|

ಮುಂಬಯಿ, ಅಕ್ಟೋಬರ್ 14 (ಸುದ್ದಿ) – ಮುಂಬಯಿನ ಲೋಕಲ ಟ್ರೇನ ಮತ್ತು ಬಸ್ ನಿಲ್ದಾಣಗಳಲ್ಲಿ ಬಹಿರಂಗವಾಗಿ ‘ವಶಿಕರಣ ಸ್ಪೆಷಲಿಸ್ಟ್’ ಎಂದು ಮುಸ್ಲಿಂ ಬಾಬಾಗಳ ಜಾಹೀರಾತುಗಳು ದೊಡ್ಡ ಪ್ರಮಾಣದಲ್ಲಿ ಅಂಟಿಸಲಾಗಿದೆ. ವಿಶೇಷವೆಂದರೆ ಈ ಜಾಹೀರಾತಿನಲ್ಲಿ ‘ನೊಂದ ತಾಯಂದಿರು ಮತ್ತು ಸಹೋದರಿಯರು ಒಮ್ಮೆ ನಮ್ಮನ್ನು ಅವಶ್ಯವಾಗಿ ಸಂಪರ್ಕಿಸಬೇಕು’ ಎಂದು ಮನವಿ ಮಾಡಲಾಗಿದೆ. ವಶೀಕರಣದ ಬಗ್ಗೆ ಬಹಿರಂಗವಾಗಿ ಜಾಹೀರಾತು ನೀಡಿದರೂ ಪೊಲೀಸರು ಅಥವಾ ರೈಲ್ವೆ ಆಡಳಿತ ಮಂಡಳಿಯವರು ಈ ವಿಷಯದಲ್ಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದು ಕಂಡುಬಂದಿಲ್ಲ.
‘ಪ್ರೀತಿಯಲ್ಲಿ ಮೋಸ, ಗ್ರಹ ದೋಷ, ಏನಾದರೂ ಸಮಸ್ಯೆಯಿದ್ದರೆ ತಕ್ಷಣ ಸಂಪರ್ಕಿಸಿ’, ಎಂದು ಈ ಜಾಹೀರಾತಿನಲ್ಲಿ ರಜಾ ಖಾನ ಹೆಸರಿನ ವ್ಯಕ್ತಿಯ ಸಂಪರ್ಕ ಸಂಖ್ಯೆ ‘8446885164’ ಅನ್ನು ನೀಡಲಾಗಿದೆ. ‘ನಿಮ್ಮ ಇಚ್ಛೆಯಂತೆ ಪ್ರೀತಿ, ಮದುವೆ, ವ್ಯವಹಾರಗಳು, ಪೋಷಕರ ಮನವೊಲಿಸುವುದು, ಶತ್ರುಗಳಿಂದ ವಿಮೋಚನೆ, ಉದ್ಯೋಗ, ಗೃಹ ಕಲಹ, ಮಕ್ಕಳಾಗದೇ ಇರುವುದು, ಸಾಲ, ಅನಾರೋಗ್ಯ ಮತ್ತು ಮಾಟ ಮಂತ್ರ ಇವುಗಳ ಮೇಲೆ ಖಚಿತವಾಗಿ ಉಪಾಯಗಳನ್ನು ಮಾಡಲಾಗುತ್ತದೆ’ ಎಂದು ಈ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಮಧ್ಯ, ಪಶ್ಚಿಮ ಮತ್ತು ಹರ್ಬರ್ ಪ್ರದೇಶ ಈ ಮೂರು ಮಾರ್ಗಗಳ ಲೋಕಲ್ ಟ್ರೆನ್ ಗಳಲ್ಲಿ ಹಾಗೆಯೇ ಮುಂಬಯಿಯ ಅನೇಕ ಬಸ್ ನಿಲ್ದಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಂಟಿಸಲಾಗಿದೆ. (ಹಿಂದೂ ಧಾರ್ಮಿಕ ಆಚರಣೆಗಳನ್ನು ‘ಮೂಢನಂಬಿಕೆ’ ಎಂದು ಪರಿಗಣಿಸುವ ಅಂಧಶ್ರದ್ಧೆ ನಿರ್ಮೂಲನ ಸಮಿತಿಯವರು ಈ ವಿಷಯದಲ್ಲಿ ಏನಾದರೂ ಮಾಡುತ್ತಾರೆಯೇ ? – ಸಂಪಾದಕರು)
ಸಂಪಾದಕೀಯ ನಿಲುವುಇದರಲ್ಲಿ ‘ಲವ್ ಜಿಹಾದ್’ ಷಡ್ಯಂತ್ರ ಇದೆಯೇ ? ಎಂದು ಪೊಲೀಸರು ಕಂಡು ಹಿಡಿಯಬೇಕು ! |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !