ದೆಹಲಿಯಿಂದ ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾನ 2 ಸಹಚರರ ಬಂಧನ

ನವದೆಹಲಿ – ದೆಹಲಿ ಪೊಲೀಸರು ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾನ ನಿಕಟವರ್ತಿಯಾಗಿದ್ದ 2 ಸಹಚರರನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಪಂಜಾಬ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತಪಾತಗಳನ್ನುಂಟು ಮಾಡುವ ಸಿದ್ಧತೆಯಲ್ಲಿದ್ದರು. ಪೊಲೀಸರು ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಕೈಬಾಂಬ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾ `ಲಷ್ಕರ್-ಎ-ತೊಯ್ಬಾ’ ಮತ್ತು` ಇಸ್ಲಾಮಿಕ್ ಸ್ಟೇಟ್’ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಶ್ ಡಲ್ಲಾ ಪಂಜಾಬಿನ ಮೋಗಾ ಜಿಲ್ಲೆಯ ಡಲ್ಲಾ ಗ್ರಾಮದಲ್ಲಿ ಜನಿಸಿದನು. ಕೆನಡಾದಲ್ಲಿ ವಾಸಿಸುತ್ತಾ, ಅವನು ಗ್ಯಾಂಗ್ ನಡೆಸುತ್ತಿದ್ದು, ಪಂಜಾಬಿನ ಹಲವು ಅಪರಾಧ ಪ್ರಕರಣಗಳಲ್ಲಿ ಈತನ ಕೈವಾಡವಿದೆ.