ಎರ್ನಾಕುಲಂ (ಕೇರಳ) – ಇಲ್ಲಿ ಕ್ರೈಸ್ತರ ಪ್ರಾರ್ಥನಾ ಸಭೆಯಲ್ಲಿ ನಡೆದ 3 ಬಾಂಬ್ ಸ್ಫೋಟಗಳಲ್ಲಿ ಸತ್ತವರ ಸಂಖ್ಯೆ 3 ಕ್ಕೆ ಏರಿದೆ. ಇದರಲ್ಲಿ 12 ವರ್ಷದ ಬಾಲಕನೂ ಸೇರಿದ್ದಾನೆ. ಗಾಯಗೊಂಡಿರುವ 41 ಜನರಲ್ಲಿ ಐವರ ಸ್ಥಿತಿಯು ಚಿಂತಾಜನಕವಾಗಿದೆ. 12 ಜನರು ತೀವ್ರ ನಿಗಾ ಘಟಕದಲ್ಲಿದ್ದರೆ, ಮೂವರು ವೆಂಟಿಲೇಟರ್ ಮೇಲಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ರವರು ಮಾತನಾಡುತ್ತ ಹೆಚ್ಚುವರಿ ಪೊಲೀಸ್ ಮಹಾಸಂಚಾಲಕ (ಕಾನೂನು ಮತ್ತು ಸುವ್ಯವಸ್ಥೆ) ರ ನೇತೃತ್ವದಲ್ಲಿ 20 ಸದಸ್ಯರ ವಿಶೇಷ ತಂಡವೊಂದು ಈ ಘಟನೆಯ ತನಿಖೆಯನ್ನು ನಡೆಸಲಿದೆ, ಎಂದು ಹೇಳಿದ್ದಾರೆ.
ಯೆಹೋವನ ‘ಸಾಕ್ಷಿದಾರ’ ಗುಂಪಿನ ಸಿದ್ಧಾಂತವು ರಾಷ್ಟ್ರವಿರೋಧಿಯಾಗಿರುವುದರಿಂದ ಬಾಂಬ್ ಸ್ಫೋಟ ನಡೆಸಿದ್ದೇನೆ ! – ಶರಣಾದ ಡೊಮಿನಿಕ್ ಮಾರ್ಟಿನ್ ಹೇಳಿಕೆ
ಬಾಂಬ್ ಸ್ಫೋಟದ ಕೆಲವೇ ಗಂಟೆಗಳಲ್ಲಿ ಕೇರಳದ ಕೋಡಕರಾ ಪೊಲೀಸ್ ಠಾಣೆಯಲ್ಲಿ ಡೊಮಿನಿಕ್ ಮಾರ್ಟಿನ್ ಶರಣಾಗಿ ಬಾಂಬ್ ಸ್ಫೋಟವನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಲಾಗಿದೆ. ಬಾಂಬ್ ಸ್ಫೋಟಕ್ಕೂ ಮುನ್ನ ಮಾರ್ಟಿನ್ ‘ಫೇಸ್ ಬುಕ್ ಲೈವ್’ ಮಾಧ್ಯಮದ ಮೂಲಕ ತನ್ನ ವಿಚಾರವನ್ನು ವ್ಯಕ್ತಪಡಿಸಿದ್ದನು. ಅದರಲ್ಲಿ ಅವನು ತಾನು ಕ್ರೈಸ್ತ ಧರ್ಮದ ಯೆಹೋವನ ಸಾಕ್ಷಿದಾರ ಗುಂಪಿಗೆ ಸೇರಿದ್ದು ತನಗೆ ಅವರ ವಿಚಾರಸರಣಿಯು ಇಷ್ಟವಾಗುತ್ತಿರಲಿಲ್ಲ. ಅವರು ದೇಶದ ಯುವಕರ ಮನಸ್ಸನ್ನು ವಿಷಪೂರಿತಗೊಳಿಸುತ್ತಿದ್ದರಿಂದ ಅವರು ದೇಶಕ್ಕೆ ಅಪಾಯವೆಂದು ಮಾರ್ಟಿನ್ ನಂಬಿದ್ದನು; ಇದರಿಂದಾಗಿ ಮಾರ್ಟಿನನು `ಸಾಕ್ಷಿದಾರ’ ಗುಂಪಿನ ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಫೋಟ ಮಾಡಿದನು.
ಕೇರಳ ಪೊಲೀಸರು ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಫೋಟವನ್ನು ನಡೆಸಿದ್ದು ಮಾರ್ಟಿನ್ ಎಂಬುದನ್ನು ಖಚಿತಪಡಿಸಿದ್ದಾರೆ. ಪೊಲೀಸರಿಗೆ ಆತನ ಮೊಬೈಲ್ ನಲ್ಲಿ ಬಾಂಬ್ ಸ್ಫೋಟ ಮಾಡಲು ಬಳಸಿದ ರಿಮೋಟ್ ಕಂಟ್ರೋಲ್‌ನ ಪುರಾವೆ ಸಿಕ್ಕಿದೆ.
ಡೊಮಿನಿಕ್ ಮಾರ್ಟಿನ್ ನು ಅನೇಕ ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದನು !
ಡೊಮಿನಿಕ್ ಮಾರ್ಟಿನ್ ನು ಕಳೆದ 15 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದನು. ಅಲ್ಲಿ ಅವನು ಎಲೆಕ್ಟ್ರಿಷಿಯನ್ ಆಗಿ ಕೆಲಸ ಕೆಲಸ ಮಾಡುತ್ತಿದ್ದನು. ಅವನಿಗೆ ‘ಎಲೆಕ್ಟ್ರಿಕ್ ಸರ್ಕ್ಯೂಟ್’ ತಯಾರಿಸುವ ಸಂಪೂರ್ಣ ಜ್ಞಾನವಿತ್ತು. 2 ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದನು. ದೇಶಕ್ಕೆ ಮರಳಿದ ನಂತರ ಅವನು ಚಿಕ್ಕ ಮಕ್ಕಳಿಗೆ ಪಾಠ ಹೇಳುವ ಕೆಲಸ ಮಾಡುತ್ತಿದ್ದನು. ತನಿಖಾ ಸಂಸ್ಥೆಯು ಅವನು ದುಬೈನಲ್ಲಿದ್ದಾಗ ಯಾರೊಂದಿಗೆ ಸಂಪರ್ಕದಲ್ಲಿದ್ದನು ಎಂಬುದನ್ನು ಪರಿಶೀಲಿಸುತ್ತಿದೆ.