ಇತರ ಧರ್ಮದವರು ಬಹುಸಂಖ್ಯಾತ ಇರುವಲ್ಲಿ ಮತಾಂಧತೆಯ ಕ್ರೌರ್ಯದಿಂದ ಮೆರೆಯುತ್ತಾರೆ ! – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ – ಪ್ರಭು ಶ್ರೀರಾಮನು ನಮಗಾಗಿ ಆದರ್ಶ ವಾಗಿರುವುದರಿಂದ ಸಾವಿರಾರು ವರ್ಷಗಳಾದರೂ ನಾವು ಶ್ರೀರಾಮನ ಆರಾಧನೆ ಮಾಡುತ್ತಾ ಅವನ ಆದರ್ಶಗಳನ್ನು ಪಾಲಿಸುತ್ತಿದ್ದೇವೆ; ಆದರೆ ಇತರ ಧರ್ಮದವರಿಗೆ ಸ್ವತಃ ಎಲ್ಲಿ ಬಹುಸಂಖ್ಯಾತರಾಗಿರುತ್ತಾರೆ ಅಲ್ಲಿ ಮತಾಂಧತೆಯ ಕ್ರೂರತನದಿಂದ ಮೆರೆಯುತ್ತಾರೆ. ಇದರ ಚಿಕ್ಕ ಉದಾಹರಣೆ ಶಿವಮೊಗ್ಗದಲ್ಲಿನ ಗಲಭೆ ಎಂದು ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನತೀರ್ಥ ಇವರು ಹೇಳಿಕೆ ನೀಡಿದರು. ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಈದ್‌ ಪ್ರಯುಕ್ತ ನಡೆಸಲಾದ ಮೆರವಣಿಗೆಯ ಸಮಯದಲ್ಲಿ ಮತಾಂಧ ಮುಸಲ್ಮಾನರಿಂದ ಕಲ್ಲು ತೂರಾಟ ನಡೆಸಿದರು. ಅದರ ಬಗ್ಗೆ ಸ್ವಾಮೀಜಿ ಇಲ್ಲಿಯ ಎಂ.ಜಿ.ಎಂ. ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದಿಂದ ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪೇಜಾವರ ಸ್ವಾಮೀಜಿಯವರು ಮಾತು ಮುಂದುವರಿಸಿ, ‘ಶಿವಮೊಗ್ಗದಲ್ಲಿನ ಗಲಭೆಯಲ್ಲಿ ಎಷ್ಟು ಅಂಗಡಿಗಳು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ ? ಎಷ್ಟು ವಾಹನಗಳಿಗೆ, ಪ್ರಾರ್ಥನಾ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿದೆ ? ನಾವು ಹಿಂದೂಗಳು ಶಾಂತಿ ಪ್ರಿಯರಾಗಿದ್ದೇವೆ, ನಮ್ಮ ಧರ್ಮದ ಪ್ರತೀಕ ಶ್ರೀರಾಮಚಂದ್ರನಾಗಿದ್ದಾನೆ, ಅವನೇ ನಮಗೆ ಆದರ್ಶನಾಗಿದ್ದಾನೆ. ಈ ದೇಶದ ಕಣ ಕಣ ಪವಿತ್ರವಾಗಿದೆ. ತಾಯಿ ಸ್ವರ್ಗಕ್ಕಿಂತ ಶ್ರೇಷ್ಠವಾಗಿದ್ದಾಳೆ. ನಾವು ಕಲ್ಲು ತೂರುವವರಲ್ಲ, ತಲೆ ಒಡೆಯುವವರಲ್ಲ. ಒಳ್ಳೆಯ ವಿಚಾರಕ್ಕಾಗಿ ನಮ್ಮ ಹೃದಯ ಮಂದಿರದ ಬಾಗಿಲು ಯಾವಾಗಲೂ ತೆರೆದಿರುತ್ತದೆ’ ಎಂದು ಹೇಳಿದರು.