|
ಚೆನ್ನೈ (ತಮಿಳುನಾಡು) – ತಮಿಳುನಾಡಿನ ನಾಗಪಟ್ಟಣಂ ಮತ್ತು ಶ್ರೀಲಂಕಾದ ಕಾಂಕೆಸಂತುರೈ ನಡುವೆ ಫೆರಿ (ಬೋಟ್) ಸೇವೆ ಆರಂಭಿಸಲಾಗಿದೆ. ಈ ಸೇವೆಯಡಿ ಪ್ರತಿ ವ್ಯಕ್ತಿಗೆ 7 ಸಾವಿರದ 670 ರೂಪಾಯಿ ದರ ನಿಗದಿಪಡಿಸಲಾಗಿದೆ. 1982ರಲ್ಲಿ ಉತ್ತರ ಶ್ರೀಲಂಕಾದಲ್ಲಿ ಆರಂಭವಾದ ಯಾದವಿ ಯುದ್ಧದಿಂದಾಗಿ ಎರಡೂ ದೇಶಗಳ ನಡುವೆ ಸಮುದ್ರ ಸಂಚಾರ ಸ್ಥಗಿತಗೊಂಡಿತ್ತು. ಈಗ ಈ ಫೆರಿ (ಬೋಟ್) ಸೇವೆಯ ಮೂಲಕ ಪುನರಾರಂಭಿಸಲಾಗಿದೆ.
Ferry services between India and Sri Lanka will enhance connectivity, promote trade and reinforce the longstanding bonds between our nations. https://t.co/VH6O0Bc4sa
— Narendra Modi (@narendramodi) October 14, 2023
ಇದರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅವರು ಭಾರತ-ಶ್ರೀಲಂಕಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಈ ದೋಣಿ ಸೇವೆಯು ಮಹತ್ವದ ಹೆಜ್ಜೆಯಾಗಿದೆ. ಭಾರತ ಮತ್ತು ಶ್ರೀಲಂಕಾ ದೇಶಗಳು ಸಂಸ್ಕೃತಿ, ವಾಣಿಜ್ಯ ಮತ್ತು ಸಭ್ಯತೆಯ ಒಂದು ರೀತಿಯ ಸಮಾನ ಇತಿಹಾಸ ಇದೆ. ನಾವು ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ನಾವು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ. ಈ ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಜೀವಂತಗೊಳಿಸುತ್ತದೆಯೆಂದು ಹೇಳಿದರು.
ಈ ಸಮಯದಲ್ಲಿ, ಶ್ರೀಲಂಕಾದ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆ ಅವರು ಮಾತನಾಡಿ, ಎರಡೂ ದೇಶಗಳ ಸಂಚಾರ ಉತ್ತರ ಶ್ರೀಲಂಕಾದಲ್ಲಿ ನಡೆದ ಯಾದವಿ ಯುದ್ಧದಿಂದಾಗಿ ತೊಂದರೆಗೆ ಒಳಗಾಗಿತ್ತು. ಆದರೆ ಈಗ ಈ ಫೆರಿ (ಬೋಟ್) ಸೇವೆಯಿಂದ ಮತ್ತೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.