Pakistan Zindabad ? : ಪಾಕಿಸ್ತಾನ್-ಆಸ್ಟ್ರೇಲಿಯಾ ಪಂದ್ಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಈ ಘೋಷಣೆ ನೀಡಲು ನಿರ್ಬಂಧ !

  • ಬೆಂಗಳೂರು ಪೊಲೀಸರ ಶ್ಲಾಘನೀಯ ಕಾರ್ಯ !

  • ‘ಭಾರತ ಅಂತರಾಷ್ಟ್ರೀಯ ಪಂದ್ಯ ಆಯೋಜಿಸುವ ಯೋಗ್ಯತೆ ಇಲ್ಲ’, ಈ ರೀತಿ ಜಾತ್ಯಾತೀತರ ವಿಷಕಾರಿಕೆ !

ಬೆಂಗಳೂರು – ಅಕ್ಟೋಬರ್ ೨೦ ರಂದು ಬೆಂಗಳೂರಿನಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯದ ಸಮಯದಲ್ಲಿ ವಿವಾದ ನಡೆಯಿತು. ಓರ್ವ ಪಾಕಿಸ್ತಾನಿ ಬೆಂಬಲಿಗನು ಮೈದಾನದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದೂ ಘೋಷಣೆ ನೀಡಿದನು. ಅದಕ್ಕೆ ಬೆಂಗಳೂರು ಪೊಲೀಸರು ಪಾಕಿಸ್ತಾನ ಬೆಂಬನ ನೀಡಿದವನಿಗೆ ಹೀಗೆ ಮಾಡದಿರಲು ತಿಳಿಸಿ ಹೇಳಿದರು. ಅದರ ಬಗ್ಗೆ ಅವನು ಪೊಲೀಸರ ಜೊತೆಗೆ ವಾದಕ್ಕೆ ಇಳಿದನು. ಪಾಕಿಸ್ತಾನ ಬೆಂಬಲಿಗನು, ‘ಪಾಕಿಸ್ತಾನ್ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ನಡೆಯುವಾಗ ವೀಕ್ಷಕರಿಂದ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ನೀಡಲಾಯಿತು: ಹಾಗಾದರೆ ನಾವು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಏಕೆ ನೀಡಲು ಸಾಧ್ಯವಿಲ್ಲ ? ಎಂದು ವಿಚಾರಿಸಿದಾಗ ಅದಕ್ಕೆ ಪೊಲೀಸ ಸಿಬ್ಬಂದಿ, ‘ಭಾರತ್ ಮಾತಾ ಕೀ ಜೈ’ ಈ ಘೋಷಣೆ ನೀಡಬಹುದು, ಆದರೆ ‘ಪಾಕಿಸ್ತಾನ್ ಜಿಂದಾಬಾದ್’ ಇಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ಪಾಕಿಸ್ತಾನ ಪ್ರೇಮಿ ಭಾರತೀಯರು ಇದನ್ನು ವಿರೋಧಿಸಿದ್ದಾರೆ.

ಅಕ್ಟೋಬರ್ ೧೪ ರಂದು ಭಾರತದಿಂದ ಪಾಕಿಸ್ತಾನವು ಹೀನಾಯ ಸೋಲುಂಡ ನಂತರ ಪಾಕಿಸ್ತಾನದಿಂದ ಅಂತರಾಷ್ಟ್ರೀಯ ಕ್ರಿಕೆಟ್ ಪರಿಷತ್ತಿಗೆ ದೂರು ನೀಡಿತ್ತು. ಇದರಲ್ಲಿ ಪಾಕಿಸ್ತಾನದ ಆಟಗಾರರು ಪವೇಲಿಂಗೆ ಹಿಂತಿರುಗುವಾಗ ಕೆಲವು ವೀಕ್ಷಕರು ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡಿರುವ ಆರೋಪ ಮಾಡಲಾಗಿತ್ತು. ವಿಶೇಷವೆಂದರೆ ಬೆಂಗಳೂರಿನಲ್ಲಿ ಕೂಡ ಆಸ್ಟ್ರೇಲಿಯನ್ ಸಂಘದಿಂದ ಪಾಕಿಸ್ತಾನಿ ಕ್ರಿಕೆಟ್ ಸಂಘಕ್ಕೆ ಮಣ್ಣುಮುಕ್ಕಿಸಿದೆ.

ಸಂಪಾದಕೀಯ ನಿಲುವು

‘ಭಾರತದ ಯೋಗ್ಯತೆ ಏನು ಇದೆ ಮತ್ತು ಏನು ಇಲ್ಲ’, ಇದನ್ನು ಹೇಳುವ ಯೋಗ್ಯತೆ ಆದರೂ ಈ ಕಥಿತ ಜಾತ್ಯತೀತರಿಗೆ ಇದೆಯೇ ? ಇಂದು ಅವರ ಯೋಗ್ಯತೆ ಏನು ಎಂಬುದು ಪ್ರಜಾಪ್ರಭುತ್ವ ಭಾರತದಲ್ಲಿ ಅವರನ್ನು ಮನೆಯಲ್ಲಿ ಕೂಡಿಸಿ ತೋರಿಸಿದ್ದಾರೆ, ಇದೇ ಸತ್ಯ !

ಭಾರತೀಯ ಆಟಗಾರರನ್ನು ಕಳೆದ ೪೦ ವರ್ಷದಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಆಗಿರುದರಿಂದ ಬಹಳ ಅನ್ಯಾಯ ಮತ್ತು ಅವಮಾನಕಾರಿಯಾಗಿ ನಡೆಸಿಕೊಂಡಿದ್ದಾರೆ. ಆದ್ದರಿಂದ ‘ಗಾಂಧಿಗಿರಿ’ ನಡೆಸುವುದರಕ್ಕಿಂತ ಭಾರತ ದ್ವೇಷ ನರಗಳಲ್ಲಿ ತುಂಬಿರುವ ಪಾಕಿಸ್ತಾನಕ್ಕೆ ಅಥವಾ ಭಾರತದಲ್ಲಿನ ಪಾಕಿಸ್ತಾನ ಪ್ರೇಮಿಗಳಿಗೆ ಅವರ ಸ್ಥಾನ ತೋರಿಸುವುದು ಅಯೋಗ್ಯವೇನಲ್ಲ, ಇದನ್ನು ತಿಳಿದುಕೊಳ್ಳಿ !