ಭೂ ವಿವಾದದಿಂದ ಹತ್ಯೆಯ ಸಂದೇಹ
ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಪ್ರಸಿದ್ಧ ಹನುಮಾನಗಢಿ ದೇವಸ್ಥಾನದಲ್ಲಿನ ರಾಮ ಸಹಾರೆ ಎಂಬ ಸಾಧುವಿನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ರಾಮ ಸಹಾರೆ ಇವರು ಹನುಮಾನ ಗಢಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಇರುವ ಕೋಣೆಯಲ್ಲಿ ವಾಸವಿದ್ದರು. ಈ ಕೋಣೆಯಲ್ಲಿ ಶವ ಕಂಡು ಬಂದಿದೆ. ಅವರ ಕತ್ತಿನ ಮೇಲೆ ಆಳವಾದ ಗಾಯಗಳು ಕಾಣುತ್ತಿದೆ. ಈ ಘಟನೆಯ ಮಾಹಿತಿ ದೊರೆಯುತ್ತದೆ ಪೊಲೀಸರು ದೇವಸ್ಥಾನಕ್ಕೆ ತಲುಪಿದರು ಮತ್ತು ಅವರು ತನಿಖೆ ಆರಂಭಿಸಿದರು. ಅಂಬೇಡ್ಕರ್ ನಗರದ ಭಿಟಿಯಲ್ಲಿ ಸುಮಾರು ೧೦ ಎಕರೆ ಭೂಮಿಯ ಮಾಲಿಕತ್ವದ ಕಾರಣದಿಂದ ಈ ಹತ್ಯೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ರಾಮ ಸಹಾರೆ ಇವರು ಹನುಮಾನ ಗಢಿಯ ಬಸಂತಿಯ ಪಟ್ಟಿಯ ಸಂತ ದುರ್ಬಲ ದಾಸ ಇವರ ಶಿಷ್ಯರಾಗಿದ್ದರು.
೧. ರಾಮ ಸಹಾರೆ ಇವರ ಹತ್ಯೆಯಾದಾಗ, ದೇವಸ್ಥಾನದ ಪರಿಸರದಲ್ಲಿ ಸಿಸಿಟಿವಿ ಕ್ಯಾಮೆರಾ ಬಂದ್ ಮಾಡಲಾಗಿರುವುದು ಕಂಡು ಬಂದಿದೆ. ಹತ್ಯೆ ಆದ ನಂತರ ದೇವಸ್ಥಾನ ಪರಿಸರದಲ್ಲಿ ವಾಸಿಸುವ ವೃಷಭ ಶುಕ್ಲ ಎಂಬ ಯುವಕ ನಾಪತ್ತೆಯಾಗಿದ್ದಾನೆ. ಅವನ ಮೇಲೆ ಹತ್ಯೆಯ ಸಂದೇಹ ವ್ಯಕ್ತಪಡಿಸಲಾಗುತ್ತಿದೆ.
೨. ಹನುಮಾನ ಗಢಿ ದೇವಸ್ಥಾನದಲ್ಲಿ ಕೆಲವು ದಿನಗಳ ಹಿಂದೆಯೇ ಓರ್ವ ನಾಗಸಾಧುವಿನ ಅನುಮಾನಾಸ್ಪದ ಮೃತ್ಯು ಆಗಿತ್ತು. ಈ ಪ್ರಕರಣ ಆತ್ಮಹತ್ಯೆ ಇರಬಹುದೆಂದು ಹೇಳಲಾಗುತ್ತಿತ್ತು.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿನ ಸಾಧೂಗಳ ಹತ್ಯೆ ಅಥವಾ ಆತ್ಮಹತ್ಯೆ ಇದು ಭೂ ಅಥವಾ ಆಸ್ತಿಯ ವಿವಾದದಿಂದ ಆಗಿರುವುದೆಂದು ಪೊಲೀಸರಿಂದ ಹೇಳಲಾಗುತ್ತಿದೆ. ಇದೇ ಕಾರಣದಿಂದ ಅನಿರೀಕ್ಷಿತ ಸಾಧುಗಳ ಹತ್ಯೆಯ ಸರಣಿ ಹೇಗೆ ಆರಂಭವಾಗಿದೆ ? ಇದರ ಹಿಂದಿನ ಷಡ್ಯಂತ್ರ ಪೊಲೀಸರು ಹುಡುಕಿ ತೆಗೆಯುವರೇ ? |