Electoral bonds : ರಾಜಕೀಯ ಪಕ್ಷಗಳಿಗೆ ಸಿಗುವ ದೇಣಿಗೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಅವಶ್ಯಕತೆಯಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರ ಸಾದರಪಡಿಸಿದ ನಿಲುವು

ನವದೆಹಲಿ – ರಾಜಕೀಯ ಪಕ್ಷಗಳು ದೇಣಿಗೆ ಪಡೆಯಲು ರಚಿಸಿರುವ ‘ಎಲೆಕ್ಟೋರಲ್ ಬಾಂಡ್ ಸಿಸ್ಟಮ್’ ಅನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕುರಿತು ವಿಚಾರಣೆಗೂ ಮುನ್ನ ಅಕ್ಟೋಬರ್ 30ರಂದು ಭಾರತ ಸರಕಾರದ ಮುಖ್ಯನ್ಯಾಯವಾದಿ ಆರ್. ವೆಂಕಟರಮಣಿಯವರು ನ್ಯಾಯಾಲಯದಲ್ಲಿ ಉತ್ತರವನ್ನು ಸಾದರಪಡಿಸಿದರು. ರಾಜಕೀಯ ಪಕ್ಷಗಳಿಗೆ ಸಿಗುವ ದೇಣಿಗೆ ಬಗ್ಗೆ ಮಾಹಿತಿ ಪಡೆಯುವುದು ನಾಗರಿಕರ ಮೂಲಭೂತ ಹಕ್ಕಲ್ಲ. ಆದುದರಿಂದ ಜನರಿಗೆ ದೇಣಿಗೆ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಹೀಗಿದ್ದರೂ ‘ಎಲೆಕ್ಟೋರಲ್ ಬಾಂಡ್’ ವ್ಯವಸ್ಥೆ’ಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ವೆಂಕಟರಮಣಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರ ನೇತೃತ್ವದಲ್ಲಿ 5 ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಅಕ್ಟೋಬರ್ 31 ರಿಂದ ಇದರ ವಿಚಾರಣೆ ನಡೆಸುತ್ತಿದೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ಫೋರಮ್ಸ್ ‘ಈ ಸಂಸ್ಥೆಯು `ಇಲೆಕ್ಟೊರಲ್ ಬಾಂಡ್ ವ್ಯವಸ್ಥೆ’ಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಈ ಸಂಸ್ಥೆಯ ಪರವಾಗಿ ನ್ಯಾಯವಾದಿ ಪ್ರಶಾಂತ ಭೂಷಣ ಇವರು ಈ ಖಟ್ಲೆಯನ್ನು ನಡೆಸುತ್ತಿದ್ದಾರೆ. ಭೂಷಣ ಇವರು ವಾದದ ಸಮಯದಲ್ಲಿ ಆಡಳಿತ ಪಕ್ಷಗಳು ದೊಡ್ಡ ಸಂಸ್ಥೆಗಳಿಂದ ದೇಣಿಗೆ ರೂಪದಲ್ಲಿ ಹಣವನ್ನು ಪಡೆಯುತ್ತವೆ ಮತ್ತು ನಂತರ ಸರಕಾರವು ಆ ಸಂಸ್ಥೆಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ರೂಪಿಸುತ್ತದೆ’. ಇದರಿಂದ ಆ ಸಂಸ್ಥೆಗಳಿಗೆ ಆರ್ಥಿಕ ಲಾಭ ಆಗುವುದರಿಂದ ಈ ವ್ಯವಸ್ಥೆ ರದ್ದುಪಡಿಸಬೇಕು ಎಂದು ಹೇಳಿದರು.

ಏನಿದು ‘ಚುನಾವಣಾ ಬಾಂಡ್ ವ್ಯವಸ್ಥೆ’ !

ರಾಜಕೀಯ ಪಕ್ಷಗಳು ಹಣವನ್ನು ಸಂಗ್ರಹಿಸಲು ಈ ವ್ಯವಸ್ಥೆಯ ಮೂಲಕ, ರಾಜಕೀಯ ಪಕ್ಷಗಳಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಬಹುದು. ಈ ‘ಬಾಂಡ್’ಗಳಲ್ಲಿ 1 ಸಾವಿರದಿಂದ 1 ಕೋಟಿ ರೂ.ವರೆಗೆ ಹೂಡಿಕೆ ಮಾಡಬಹುದು. ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ ಕೆಲವು ಶಾಖೆಗಳಲ್ಲಿ ಮಾತ್ರ ಈ ಹೂಡಿಕೆಯನ್ನು ಮಾಡಬಹುದು. ಈ ನಿಧಿ ಯಾರಿಂದ ಬಂದಿದೆಯೆಂದು ರಾಜಕೀಯ ಪಕ್ಷಗಳಿಂದ ರಹಸ್ಯವಾಗಿಡಲಾಗುತ್ತದೆ. 2018ರಲ್ಲಿ ಭಾಜಪ ಸರಕಾರವು ಕಾನೂನು ರೂಪಿಸಿ ಈ ವ್ಯವಸ್ಥೆಯನ್ನು ಜ್ಯಾರಿಗೆ ತಂದಿತ್ತು.