ಅಕ್ಟೋಬರ್ ೨೮ ರಂದು ಇರುವ ಖಂಡಗ್ರಾಸ ಚಂದ್ರಗ್ರಹಣದ ನಿಮಿತ್ತ
ಗ್ರಹಣಕಾಲದಲ್ಲಿ ಊಟ ಮಾಡುವುದು ತಪ್ಪು
ಸೂರ್ಯಚನ್ದ್ರಗ್ರಹೇ ಭುಕ್ತ್ವಾ ಪ್ರಾಜಾಪತ್ಯೇನ ಶುದ್ಧ್ಯತಿ | – ದೇವಲಸ್ಮೃತಿ
ಅರ್ಥ : ಸೂರ್ಯ ಅಥವಾ ಚಂದ್ರ ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದು ತಪ್ಪು. ಅಂತಹ ತಪ್ಪಾದರೆ ಪ್ರಾಯಶ್ಚಿತ್ತವೆಂದು ‘ಪ್ರಾಜಾಪತ್ಯ’ ವ್ರತವನ್ನು ಮಾಡಬೇಕು.
ಕೆಲವು ವರ್ಷಗಳ ನಂತರ ವಿದೇಶದಲ್ಲಿ ‘ಗ್ರಹಣಕಾಲದಲ್ಲಿ ಆಹಾರವನ್ನು ಸೇವಿಸುವುದರಿಂದ ಶರೀರದ ಮೇಲಾಗುವ ದುಷ್ಪರಿಣಾಮ’ಗಳ ಈ ಕುರಿತು ‘ಸಂಶೋಧನೆ’ ಪ್ರಕಟಿಸಲಾಗುವುದು. ಆಗ ವಿಜ್ಞಾನವಾದಿಗಳು (?) ಗ್ರಹಣಕಾಲದಲ್ಲಿ ಉಪವಾಸ ಮಾಡುವರು.
ಗ್ರಹಣಕಾಲದಲ್ಲಿ ಉಪವಾಸ ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭ
‘ಸಾಮಾನ್ಯವಾಗಿ ಊಟ ಮಾಡಿದ ನಂತರ ನಮಗೆ ಸುಸ್ತಾಗುತ್ತದೆ, ಅಂದರೆ ದೇಹದಲ್ಲಿ ತಮೋಗುಣ ಹೆಚ್ಚಾಗುತ್ತದೆ. ಉಪವಾಸ ಮಾಡುವುದರಿಂದ ಸುಸ್ತಾಗುವುದಿಲ್ಲ, ಅಂದರೆ ತಮೋಗುಣ ಹೆಚ್ಚಾಗುವುದಿಲ್ಲ. ಬದಲಾಗಿ ಸತ್ತ್ವಗುಣ ಹೆಚ್ಚಾಗುತ್ತದೆ. ಗ್ರಹಣಕಾಲದಲ್ಲಿ ಉಪವಾಸವನ್ನು ಮಾಡುವುದರಿಂದ ಸತ್ತ್ವಗುಣ ಹೆಚ್ಚಾಗುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಯು ಚೆನ್ನಾಗಿ ಆಗುತ್ತದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೧೧.೨೦೨೨)