ಯಾವುದೇ ಸಮಾರಂಭದಲ್ಲಿ ಪ್ರೇಕ್ಷಕರೊಂದಿಗೆ ವೇದಿಕೆಯಲ್ಲಿ ಕುಳಿತಿರುವ ಗಣ್ಯರಿಗೂ ನಮಸ್ಕಾರ ಮಾಡುವುದು ಅಪೇಕ್ಷಿತವಿದೆ

ಸಾಧಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಸೂಚನೆ

ಇತ್ತೀಚಿಗೆ ಒಂದು ಸಂತ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕರೊಬ್ಬರು ಸಾಧನೆ ಮಾಡಿ ಸಂತಪದವಿಯಲ್ಲಿ ಆರೂಢರಾಗಿರುವ ಘೋಷಣೆಯಾಗುವ ಮೊದಲು ಮತ್ತು ಘೋಷಣೆಯಾದ ನಂತರ ಸಾಧಕರು ಆ ಸಂತರ ಗುಣವೈಶಿಷ್ಟ್ಯಗಳನ್ನು ಹೇಳಲು ವೇದಿಕೆಗೆ ಬಂದರು. ಆದರೆ ವೈಶಿಷ್ಟಗಳನ್ನು ಹೇಳಿ ಹಿಂತಿರುಗಿ ಹೋಗುವಾಗ ವೇದಿಕೆಯಲ್ಲಿ ಆಸೀನರಾಗಿರುವ ಗಣ್ಯರಿಗೆ ನಮಸ್ಕಾರ ಅಥವಾ ಅಭಿನಂದನೆ ಮಾಡದೇ ಕೇವಲ ಎದುರಿಗೆ ಕುಳಿತಿರುವ ಸಭಿಕರಿಗೆ ನಮಸ್ಕಾರ ಮಾಡಿದರು. ಸಭಿಕರಿಗೆ ಮಾಡುವಂತೆಯೇ ವೇದಿಕೆಯಲ್ಲಿ ಕುಳಿತಿರುವ ಗಣ್ಯರಿಗೂ ನಮಸ್ಕಾರ ಮಾಡುವುದು ಅಪೇಕ್ಷಿತವಾಗಿದೆ. ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಸಾಧಕರು ವೇದಿಕೆಗೆ ಹೋಗಿ ಕೆಲವು ಅಂಶಗಳನ್ನು ಹೇಳುತ್ತಾರೆ. ಆಗ ಮೊದಲು ವೇದಿಕೆಯಲ್ಲಿ ಆಸೀನರಾಗಿರುವ ಗಣ್ಯರಿಗೆ, ನಂತರ ಎದುರಿಗೆ ಕುಳಿತಿರುವ ಸಭಿಕರಿಗೆ ನಮಸ್ಕಾರ ಮಾಡಬೇಕು. ಅದೇ ರೀತಿ ಭಾಷಣ ಅಥವಾ ಅಂಶಗಳನ್ನು ಹೇಳಿದ ನಂತರ ಹಿಂದಿರುಗಿ ಹೋಗುವಾಗಲೂ ಸಭಿಕರ ಜೊತೆ ವೇದಿಕೆಯಲ್ಲಿನ ಗಣ್ಯರಿಗೂ ನಮಸ್ಕಾರ ಮಾಡಬೇಕು.