ಪ್ಯಾರಿಸ್ ಹಿಜಾಬ್ ಕೂಗು : ಪ್ಯಾರಿಸ್‌ನಲ್ಲಿ, ‘ನೀವೆಲ್ಲರೂ ಸಾಯುತ್ತೀರಿ’ ಎಂದು ಕೂಗುತ್ತಿದ್ದ ಹಿಜಾಬ್ ಮಹಿಳೆಯ ಮೇಲೆ ಗುಂಡು ಹಾರಿಸಿದ ಪೊಲೀಸರು !

ಅಲ್ಲಾಹು ಅಕ್ಬರ್ (ಅಲ್ಲಾಹ್ ಮಹಾನ್ ಇದ್ದಾನೆ) ಎನ್ನುತ್ತಾ ಮೆಟ್ರೊ ನಿಲ್ದಾಣದಲ್ಲಿ ಜನರಲ್ಲಿ ಭಯ ಮೂಡಿಸುವ ಪ್ರಯತ್ನ!

(ಹಿಜಾಬ್ ಎನ್ನುವುದು ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಧರಿಸುವ ಬಟ್ಟೆ)

ಪ್ಯಾರಿಸ್ (ಫ್ರಾನ್ಸ್) – ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಮುಸಲ್ಮಾನರು ಮತ್ತು ಯಹೂದಿ ಜನರು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿರುವ ಫ್ರಾನ್ಸ್‌ನಲ್ಲಿ ಸಂಭವನೀಯ ದಾಳಿ ನಡೆಯಬಹುದು ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 7 ರಿಂದ ದೇಶದಲ್ಲಿ 819 ಯಹೂದಿ ವಿರೋಧಿ ಘಟನೆಗಳು ನಡೆದಿದ್ದು, 414 ಜನರ ಬಂಧಿಸಲಾಗಿದೆ ಎಂದು ಎಂದು ಗೃಹಸಚಿವ ಗೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ. ಹೀಗಿರುವಾಗಲೇ ಅಕ್ಟೋಬರ್ 31 ರಂದು ಪ್ಯಾರಿಸ್ ಮೆಟ್ರೋ ನಿಲ್ದಾಣದಲ್ಲಿ ಹಿಜಾಬ್ ಧರಿಸಿದ ಮಹಿಳೆಯೊಬ್ಬರು ‘ನೀವೆಲ್ಲರೂ ಸಾಯುತ್ತೀರಿ’ ಎಂದು ಕೂಗಲು ಪ್ರಾರಂಭಿಸಿದರು. ಈ ವೇಳೆ ಆಕೆಯೂ ‘ಅಲ್ಲಾಹು ಅಕ್ಬರ್’ ಎನ್ನುತ್ತಿದ್ದಳು. ಈ ಬಗ್ಗೆ ಮೆಟ್ರೋ ನಿಲ್ದಾಣದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಮಹಿಳೆಯ ಹೊಟ್ಟೆಗೆ ಗುಂಡು ನುಗ್ಗಿದೆ ಎನ್ನಲಾಗಿದೆ. ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಬಳಿ ಯಾವುದೇ ಆಯುಧ ಇರಲಿಲ್ಲ ಎಂದು ತಿಳಿದುಬಂದಿದೆ. ಮಹಿಳೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಿಬಿಲಿಯೊಥೆಕ್ ಫ್ರಾಂಕೋಯಿಸ್ ಮಿತರಾಂಡ್ ನಿಲ್ದಾಣಕ್ಕೆ ತಲುಪಿದರು ಈ ಸಮಯದಲ್ಲಿ ಅವರು ಮಹಿಳೆಗೆ ಕೆಳಗೆ ಕುಳಿತುಕೊಳ್ಳುವಂತೆ ಆದೇಶಿಸಿದರು. ಆದರೂ ಆಕೆ ಘೋಷಣೆಗಳನ್ನು ಮುಂದುವರೆಸುತ್ತಾ ಅವರೆಡೆಗೆ ಬರತೊಡಗಿದಳು. ಹಾಗಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ಫ್ರಾನ್ಸ್‌ನ ಅರಾಸ್ ನಗರದಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ನಡೆಸಿದ ದಾಳಿಯಲ್ಲಿ ಅವನ ಶಿಕ್ಷಕನೊಬ್ಬ ಕೊಲ್ಲಲ್ಪಟ್ಟಿದ್ದನು. ಈ ವೇಳೆ ವಿದ್ಯಾರ್ಥಿಯೂ ಅಲ್ಲಾಹು ಅಕ್ಬರ್ ಎನ್ನುತ್ತಿದ್ದನು.