ಕಲ್ಲು ತೂರಾಟ ಮಾಡುವ ಆರೋಪಿಗಳಿಗೆ ಲಾಠಿ ಬೀಸುವುದನ್ನು ಕಿರುಕುಳ ಎಂದು ಪರಿಗಣಿಸಬಾರದು !

ಹಲ್ಲೆ ಆರೋಪ ಹೊಂದಿರುವ ಪೊಲೀಸರಿಂದ ಉಚ್ಚ ನ್ಯಾಯಾಲಯದಲ್ಲಿ ಮನವಿ

ಕರ್ಣಾವತಿ (ಗುಜರಾತ) – ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷ ಕೆಲವು ಮುಸ್ಲಿಮರನ್ನು ಕಲ್ಲು ತೂರಾಟ ನಡೆಸಿರುವ ಪ್ರಕರಣದಲ್ಲಿ ಬಂಧಿಸಿ ಅವರ ಹಿಂಭಾಗಕ್ಕೆ ಲಾಠಿಯಿಂದ ಥಳಿಸಲಾಗಿತ್ತು. “ಇದನ್ನು ಥಳಿತ ಎಂದು ಪರಿಗಣಿಸಬಾರದು” ಎಂದು ಈ ಪ್ರಕರಣದ 4 ಪೊಲೀಸ್ ಅಧಿಕಾರಿಗಳು ಗುಜರಾತ್ ನ ಉಚ್ಚ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಇಲ್ಲಿನ ಉಂಧೆಲಾ ಗ್ರಾಮದಲ್ಲಿ ನವರಾತ್ರಿಯ ಗರಬಾ ಕಾರ್ಯಕ್ರಮದ ಮೇಲೆ ಈ ಕಲ್ಲು ತೂರಾಟ ನಡೆದಿತ್ತು. ಬಂಧಿಸಿದ್ದ ಮುಸ್ಲಿಮರನ್ನು ವೃತ್ತದಲ್ಲಿ ಒಂದು ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು.

ಆರೋಪಿತ ಪೊಲೀಸರ ಅಧಿಕಾರಿಯು ನ್ಯಾಯಾಲಯದಲ್ಲಿ, ಈ ಪೊಲೀಸರು ಕಳೆದ 10 ರಿಂದ 15 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಒಂದು ವೇಳೆ ಅವರನ್ನು ತಪ್ಪಿತಸ್ಥರೆಂದು ಶಿಕ್ಷೆ ನೀಡಿದರೆ, ಅವರ ಕೆಲಸದ ದಾಖಲೆ(ರೆಕಾರ್ಡ) ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದರು.