ಹಮಾಸ್‌ನಿಂದ ಮಗಳ ಹತ್ಯೆಯ ಬಗ್ಗೆ ಹತಾಶ ತಂದೆಯಿಂದ ಸಮಾಧಾನ ವ್ಯಕ್ತ !
ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ನ ವಿರುದ್ಧ ಹಮಾಸ್ ಭಯೋತ್ಪಾದಕರ ಕ್ರೌರ್ಯ ಮಿತಿಮೀರಿದ್ದು, ಅದರ ಬಗ್ಗೆ ವಿವರಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿನ ಎದುರಿಗೆ ಬರುತ್ತಿದೆ. ಹಮಾಸ್ ಅನೇಕ ಚಿಕ್ಕ ಮಕ್ಕಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದೆ. ಇಂತಹುದರಲ್ಲಿ ಹಮಾಸನಿಂದ ಹತ್ಯೆಗೊಳಗಾದ ಓರ್ವ 8 ವರ್ಷದ ಬಾಲಕಿಯ ಹತಾಶ ತಂದೆ ಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಥಾಮಸ್ ಹ್ಯಾಂಡ್ ಹೆಸರಿನವರು ಮೂಲತಃ ಐರ್ಲೆಂಡ್‌ನವರಾಗಿದ್ದಾರೆ. ‘ಹುಡುಗಿಯ ಹತ್ಯೆಯಾಗಿರುವುದು ಅವಳ ಮೇಲೆ ಕೃಪೆಯೇ ಆಗಿದೆ’ ಎಂದು ಅವರಿಗೆ ಅನಿಸಿದೆ. ಅವರ ಮಗಳ ಹೆಸರು ಎಮಿಲಿ ಆಗಿತ್ತು.
(ಸೌಜನ್ಯ – HellAwaitsFornicators)
ಥಾಮಸ್ ಹ್ಯಾಂಡ್ ಹೇಳಿದರು,
1. ಹಮಾಸ್ ಭಯೋತ್ಪಾದಕರು ಎಮಿಲಿಯನ್ನು ಗುಂಡಿಕ್ಕಿ ಕೊಂದರು. ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಹುಡುಗಿ ಸಾಯುವುದು ಲೇಸು. ಇದು ಒಳ್ಳೆಯದಾಯಿತು.
2. ಹಮಾಸ್ ದಾಳಿಯಲ್ಲಿ ಎಮಿಲಿ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿಯನ್ನು ನನಗೆ ತಲುಪಿದಾಗ, ನಾನು ಈ ಸತ್ಯವನ್ನು ನಗುತ್ತಲೇ, ಒಪ್ಪಿಕೊಂಡೆ. ಏಕೆಂದರೆ ನಾನು ಯಾವ ಸಾಧ್ಯತೆಗಳ ವಿಚಾರ ಮಾಡಿದ್ದೆನೋ, ಅದಕ್ಕಿಂತ ಒಳ್ಳೆಯದು ನಡೆದಿದೆಯೆನಿಸಿತು.
3. ಅವಳು ಸಾಯದಿದ್ದರೆ, ಇಂದು ಗಾಜಾದಲ್ಲಿ ಇರುತ್ತಿದ್ದಳು. ‘ಗಾಜಾದಲ್ಲಿ ಅವಳೊಂದಿಗೆ ಏನಾಗಬಹುದಿತ್ತು? ಎಂಬ ಕಲ್ಪನೆಯೂ ನಿಮಗಿದೆ. ಸಾಯುಉವದಕ್ಕಿಂತಲೂ ಭಯಾನಕ ಯಾತನೆ ಅವಳು ಅನುಭವಿಸಬೇಕಾಗುತ್ತಿತ್ತು. ಅವರ ಬಳಿ ಆಹಾರವಿಲ್ಲ, ನೀರಿಲ್ಲ, ಅಲ್ಲಿ ಅವಳು ಕತ್ತಲೆಯ ಕೋಣೆಯಲ್ಲಿ ಇರಬೇಕಾಗುತ್ತಿತ್ತು. ಪ್ರತಿಯೊಂದು ನಿಮಿಷಕ್ಕೆ ಮತ್ತು ಗಂಟೆಗೆ ಅವಳು ಹೆದರಿಕೆಯಿಂದ ಸಾಯಬೇಕಾಗುತ್ತಿತ್ತು. ಹಾಗಾಗಿ ಅವಳ ಸಾವು ಒಂದು ಆಶೀರ್ವಾದವೇ ಆಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇದರಿಂದ ಹಮಾಸ್ ಭಯೋತ್ಪಾದಕರ ಪೈಶಾಚಿಕ ಮನೋವೃತ್ತಿ ಕಂಡು ಬರುತ್ತದೆ. ಇಂತಹ ಕ್ರೂರ ಭಯೋತ್ಪಾದಕರನ್ನು ಬೆಂಬಲಿಸುವ ಭಾರತವೂ ಸೇರಿದಂತೆ ಜಗತ್ತಿನಾದ್ಯಂತವಿರುವ ಮತಾಂಧ ಮುಸಲ್ಮಾನರನ್ನು ಖಂಡಿಸಲೇಬೇಕು ! |