ದೀಪಾವಳಿಯ ಮೊದಲು ಹುಲ್ಲುಗಳನ್ನು ಸುಡುವುದರಿಂದ ನವ ದೆಹಲಿ ಸೇರಿದಂತೆ ಈ ರಾಜ್ಯಗಳಲ್ಲಿ ಪ್ರತಿ ವರ್ಷ ಮಾಲಿನ್ಯದಲ್ಲಿ ಬಹಳ ಹೆಚ್ಚಳವಾಗುತ್ತದೆ

2. ಈ ವರ್ಷ ಪಾಕಿಸ್ತಾನದ ಲಾಹೋರ್‌ನಲ್ಲೂ ಮಾಲಿನ್ಯ ಹೆಚ್ಚಾಗಿದೆ. ಇದಕ್ಕೆ ಭಾರತವೇ ಹೊಣೆ ಎಂದು ಹೇಳುವ ಪ್ರಯತ್ನ ನಡೆಯಿತು. ಪಾಕಿಸ್ತಾನದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ, ಭಾರತದ ಪಂಜಾಬ್‌ನಲ್ಲಿ ಹುಲ್ಲು ಸುಡುವುದರಿಂದ ಲಾಹೋರ್‌ನಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ಹೇಳಲಾಯಿತು. ಈ ಅಂಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಡಿಸುವ ಬಗ್ಗೆಯೂ ಚರ್ಚೆ ನಡೆಯಿತು.

3. ವಾಸ್ತವವಾಗಿ, ಅಂತರರಾಷ್ಟ್ರೀಯ ವಾಯು ತಪಾಸಣಾ ಮಂಡಳಿಯು ಭಾರತದಲ್ಲಿ ಹುಲ್ಲು ಸುಡುವುದಕ್ಕೂ ಮತ್ತು ಲಾಹೋರ್‌ನಲ್ಲಿನ ಮಾಲಿನ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಸ್ಥಳೀಯ ಸಮಸ್ಯೆಗಳಿಂದ ಮಾಲಿನ್ಯ ಉಂಟಾಗುತ್ತಿದೆ. ಇದಲ್ಲದೇ ಪಂಜಾಬ್‌ನಿಂದ ಲಾಹೋರ್ ನ ದಿಕ್ಕಿಗೆ ಗಾಳಿ ಬೀಸುವುದಿಲ್ಲ ಹಾಗಾಗಿ ಇದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಸಂಪಾದಕೀಯ ನಿಲುವು

ನಾಳೆ ಪಾಕಿಸ್ತಾನ ತನ್ನ ದಿವಾಳಿತನಕ್ಕೆ ಭಾರತವನ್ನು ಹೊಣೆಗಾರರನ್ನಾಗಿ ಮಾಡಿದರೆ ಆಶ್ಚರ್ಯಪಡಬಾರದು !