‘ವನ್‌ ನೇಶನ್, ವನ್‌ ಇಲೆಕ್ಶನ್‌’, ಮಾರ್ಗ ಒಳ್ಳೆಯದು ; ಆದರೆ…

(ವನ್‌ ನೇಶನ್, ವನ್‌ ಇಲೆಕ್ಶನ್‌ ಅಂದರೆ ಒಂದು ರಾಷ್ಟ್ರ, ಒಂದು ಚುನಾವಣೆ)

‘ವನ್‌ ನೇಶನ್, ವನ್‌ ಇಲೆಕ್ಶನ್’ ಈ ಸಂಕಲ್ಪನೆ ಚೆನ್ನಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರು ವಾಗ ಅಷ್ಟೇ ದೊಡ್ಡ ಸವಾಲುಗಳು ಎದುರಾಗುವುವು ಅವುಗಳಲ್ಲಿ ಕೆಲವು ಸವಾಲುಗಳು ಸಂವಿಧಾನಾತ್ಮಕ ವಾಗಿರುವವು. ‘ವನ್‌ ನೇಶನ್, ವನ್‌ ಇಲೆಕ್ಶನ್’ ಇದರ ಅಂತರ್ಗತ ಚುನಾವಣೆಯನ್ನು ಕೇವಲ ರಾಷ್ಟ್ರೀಯ ವಿಷಯಗಳ ಮೇಲೆ ನಡೆಸಿದರೆ, ಸ್ಥಳೀಯ ವಿಷಯಗಳ ಬಗ್ಗೆ ಏನು ? ಇದು ಒಂದು ಪ್ರಶ್ನೆಯಾಗಿದೆ. ‘ವನ್‌ ನೇಶನ್, ವನ್‌ ಇಲೆಕ್ಶನ್’ ಈ ವಿಷಯದ ಬಗ್ಗೆ ದೇಶದಾದ್ಯಂತ ಮತ್ತೊಮ್ಮೆ ವಿವಾದ ನಿರ್ಮಾಣವಾಗಿದೆ. ಇದರ ಕಾರಣವೆಂದರೆ ಮೋದಿ ಸರಕಾರ ಒಂದು ಸಮಿತಿಯನ್ನು ಸ್ಥಾಪಿಸಿದೆ, ಅದರ ಅಧ್ಯಕ್ಷ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಆಗಿದ್ದಾರೆ. ಮೋದಿ ಸರಕಾರದ ಈ ನಿರ್ಣಯದ ನಂತರ ಈ ವಿಷಯ ಮತ್ತೊಮ್ಮೆ ಚರ್ಚೆಯಲ್ಲಿ ಬಂದಿದೆ.

ಶ್ರೀ. ನಿತ್ಯಾನಂದ ಭಿಸೆ

೧. ‘ವನ್‌ ನೇಶನ್, ವನ್‌ ಇಲೆಕ್ಶನ್’ ಸಂಕಲ್ಪನೆಯನ್ನು ಜಾರಿಗೊಳಿಸುವಾಗ ಯಾವ ಸಂವಿಧಾನಾತ್ಮಕ ಸವಾಲುಗಳು ಬರಬಹುದು ?

‘ವನ್‌ ನೇಶನ್, ವನ್‌ ಇಲೆಕ್ಶನ್’ ಈ ಸಂಕಲ್ಪನೆಯನ್ನು ಜಾರಿಗೊಳಿಸುವಾಗ ಬರಬಹುದಾದ ಸಂವಿಧಾನಾತ್ಮಕ ಸವಾಲುಗಳ ಬಗ್ಗೆ ಹಿರಿಯ ವಕೀಲರು ಹಾಗೂ ಸಂವಿಧಾನತಜ್ಞ ವಿಕಾಸ ಸಿಂಹ ಇವರು ವಿಸ್ತಾರವಾದ ಮಾಹಿತಿಯನ್ನು ಒಂದು ಹಿಂದಿ ರಾಷ್ಟ್ರೀಯ ವಾರ್ತಾವಾಹಿನಿಗೆ ನೀಡಿದರು. ಅವಿಶ್ವಾಸ ಠರಾವಿನೊಂದಿಗೆ ವಿಶ್ವಾಸದರ್ಶಕ ಠರಾವನ್ನೂ ತರುವ ಷರತ್ತನ್ನೂ ಜಾರಿಗೊಳಿಸಬೇಕು’, ಎಂದು ಅವರು ಹೇಳಿದ್ದಾರೆ. ವಕೀಲರಾದ ವಿಕಾಸ ಸಿಂಹ, ”ವನ್‌ ನೇಶನ್, ವನ್‌ ಇಲೆಕ್ಶನ್‌ ಜಾರಿಗೊಳಿಸುವ ಮೊದಲು ಪರಿಚ್ಛೇದ ೮೩ ಮತ್ತು ೧೭೨ ರಲ್ಲಿ ಸುಧಾರಣೆ ಮಾಡಬೇಕಾಗುತ್ತದೆ’’, ಎಂದು ಹೇಳಿದ್ದಾರೆ. ಅದರಲ್ಲಿ ನಮೂದಿಸಿದ ವಿಷಯವೆಂದರೆ, ಸಭಾಗೃಹದ ಕಾರ್ಯಕಾಲ ೫ ವರ್ಷಗಳದ್ದಾಗಿರುವುದು ಅಥವಾ ಈ ಅವಧಿಯ ಮೊದಲೇ ಸಭಾಗೃಹ ವಿಸರ್ಜಿಸಬೇಕಾಗುವುದು.’’ ಪಕ್ಷಾಂತರ ಕಾನೂನಿನ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಬಗ್ಗೆ ಅವರು ಪ್ರಶ್ನೆಯನ್ನು ಕೇಳಿದ್ದಾರೆ. ಪಕ್ಷಾಂತರದಿಂದ ಅನರ್ಹರಾಗಿರುವ ಶಾಸಕರು ಅಥವಾ ಸಂಸದರಿಗೆ ಈ ಕಾನೂನಿನಲ್ಲಿ ಅದೇ ವಿಧಾನಸಭೆ ಅಥವಾ ಲೋಕಸಭೆಯ ಚುನಾವಣೆಯನ್ನು ಪುನಃ ಎದುರಿಸುವ ಹಾಗೂ ಗೆಲ್ಲುವ ಅನುಮತಿ ನೀಡಲಾಗಿದೆ.

೨. ವಿಶ್ವಾಸ ಗೊತ್ತುವಳಿ ತರಲು ಅವಕಾಶವಿರಬೇಕು !

‘ವಿಧಾನಸಭೆಯು ಅವಧಿಯ ಮೊದಲೆ ವಿಸರ್ಜನೆ ಯಾದರೆ ಅಥವಾ ಯಾವುದೇ ಸಂವಿಧಾನಾತ್ಮಕ ಅಡಚಣೆ ಯಿಂದ ಸರಕಾರ ನಡೆಸಲು ಅಸಾಧ್ಯವಾದರೆ ರಾಷ್ಟ್ರಪತಿ ಆಡಳಿತವನ್ನು ತರುವ ಕಾನೂನು ಇದೆ ಎಂದು ಸಿಂಹ ಹೇಳಿದ್ದಾರೆ; ಆದರೆ ಸಂಸತ್ತಿನಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿದರೆ ಕೇಂದ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರುವ ವ್ಯವಸ್ಥೆ ಇಲ್ಲ. ಆದ್ದರಿಂದ ಅದರ ಪರ್ಯಾಯವೂ ಆವಶ್ಯಕವಾಗಿದೆ. ಯಾವಾಗ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ತರುತ್ತವೆಯೋ, ಆಗ ಅದಕ್ಕೆ ಪೂರಕ ವಿಶ್ವಾಸದರ್ಶಕ ಠರಾವವನ್ನೂ ತರಬೇಕು. ಅದರಿಂದ ಸರಕಾರವನ್ನು ಉಳಿಸಬಹುದು ಮತ್ತು ನಡೆಸಬಹುದು.

೩. ಸಣ್ಣ ಪ್ರಾದೇಶಿಕ ರಾಜಕೀಯ ಪಕ್ಷಗಳ ಬಗ್ಗೆ ಏನು ?

ಅನೇಕ ರಾಜಕೀಯ ಪಕ್ಷಗಳು, ‘ವನ್‌ ನೇಶನ್, ವನ್‌ ಇಲೆಕ್ಶನ್‌’ನ ಅಂತರ್ಗತ ಕೇವಲ ರಾಷ್ಟ್ರೀಯ ವಿಷಯಗಳ ಮೇಲೆ ಚುನಾವಣೆಯನ್ನು ನಡೆಸಬಹುದು, ಆಗ ಸ್ಥಳೀಯ ಸಮಸ್ಯೆಗಳ ಬಗ್ಗೆ ಏನು ? ಆ ಸಮಸ್ಯೆಗಳನ್ನು ದುರ್ಲಕ್ಷಿಸಿದ ಹಾಗೆ ಆಗುವುದಿಲ್ಲವೇ ? ಇಂತಹ ಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಹಾನಿಯಾಗುವುದು; ಏಕೆಂದರೆ ಅವರ ಸ್ಥಳೀಯ ಸಮಸ್ಯೆಗಳು ಹೇಗೆ ನಿವಾರಣೆಯಾಗುವವು ? ಸ್ಥಳೀಯ ಸಮಸ್ಯೆಗಳ ಬಗ್ಗೆ ರಾಜಕಾರಣ ಮಾಡುವ ಸಣ್ಣ ಪ್ರಾದೇಶಿಕ ರಾಜಕೀಯ ಪಕ್ಷಗಳ ಭವಿಷ್ಯ ಅಪಾಯಕ್ಕೀಡಾ ಗುವುದಿಲ್ಲವೇ ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

೪. ‘ಇ.ವಿ.ಎಮ್‌.’ ಯಂತ್ರಗಳ ವ್ಯವಸ್ಥೆ

‘ಇ.ವಿ.ಎಮ್‌.’ ಮತ್ತು ‘ವಿವಿಪೀಎಟಿ’ ಈ ಮತದಾನದ ಯಂತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಸಿದ್ಧಪಡಿಸಬೇಕಾಗುವುದು; ಏಕೆಂದರೆ ಇಷ್ಟರ ವರೆಗೆ ಒಂದು ಚುನಾವಣೆಯ ನಂತರ ಸುಮಾರು ಒಂದು ತಿಂಗಳ ನಂತರ ನಡೆಯುವ ಇನ್ನೊಂದು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ‘ಇ.ವಿ.ಎಮ್‌.’, ಉಪಯೋಗಿಸಲಾಗುತ್ತಿತ್ತು; ಆದರೆ ಒಂದೇ ಸಮಯದಲ್ಲಿ ಚುನಾವಣೆಗಾಗಿ ಎರಡು ಬಗೆಯ ಯಂತ್ರಗಳು ಬೇಕಾಗುವವು. ಇದರ ಅರ್ಥ ಈ ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ.

೫. ‘ವನ್‌ ನೇಶನ್, ವನ್‌ ಇಲೆಕ್ಶನ್‌’ನ ರೂಪರೇಖೆಗಾಗಿ ಸಮಿತಿ ಸ್ಥಾಪನೆ

ಕಾಶ್ಮೀರದಿಂದ ಪರಿಚ್ಛೇದ ೩೭೦ (ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರವನ್ನು ನೀಡುವ ಪರಿಚ್ಛೇದ) ರದ್ದುಪಡಿಸುವಂತಹ ಅನೇಕ ಉದಾಹರಣೆಗಳಿವೆ. ಆದರೆ ಮೋದಿ ಸರಕಾರ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಲು ತತ್ಪರವಾಗಿದೆÉ ಎಂಬುದು ಕಂಡು ಬರುತ್ತದೆ. ಇಂತಹ ಸ್ಥಿತಿಯಲ್ಲಿ ‘ವನ್‌ ನೇಶನ್, ವನ್‌ ಇಲೆಕ್ಶನ್‌’ನ ರೂಪುರೇಷೆಯನ್ನು ಶೀಘ್ರದಲ್ಲಿಯೇ ನಿರ್ಧರಿಸಲಾಗುವುದು ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ತಡವಾಗದು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಇವರ ಅಧ್ಯಕ್ಷತೆಯಲ್ಲಿ ೮ ಜನ ಸದಸ್ಯರ ಸಮಿತಿಯ ಮೊದಲ ಸಭೆ ದೆಹಲಿಯಲ್ಲಿ ನಡೆಯಲಿಕ್ಕಿದೆ. ಸಮಿತಿಯ ಅಧ್ಯಕ್ಷ ರಾಮನಾಥ ಕೋವಿಂದ ಇವರು ಸಮಿತಿ ಸ್ಥಾಪನೆಯಾದ ತಕ್ಷಣ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಅವರು ಕಾನೂನು ಮತ್ತು ನ್ಯಾಯ ಸಚಿವಾಲಯದ ಮೇಲಧಿಕಾರಿಗಳನ್ನು ಭೇಟಿಯಾಗಿದ್ದಾರೆ; ಆದರೆ ಇದು ಕೇವಲ ಪ್ರಾರಂಭವಾಗಿದೆ. ಇಷ್ಟು ದೊಡ್ಡ ಕಾರ್ಯವನ್ನು ಪೂರ್ಣಗೊಳಿಸಲು ಸಮಿತಿಗೆ ಕನಿಷ್ಠ ೨ ತಿಂಗಳುಗಳು ತಗಲಬಹುದು, ಈ ವರದಿಯ ನಂತರವೇ ಮಸೂದೆ ಸಿದ್ಧವಾಗುವುದು. ವೇಗವಾಗಿ ಕೆಲಸವಾದರೂ ಮಸೂದೆ ಮುಂದಿನ, ಅಂದರೆ ಚಳಿಗಾಲದ ಅಧಿವೇಶನದಲ್ಲಿಯೆ ತರಲು ಸಾಧ್ಯವಾಗಬಹುದು.

೬. ‘ವನ್‌ ನೇಶನ್, ವನ್‌ ಇಲೆಕ್ಶನ್‌’ನ ನಿರ್ಣಯದ ೬ ಹಂತಗಳು

ಸರಕಾರ ‘ವನ್‌ ನೇಶನ್, ವನ್‌ ಇಲೆಕ್ಶನ್‌’ನ ನಿರ್ಣಯ ತೆಗೆದುಕೊಂಡರೂ ಅದನ್ನು ಕಾರ್ಯರೂಪಕ್ಕೆ ತರಲು ಅನೇಕ ಹಂತಗಳು ಬರುವವು. ಇದರಲ್ಲಿನ ಸುಮಾರು ೬ ಹಂತಗಳನ್ನು ದಾಟಿದ ನಂತರ ಅದು ಕಾರ್ಯರೂಪಕ್ಕೆ ಬರುವುದು. ಆ ೬ ಹಂತಗಳು ಈ ಮುಂದಿನಂತಿವೆ.

ಅ. ಮೊದಲು ಸಮಿತಿಯ ವರದಿ ಬರಬೇಕು.

ಆ. ವರದಿಯನ್ನು ಕೇಂದ್ರೀಯ ಮಂತ್ರಿಮಂಡಳದಲ್ಲಿ ಇಡಲಾಗುವುದು. ಕೇಂದ್ರೀಯ ಮಂತ್ರಿಮಂಡಳ ಇದರ ಬಗ್ಗೆ ವಿಚಾರ ಮಾಡಬೇಕು.

ಇ. ವಿಚಾರದ ನಂತರ ಇದರಲ್ಲಿ ಯಾವ ಸಂವಿಧಾನಾತ್ಮಕ ಸುಧಾರಣೆಗಳನ್ನು ಮಾಡಬೇಕಾಗುವುದು, ಎಂಬುದರ ರೂಪುರೇಷೆÉಯನ್ನು ಸಿದ್ಧಪಡಿಸಲಾಗುವುದು ಮತ್ತು ಸುಧಾರಣೆಯ ಮಸೂದೆಯನ್ನು ಸಿದ್ಧಪಡಿಸಲಾಗುವುದು.

ಈ. ಈ ಸುಧಾರಣೆಯ ನಂತರವೇ ಈ ಮಸೂದೆಯನ್ನು ಲೋಕಸಭೆ ಮತ್ತು ನಂತರ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು.

ಉ. ಮಸೂದೆಯ ಬಗ್ಗೆ ವಿಚಾರ ಮಾಡಲು ಸಂಸತ್ತಿನ ಸಮಿತಿಗಳನ್ನು ಸ್ಥಾಪಿಸಲಾಗುವುದು. ಈ ಮಸೂದೆಯನ್ನು ಸ್ಥಾಯಿಸಮಿತಿ ಅಥವಾ ಸಂಯುಕ್ತ ಸಂಸತ್‌ ಸಮಿತಿಗಳಿಗೂ ಕಳುಹಿಸಲಾಗುವುದು. ಈ ಮಸೂದೆಯನ್ನು ಯಾವ ಸಮಿತಿಗೆ ಅಧ್ಯಯನಕ್ಕಾಗಿ ಕಳುಹಿಸಬೇಕು ಎಂಬುದನ್ನು ಸಭಾಗೃಹ ನಿರ್ಧರಿಸುವುದು.

ಊ. ಸಮಿತಿಗಳೊಂದಿಗೆ ಮಸೂದೆಯ ಬಗ್ಗೆ ಚರ್ಚೆ ಮಾಡಿದ ನಂತರ ಅದನ್ನು ಪುನಃ ಸಭಾಗೃಹದಲ್ಲಿಡಲಾಗುವುದು ಹಾಗೂ ಚರ್ಚೆಯ ನಂತರ ಈ ಮಸೂದೆಯನ್ನು ಸಮ್ಮತಿಸಲಾಗುವುದು.

– ಶ್ರೀ. ನಿತ್ಯಾನಂದ ಭಿಸೆ, ಪನವೇಲ್‌ (೧೦.೯.೨೦೨೩) (ಆಧಾರ : ಸಾಪ್ತಾಹಿಕ ‘ಹಿಂದೂಸ್ಥಾನ ಪೋಸ್ಟ್‌’)