ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದಿಂದ ‘ಘೋರಿ’ ಕ್ಷಿಪಣಿಯ ಯಶಸ್ವಿ ಪರೀಕ್ಷೆ !

ರಾವಲ್ಪಿಂಡಿ (ಪಾಕಿಸ್ತಾನ) – ಪಾಕಿಸ್ತಾನವು ಅಕ್ಟೋಬರ್ 24 ರಂದು ‘ಘೋರಿ’ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯ ಮಾರಕ ಕ್ಷಮತೆ 1 ಸಾವಿರ 300 ಕಿ.ಮೀ ವರೆಗೆ ಇದೆ. 5 ವರ್ಷಗಳ ಹಿಂದೆಯೂ ಇದೇ ಕ್ಷಿಪಣಿಯನ್ನು ಪರೀಕ್ಷಿಸಲಾಗಿತ್ತು. ಈ ಕ್ಷಿಪಣಿ 700 ಕೆಜಿ ತೂಕದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು ಎಂದು ಪಾಕಿಸ್ತಾನ ಮೇಲಿಂದ ಮೇಲೆ ಹೇಳುತ್ತಿದೆ. ಇದರೊಂದಿಗೆ ಕರಾಚಿ ಮತ್ತು ಸಿಯಾಲ್‌ಕೋಟ್ ನಗರಗಳ ನಡುವಿನ ಭಾರತದ ಗಡಿಯಲ್ಲಿ 6 ಸ್ಥಳಗಳಲ್ಲಿ ಈ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲಿಂದ ಜಲಂಧರ್, ಜೈಸಲ್ಮೇರ್, ದೆಹಲಿ, ಕರ್ಣಾವತಿ, ಮುಂಬಯಿ, ನಾಗಪುರ, ಚೆನ್ನೈ ಮುಂತಾದ ಭಾರತೀಯ ನಗರಗಳನ್ನು ಗುರಿಯಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದೆ ಅಂದರೆ ಅಕ್ಟೋಬರ್ 18ರಂದು ‘ಅಬಾಬಿಲ್’ ಹೆಸರಿನ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯು ಯಶಸ್ವಿಯಾಗಿತ್ತು.

ಸಂಪಾದಕೀಯ ನಿಲುವು

ಯಾವುದಾದರೊಂದು ದೇಶವು ಹಸಿವಿನಿಂದ ಕಂಗೆಟ್ಟಿರುವಾಗ ಮೊದಲು ಆ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತದೆ ಮತ್ತು ದೇಶದ ಖಜಾನೆಯಲ್ಲಿರುವ ಹಣವನ್ನು ವೆಚ್ಚ ಮಾಡುತ್ತದೆ. ಆದರೆ ಪಾಕಿಸ್ತಾನವು ಅತಿರೇಕದ ಭಾರತ ದ್ವೇಷದಿಂದ ತುಂಬಿರುವುದರಿಂದ ಅದು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸುವ ಬದಲು, ಅದು ಪರಮಾಣು ಅಸ್ತ್ರದಿಂದ ಸಜ್ಜಿತವಾಗಲು ಪ್ರಯತ್ನಿಸುತ್ತಿದೆ, ಇಂತಹ ಪಾಕಿಸ್ತಾನಕ್ಕೆ ಭಾರತವು ತಕ್ಕ ಪಾಠವನ್ನು ಕಲಿಸಲು ಪ್ರಯತ್ನಿಸಬೇಕು !