ಸಂತರು ವರ್ಣಿಸಿದ ಶುಭ ದಸರಾ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಪರಾಜಿತಾದೇವಿಯ ಪೂಜೆ ಎಂದರೆ ‘ವಿಜಯಕ್ಕಾಗಿ ದೇವಿಯ ಬಳಿ ಶಕ್ತಿಯನ್ನು ಬೇಡುವುದು’ ಮತ್ತು ರಾತ್ರಿ ಹಿರಿಯರಿಗೆ ಶಮಿಯ (ಬನ್ನಿಯ) ಎಲೆಗಳನ್ನು ಕೊಡುವುದು, ಅಂದರೆ ‘ನಮ್ಮ ವಿಜಯದ ಪತ್ರವನ್ನು ನೀಡಿ (ವಿಜಯಶ್ರೀ ಪ್ರಾಪ್ತಮಾಡಿಕೊಂಡು) ಹಿರಿಯರಿಂದ ಆಶೀರ್ವಾದ ಪಡೆಯುವುದು. ಹಿಂದೂ ಬಾಂಧವರೇ, ವಿಜಯದಶಮಿಯು ವಿಜಯಿವೃತ್ತಿಯನ್ನು ಹೆಚ್ಚಿಸುವ ತೇಜಸ್ವಿ ಪರಂಪರೆಯಾಗಿದೆ !– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

ದೇವಿಯು ನವರಾತ್ರಿಯ ಮೂಲಕ ದೈವೀ ವಿಚಾರ ಮತ್ತು ಬಲವನ್ನು ಪಡೆದುಕೊಂಡು ದುಷ್ಟ ಶಕ್ತಿಗಳನ್ನು ನಾಶಗೊಳಿಸಲು ಸೀಮೋಲ್ಲಂಘನ ಮಾಡಿದ್ದಳು. ಅವಳ ಈ ಕಾರ್ಯ ಅವಿನಾಶಿ ಮತ್ತು ಶಾಶ್ವತವಾಗಿದೆ, ಇದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಪರಾತ್ಪರ ಗುರು ಪಾಂಡೆ ಮಹಾರಾಜರು.

ಸಾಧಕರೆ, ಗುರುಸೇವೆಯ ಸುವರ್ಣವನ್ನು ಹಂಚೋಣ !

ಪ.ಪೂ. ದಾಸ ಮಹಾರಾಜರು

ದೇವಿಯು ನವರಾತ್ರ್ಯುತ್ಸವದ ೯ ದಿನಗಳಲ್ಲಿ ವಿವಿಧ ಅವತಾರಗಳನ್ನು ತಾಳಿ ಅಸುರರನ್ನು ನಿರ್ನಾಮಗೊಳಿಸಿದಳು. ಪ್ರಭು ಶ್ರೀರಾಮರು ಕೂಡ ರಾವಣನನ್ನು ವಧಿಸುವ ಮೊದಲು ನವರಾತ್ರಿಯ ಕಾಲದಲ್ಲಿ ದೇವಿಯ ಉಪಾಸನೆ ಮಾಡಿದರು ಮತ್ತು ಅವಳಿಂದ ವರದಾನರೂಪಿ ಶಸ್ತ್ರಗಳನ್ನು ಪಡೆದು ರಾವಣನ ಸಂಹಾರ ಮಾಡಿದರು. ಅದೇ ರೀತಿ ಆಪತ್ಕಾಲದಲ್ಲಿಯೂ ದೇವಿಯು ಸಾಧಕರ ರಕ್ಷಣೆ ಮಾಡುವಳು. ಆದ್ದರಿಂದ ಸಾಧಕರು ವಿಜಯದಶಮಿಯ ದಿನ ಸೀಮೋಲ್ಲಂಘನ ಮಾಡುತ್ತಾ ಶ್ರೀ ಗುರುಗಳ ನಾಮದ, ಅವರು ಹೇಳಿದ ಸಾಧನೆಯ ಮತ್ತು ಗುರುಸೇವೆಯ ಸುವರ್ಣಮುದ್ರೆಗಳನ್ನು ಹಂಚೋಣ, ಅದೇ ರೀತಿ ಸಾಧಕರು ತಮ್ಮ ನಾಮಜಪಾದಿ ಸಾಧನೆಯನ್ನು ಹೆಚ್ಚಿಸಬೇಕು. ‘ರಾಮನಾಮ’ವೇ ಸುವರ್ಣವಾಗಿದ್ದು ಅದನ್ನೇ ವಿಜಯದಶಮಿಯ ದಿನ ಹಂಚೋಣ ಮತ್ತು ಅದೇ ನಮ್ಮನ್ನು ಆಪತ್ಕಾಲದಲ್ಲಿ ಕಾಪಾಡಲಿಕ್ಕಿದೆ. ರಾಮನಾಮದಿಂದ ಸಮುದ್ರದಲ್ಲಿ ಕಲ್ಲುಗಳು ತೇಲಿದವು. ಆಪತ್ಕಾಲದಲ್ಲಿ ರಾಮನಾಮವನ್ನು ಜಪಿಸುವವರೇ ಬದುಕುವರು ! – ಪ.ಪೂ. ದಾಸ ಮಹಾರಾಜರು, ಸಿಂಧುದುರ್ಗ, ಮಹಾರಾಷ್ಟ್ರ.