ದೆಹಲಿಯ ಗಲಭೆಯಲ್ಲಿ ಹಿಂದೂ ಯುವಕನನ್ನು ಬರ್ಬರವಾಗಿ ಕೊಂದ ೧೧ ಮುಸಲ್ಮಾನ ಆರೋಪಿಗಳ ಖುಲಾಸೆ!

ನವದೆಹಲಿ – ೨೦೨೦ ರಲ್ಲಿ ಇಲ್ಲಿ ನಡೆದ ಗಲಭೆಯಲ್ಲಿ ದಿಲಬರ ನೇಗಿ ಹೆಸರಿನ ಹಿಂದೂ ಯುವಕನನ್ನು ಭೀಕರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ೧೧ ಮುಸಲ್ಮಾನರನ್ನು ದೆಹಲಿಯ ಕಡಕಡಡುಮಾ ನ್ಯಾಯಾಲಯವು ನಿರ್ದೋಷಿಗಳೆಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ, ಆದರೆ ಮಹಮ್ಮದ್ ಶಾಹನವಾಜ ಇವನನ್ನು ಬಿಡುಗಡೆಗೊಳಿಸಲು ನಿರಾಕರಿಸಿದೆ. ಮಹಮ್ಮದ ಪೈಝಲ, ಆಜಾದ, ಅಸರಫ ಅಲಿ, ರಾಶೀದ್, (ಮೋನು), ಶಾಹರುಖ , ಮಹಮ್ಮದ್ ಶೋಯಬ (ಛುಟವಾ ), ಪರವೇಜ, ರಾಶೀದ (ರಾಜ) ಮಹಮ್ಮದ ತಾಹಿರ, ಸಲ್ಮಾನ ಮತ್ತು ಸೋನು ಸೈಫಿ ಎಂದು ಈ ಮುಸಲ್ಮಾನರ ಹೆಸರುಗಳಾಗಿವೆ. ನೇಗಿ ಇಲ್ಲಿಯ ಮಿಠಾಯಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಈ ಅಂಗಡಿಯಲ್ಲಿ ಅವನ ಕೈ ಕಾಲು ಮುರಿದು, ನಂತರ ಅವನನ್ನು ಜೀವಂತವಾಗಿ ಸುಟ್ಟು ಹಾಕಲಾಯಿತು. ಮಹಮ್ಮದ್ ಶಾಹನವಾಜ ಮೇಲೆ ಕೊಲೆ , ಗಲಭೆ, ಜನಾಂಗದವರನ್ನುಗುಂಪುಗೂಡಿಸುವುದು ಮುಂತಾದ ಆರೋಪಗಳಿವೆ.

ನ್ಯಾಯಾಧೀಶರಾದ ಪುಲಸ್ತ್ಯ ಪ್ರಮಾಚಲ ಇವರು ತೀರ್ಪು ನೀಡುವಾಗ, ಆರೋಪಿಯ ಗುರುತು ಗಲಭೆಯಲ್ಲಿನ ಅನೇಕ ವಿಡಿಯೋಗಳಲ್ಲಿ ಪತ್ತೆ ಆಗಿದೆ ; ಆದರೆ ಇವರೆಲ್ಲರೂ ಶಾಹನವಾಜನೊಂದಿಗೆ ಮಿಠಾಯಿ ಅಂಗಡಿಯ ಗೋದಾಮಿಗೆ ಬೆಂಕಿ ಹಚ್ಚುವಾಗ ಕಾಣಿಸಲಿಲ್ಲ. ಶಾಹನವಾಜ್ ವಿರುದ್ಧ ಗುಂಪಿನೊಂದಿಗೆ ಹಿಂದೂಗಳ ಮನೆ, ಅಂಗಡಿಗಳು ಮುಂತಾದವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚುತ್ತಿರುವ ಸಾಕ್ಷಿಗಳು ದೊರೆತಿವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ಆರೋಪಿಗಳು ನಿರಪರಾಧಿಗಳಾಗಿದ್ದರೆ, ಹಿಂದೂ ಯುವಕನನ್ನು ಕೊಂದ ಮತಾಂಧರು ಯಾರು ? ಇದನ್ನು ಈಗ ಯಾರು ಹುಡುಕುವರು ?