ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ‘ಜೈ ಶ್ರೀ ರಾಮ್’ ಘೋಷಣೆಯ ಕುರಿತು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು!

ಪಾಕಿಸ್ತಾನದ ಮಾಜಿ ಹಿಂದೂ ಆಟಗಾರ ದಾನಿಶ ಕನೇರಿಯಾರಿಂದ ಪಾಕಿಸ್ತಾನ ಮಂಡಳಿಯ ಮೇಲೆ ಟೀಕೆ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಅಕ್ಟೋಬರ್ 14 ರಂದು ನಡೆದ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತ್ತು. ಈ ಪಂದ್ಯದ ಸಮಯದಲ್ಲಿ ಪ್ರೇಕ್ಷಕರು `ಜೈ ಶ್ರೀ ರಾಮ’ ಎಂದು ಘೋಷಣೆ ಕೂಗಿದ್ದರು. ಪಾಕಿಸ್ತಾನದ ಆಟಗಾರ ಮೊಹಮ್ಮದ ರಿಝವಾನರವರ ಮುಂದೆಯೂ ಘೋಷಣೆಗಳನ್ನು ಕೂಗಿದರು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ.

ಹಾಗೆಯೇ ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ಸಿಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆಯೂ ದೂರು ನೀಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ದೂರುಗಳ ಮೇಲೆ ಪಾಕಿಸ್ತಾನದ ಹಿಂದೂ ಮಾಜಿ ಕ್ರಿಕೆಟ್ ಆಟಗಾರ ದಾನಿಶ್ ಕನೇರಿಯಾ ಇವರು ಮಂಡಳಿಯನ್ನು ಟೀಕಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ, ‘ ಪಾಕಿಸ್ತಾನಿ ಪತ್ರಕರ್ತೆ ಜೈನಾಬ್ ಅಬ್ಬಾಸಳಿಗೆ ಭಾರತ ಮತ್ತು ಹಿಂದೂಗಳ ವಿರುದ್ಧ ಟಿಪ್ಪಣಿ ನೀಡಲು ಯಾರು ಹೇಳಿದ್ದರು? ಪಾಕಿಸ್ತಾನಿ ಕ್ರಿಕೆಟ ಮಂಡಳಿಯ ಮಾರ್ಗದರ್ಶಕರಾದ ಮಿಕಿ ಆರ್ಥರ ರವರಿಗೆ `ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಈ ಸ್ಪರ್ಧೆಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯದ್ದಾಗಿದೆ ಎಂದು ಅನಿಸುತ್ತದೆ, ಎಂದು ಹೇಳಲು ಯಾರು ಒತ್ತಾಯಿಸಿದರು? ಮೊಹಮ್ಮದ ರಿಝವಾನರಿಗೆ ಮೈದಾನದಲ್ಲಿ ನಮಾಜು ಮಾಡಲು ಯಾರು ಹೇಳಿದರು? ಆದುದರಿಂದ ಬೇರೆಯವರ ತಪ್ಪು ಹುಡುಕುವುದನ್ನು ಬಿಡಬೇಕು’ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುತ್ತ ದಾನಿಶ ಕನೇರಿಯಾರವರು ಮುಂದುವರಿದು, ನಾನು ಪಾಕಿಸ್ತಾನಕ್ಕಾಗಿ ನನ್ನ ರಕ್ತವನ್ನು ನೀಡಿದ್ದೇನೆ. ಆದುದರಿಂದ ಪಾಕಿಸ್ತಾನ ಮತ್ತು ಅದರ ನಾಗರಿಕರೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ನನ್ನ ದೂರು ಕೇವಲ ನನ್ನ ಮೇಲಾಗಿರುವ ಅನ್ಯಾಯದ ವಿರುದ್ಧವಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದುರಹಂಕಾರ ಮತ್ತು ದ್ವಿಮುಖ ನೀತಿಯನ್ನು ನಾನು ಆಕ್ಷೇಪಿಸುತ್ತೇನೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ನಮಾಜುಪಠಣ ಮಾಡುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹೇಗೆ ಒಪ್ಪಿಗೆಯಾಗುತ್ತದೆ?