ಈರೋಡ (ತಮಿಳುನಾಡು) – ಈರೋಡ್ ಜಿಲ್ಲೆಯ ಚೆನ್ನಿಮಲೈ ಮುರುಗನ್ ದೇವಸ್ಥಾನವಿರುವ ಬೆಟ್ಟದ ಹೆಸರನ್ನು ‘ಯೇಸು ಮಲ್ಲ’ ಅಥವಾ ‘ಕಲವಾರಿ ಮಲ್ಲ’ ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯ ಕ್ರೈಸ್ತರು ಕೋರಿರುವುದರಿಂದ ಇಲ್ಲಿ ವಿವಾದ ನಿರ್ಮಾಣವಾಗಿದೆ. ಈ ಬೇಡಿಕೆಯನ್ನು ವಿರೋಧಿಸಿ ಹಿಂದೂ ಮುನ್ನಾನಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಸಂಘಟನೆಯು ‘ಕ್ರೈಸ್ತ ಸಂಘಟನೆಗಳಿಗೆ ರಾಜಕೀಯ ನಾಯಕರ ಬೆಂಬಲವಿದೆ’ ಎಂದು ಹೇಳಿದೆ. ಹೆಸರು ಬದಲಾವಣೆಯನ್ನು ವಿರೋಧಿಸಿ ಹಿಂದೂಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಪಾದಯಾತ್ರೆ ಅಕ್ಟೋಬರ್ 13ರಂದು ದೇವಸ್ಥಾನವನ್ನು ತಲುಪಲಿದೆ.
1. ಈ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ 3 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಭಗವಾನ ಶ್ರೀ ಮೃಗ ದೇವರ ದೇವಸ್ಥಾನವಿದೆ. ಇದು ಹಿಂದೂಬಹುಸಂಖ್ಯಾತ ಪ್ರದೇಶವಾಗಿದೆ. ಆದರೆ ಈ ಪ್ರದೇಶದಲ್ಲಿ ಕ್ರೈಸ್ತರು ಧರ್ಮಪ್ರಚಾರಕ್ಕಾಗಿ ಅನಧಿಕೃತವಾಗಿ ಪ್ರಾರ್ಥನೆಗಳನ್ನು ಆಯೋಜಿಸುತ್ತದೆ. ಪ್ರಾರ್ಥನೆಗೆ ಹೊರಗಿನ ನಗರಗಳಿಂದ ಜನರು ಬರುತ್ತಾರೆ. ಆದ್ದರಿಂದ ಇಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ. ಈ ಪ್ರಾರ್ಥನೆಯ ಸಮಯದಲ್ಲಿ, ಧ್ವನಿವರ್ಧಕಗಳ ಮೂಲಕ ಹಿಂದೂ ದೇವತೆಗಳನ್ನು ಅವಮಾನಿಸಲಾಗುತ್ತದೆ.
2. ಸೆಪ್ಟೆಂಬರ್ 17 ರಂದು ಭಾಜಪ ಮತ್ತು ಹಿಂದೂ ಮುನ್ನಾನಿ ಸಂಘಟನೆಯ ಪದಾಧಿಕಾರಿಗಳು ಈ ಪ್ರಾರ್ಥನಾ ಸಭೆಗಳನ್ನು ವಿರೋಧಿಸಿದ್ದರು. ಇದರಿಂದ ವಿವಾದಗಳು ನಡೆದು ಪರಸ್ಪರ ಹೊಡೆದಾಡಿದ್ದರು. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಾಗಿತ್ತು. ಈ ಘಟನೆಯ ನಂತರ ಸೆಪ್ಟೆಂಬರ್ 26 ರಂದು, ರೆವಲ್ಯೂಶನರಿ ಯಥ ಫ್ರಂಟ, ವಿದುತಲೈ ಚಿರುತೈಗಲ್ ಕಚ್ಚಿ, ಎಂ.ಡಿ.ಎಂ.ಕೆ. ಈ ಸಂಘಟನೆಗಳು ಮೆರವಣಿಗೆ ನಡೆಸಿದ್ದವು. ಈ ಆಂದೋಲನವು ಚೆನ್ನಿಮಲೈ ಮುರುಗನ್ ದೇವಸ್ಥಾನದ ಪರ್ವತವನ್ನು ಮರುನಾಮಕರಣ ಮಾಡಬೇಕೆಂದು ಕೋರಿದೆ. ಇದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಸಂಪಾದಕೀಯ ನಿಲುವುಹಿಂದೂ ರಾಷ್ಟ್ರ ಏಕೆ ಆವಶ್ಯಕವಾಗಿದೆ ?, ಎಂದು ಇಂತಹ ಘಟನೆಗಳು ನಿರಂತರವಾಗಿ ತೋರಿಸುತ್ತಿರುತ್ತವೆ, ಇದನ್ನು ಹಿಂದೂಗಳು ಯಾವಾಗ ತಿಳಿದು ಕೊಳ್ಳುತ್ತಾರೆ ? |