Parva : ‘ಮಹಾಭಾರತ ಇತಿಹಾಸವೋ ಪುರಾಣವೋ’ ವಿಷಯದ ಕುರಿತು ‘ಪರ್ವ’ ಈ ಮುಂಬರುವ ಚಲನಚಿತ್ರವು ಬೆಳಕು ಚೆಲ್ಲಲಿದೆ !

  • ಶ್ರೇಷ್ಠ ಇತಿಹಾಸಕಾರ ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಬರೆದ ಪುಸ್ತಕ ಆಧಾರಿತ ಸಿನಿಮಾ !

  • ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ‘ಎಕ್ಸ್’ ನಿಂದ ಮಾಹಿತಿಯ ವೀಡಿಯೊ ಪ್ರಸಾರ !

ಮುಂಬಯಿ – ‘ಮಹಾಭಾರತ ಇತಿಹಾಸವೋ ಅಥವಾ ಪುರಾಣವೋ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪರ್ವ: ಧರ್ಮದ ಮಹಾಕಾವ್ಯ’ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸಲು ಹೊರಟಿದೆ. ಚಲನಚಿತ್ರವು 3 ಭಾಗಗಳಲ್ಲಿ ತಯಾರಾಗುತ್ತಿದ್ದು, ಶ್ರೇಷ್ಠ ಇತಿಹಾಸಕಾರ ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಬರೆದಿರುವ ಪುಸ್ತಕವನ್ನು ಆಧರಿಸಿ ‘ಪರ್ವ’ ಮೂಡಿಬರುತ್ತಿದೆ ಎಂದು ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ. ಪಲ್ಲವಿ ಜೋಶಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ಅಗ್ನಿಹೋತ್ರಿ ಇವರು ಈ ಚಲನಚಿತ್ರದ ಒಂದು ನಿಮಿಷದ ವೀಡಿಯೊವನ್ನು ಸಹ ಪ್ರಸಾರ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಅಗ್ನಿಹೋತ್ರಿ ಇವರು, ‘ಮಹಾಭಾರತವು ಕೇವಲ ಮಹಾಕಾವ್ಯವೇ ಅಥವಾ ಭಾರತದ ಆತ್ಮವೇ ? ಶತಮಾನಗಳಿಂದ, ಮಹಾಭಾರತವು ಇತಿಹಾಸವೇ ಅಥವಾ ಕೇವಲ ಪುರಾಣವೇ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. 17 ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇತಿಹಾಸಕಾರ ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಅವರು ‘ಪರ್ವ – ಯುದ್ಧ, ಶಾಂತಿ, ಪ್ರೀತಿ, ಸಾವು, ದೇವರು ಮತ್ತು ಮನುಷ್ಯ’ ಎಂಬ ಗ್ರಂಥವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ‘ಮಾಸ್ಟರ್ ಪೀಸ್ ಆಫ್ ಮಾಸ್ಟರ್ ಪೀಸ್’ ಎಂದು ಕರೆಯಲು ಕಾರಣವಿರಬೇಕು. ಈ ಪುಸ್ತಕವನ್ನು ಸಂಸ್ಕೃತ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ. ಇದಲ್ಲದೆ, ಪುಸ್ತಕವು ಇಂಗ್ಲಿಷ್, ಮ್ಯಾಂಡರಿನ್, ಚೈನೀಸ್ ಮತ್ತು ರಷ್ಯನ್ ಭಾಷೆಗಳಲ್ಲಿಯೂ ಪ್ರಕಾಶಿಸಲಾಗಿದೆ. ಪುಸ್ತಕವು ಪ್ರತಿ ಭಾಷೆಯಲ್ಲೂ ‘ಬೆಸ್ಟ್ ಸೆಲ್ಲರ್’ ಆಗಿದೆ. ಈ ಪುಸ್ತಕವನ್ನು ಆಧರಿಸಿದ ‘ಪರ್ವ’ ಚಲನಚಿತ್ರ 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ.’

ಸಂಪಾದಕೀಯ ನಿಲುವು

ಕಳೆದ 200 ವರ್ಷಗಳಲ್ಲಿ, ಮೊದಲು ಬ್ರಿಟಿಷರು ಮತ್ತು ನಂತರ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಭಾರತದ ಇತಿಹಾಸದ ಚಿಂದಿ ಚಿತ್ರಾನ್ನ ಮಾಡಿದ್ದಾರೆ. ಅದಕ್ಕಾಗಿಯೇ ಭಾರತದ ನೈಜ ಇತಿಹಾಸವನ್ನು ಮತ್ತೆ ಬರೆಯುವುದು ಅನಿವಾರ್ಯವಾಗಿದೆ. ನಿರ್ಮಾಪಕ ವಿವೇಕ ರಂಜನ್ ಅಗ್ನಿಹೋತ್ರಿ ಅವರ ಈ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ !