ಕರ್ನಾಲ (ಹರಿಯಾಣ) ಇಲ್ಲಿ ದುಷ್ಕರ್ಮಿಗಳಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸ !

ಗ್ರಾಮಪಂಚಾಯತಿಯ ಜಾಗವನ್ನು ಅತಿಕ್ರಮಣ ಮಾಡಿರುವವರಿಂದ ಮೂರ್ತಿಯನ್ನು ಧ್ವಂಸ ಮಾಡಿರುವುದಾಗಿ ಗ್ರಾಮಸ್ಥರ ಆರೋಪ

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ)

ಕರ್ನಾಲ (ಹರಿಯಾಣ) – ಇಲ್ಲಿಯ ಶಾಮಗಡ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸಗೊಳಿಸಲಾಗಿದೆ. ಈ ಮೂರ್ತಿ ಗ್ರಾಮಪಂಚಾಯತಿಯ ಜಾಗದಲ್ಲಿ ಸ್ಥಾಪಿಸಲಾಗಿತ್ತು. ಮೂರ್ತಿಯನ್ನು ಧ್ವಂಸ ಮಾಡಿದ ನಂತರ ಅದರ ಅವಶೇಷಗಳನ್ನು ಕೆರೆಗೆ ಎಸೆಯಲಾಗಿದೆ. ಈ ಘಟನೆಯ ನಂತರ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರಿಗೆ ಈ ಘಟನೆಯ ಮಾಹಿತಿ ದೊರೆಯುತ್ತಲೇ ಅವರು ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು ಹಾಗೂ ಕೆರೆಯಿಂದ ಮೂರ್ತಿಯ ಅವಶೇಷಗಳನ್ನು ಹೊರ ತೆಗೆದರು. ಪೊಲೀಸ ಅಧಿಕಾರಿ ಸೋನು ನರವಾಲ ಇವರು, ಗ್ರಾಮಸ್ಥರು ಇನ್ನೊಂದು ಗುಂಪಿನ ಮೇಲೆ ಮೂರ್ತಿ ಧ್ವಂಸದ ಆರೋಪ ಮಾಡಿದ್ದಾರೆ. ಪೊಲೀಸರು ಎಲ್ಲಾ ದಿಕ್ಕಿನಿಂದ ಈ ಘಟನೆಯ ತನಿಖೆ ನಡೆಸುತ್ತಿದೆ. ಆದಷ್ಟು ಬೇಗನೆ ಅಪರಾಧಿಯನ್ನು ಬಂಧಿಸಲಾಗುವುದು ಎಂದು ಹೇಳಿದರು.

(ಸೌಜನ್ಯ – arnal Breaking News)

ಗ್ರಾಮಸ್ಥರ ಪ್ರಕಾರ, ಗ್ರಾಮಪಂಚಾಯತಿಯ ಯಾವ ಜಾಗದಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗಿತ್ತು, ಆ ಜಾಗದ ಮೇಲೆ ಇನ್ನೊಂದು ಗುಂಪಿನವರು ಅತಿಕ್ರಮಣ ಮಾಡಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ. ಮೂರ್ತಿ ಸ್ಥಾಪನೆ ಮಾಡಿರುವುದರಿಂದ ಈ ಗುಂಪಿನವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರು ಮೂರ್ತಿ ತೆರವುಗೊಳಿಸುವುದಕ್ಕಾಗಿ ಬೆದರಿಕೆ ಕೂಡ ನೀಡಿದ್ದರು. ಅವರ ಗುಂಪಿನಿಂದಲೇ ಮೂರ್ತಿ ವಿದ್ವಂಸ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ !