|
ಭರೂಚ (ಗುಜರಾತ) – ಇಲ್ಲಿ ಮುಸಲ್ಮಾನ ಬಹುಲ ಇಖರ ಊರಿನಲ್ಲಿ ಸ್ಥಳೀಯ ಹಿಂದೂ ಸಮಾಜಕ್ಕೆ ಇಲ್ಲಿನ ಮುಸಲ್ಮಾನರು `ಗರಬಾ ಆಯೋಜಿಸಿದರೆ ಎಲ್ಲವನ್ನೂ ಧ್ವಂಸಗೊಳಿಸುವೆವು’ ಎಂಬ ಎಚ್ಚರಿಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಹಿಂದೂಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಇದರಲ್ಲಿ ನ್ಯಾಯ ಒದಗಿಸುವುದರೊಂದಿಗೆ ಸಂರಕ್ಷಣೆಯನ್ನು ನೀಡಲು ಮನವಿ ಮಾಡಲಾಗಿದೆ.
೧. ಈ ಪ್ರಕರಣದಲ್ಲಿ ನವರಾತ್ರೋತ್ಸವದ ಆಯೋಜಕರಾದ ಶೈಲೇಶ ವಸಾವಾರವರು ಮಾತನಾಡುತ್ತ, ಪ್ರತಿವರ್ಷ ನಡೆಯುವಂತೆ ಈ ವರ್ಷವೂ ನಾವು ನವರಾತ್ರಿಯನ್ನು ಆಯೋಜಿಸಿದ್ದೇವೆ. ಇದಕ್ಕಾಗಿ ಊರಿನಲ್ಲಿ ಸ್ವಚ್ಛತೆಯನ್ನು ಆರಂಭಿಸಿದ್ದೇವೆ. ಈ ಸಮಯದಲ್ಲಿ ನೆರೆಯಲ್ಲಿ ವಾಸಿಸುವ ಮೊಹಸಿನ್ ಅಲಿ ಖಾನ ಪಠಾಣ ಹಾಗೂ ಅಲಿ ಹಸನ ಪಠಾಣ ಬಂದು ನಮ್ಮನ್ನು ಕೆಟ್ಟ ಶಬ್ದಗಳಿಂದ ಬೈದರು. ನಾವು ಅವರಿಗೆ `ನಾವು ಒಂದೇ ಊರಿನಲ್ಲಿ ಇರುತ್ತೇವೆ, ನೀವು ಹೀಗೇಕೆ ವರ್ತಿಸುತ್ತಿದ್ದೀರಿ ?’ ಎಂದು ಕೇಳಿದೆವು. ಅದಕ್ಕೆ ಅವರು `ಯಾರಿಗೆ ಬೇಕಾದರೂ ಕರೆಯಿರಿ, ಇದು ನಮ್ಮ ಭಾಗ. ನಾವು ಇಲ್ಲಿ ನವರಾತ್ರೋತ್ಸವವನ್ನು ಆಚರಿಸಲು ಬಿಡುವುದಿಲ್ಲ. ನೀವು ಗರಭಾ ಆಡಿದರೆ ಮಂಟಪವನ್ನೇ ಒಡೆದು ಹಾಕುತ್ತೇವೆ. ಕಲ್ಲುತೂರಾಟ ಮಾಡುವೆವು’ ಎಂದು ಬೆದರಿಕೆ ಹಾಕಿದರು. ಈ ಊರಿನಲ್ಲಿ ಬೇರೆ ಕಡೆಯಲ್ಲಿ ಉತ್ಸವವನ್ನು ಆಚರಿಸಲು ಮೈದಾನವೂ ಇಲ್ಲ, ಎಂದು ಹೇಳಿದರು.
೨. ಶೈಲೇಶ ವಸಾವಾ ರವರು ಮುಂದುವರಿದು, ಇದು ಮೊದಲನೇ ಬಾರಿಯಲ್ಲ. ಈ ಹಿಂದೆಯೂ ಅನೇಕ ಬಾರಿ ನಮಗೆ ಇಂತಹ ಬೆದರಿಕೆಗಳನ್ನು ನೀಡಲಾಗಿದೆ. ಒಮ್ಮೆ ಅವರು (ಮತಾಂಧ ಮುಸಲ್ಮಾನರು) ಗರಬಾ ಹಾಗೂ ದೀಪವನ್ನು ಹಚ್ಚಲಾಗಿರುವ ಜಾಗವನ್ನು ಒಡೆದು ಹಾಕಿದ್ದರು. ನಾವು ದೂರು ನೀಡಿರಲಿಲ್ಲ. ಏಕೆಂದರೆ ನಮಗೆ ಅವರೊಂದಿಗೆ ವಾಸಿಸಬೇಕಿದೆ. ನಮ್ಮ ಪ್ರತಿ ಉತ್ಸವಗಳ ಸಮಯದಲ್ಲಿ ಅವರು ಅಡಚಣೆಗಳನ್ನು ನಿರ್ಮಿಸುತ್ತಾರೆ. ಸ್ಥಳೀಯ ಹಿಂದೂ ಮಹಿಳೆಯರೊಂದಿಗೆ ಅವರು ಅನೇಕಬಾರಿ ಅಶ್ಲೀಲವಾಗಿ ವರ್ತಿಸುತ್ತಿದ್ದರು. ಮುಸಲ್ಮಾನರು ಬಹುಸಂಖ್ಯಾತರಾಗಿರುವುದರಿಂದ ನಮಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಬೆದರಿಕೆಯಿಂದಾಗಿ ನಾವು ಚಿಂತೆಗೊಳಗಾಗಿದ್ದೇವೆ. (ಇಷ್ಟು ವರ್ಷಗಳ ವರೆಗೆ ಹೀಗೆಲ್ಲ ನಡೆದಿರುವಾಗಲೂ ಹಿಂದೂಗಳು ಇದನ್ನು ಸಹಿಸುತ್ತಿರುವುದು ಲಜ್ಜಾಸ್ಪದವಾಗಿದೆ. – ಸಂಪಾದಕರು) ಭವಿಷ್ಯದಲ್ಲಿ ಅವರು ನಮಗೆ ಹಾನಿ ಮಾಡಬಹುದು. ನಾವು ಸರಕಾರಕ್ಕೆ ನಮಗೆ ಸಂರಕ್ಷಣೆ ಹಾಗೂ ನ್ಯಾಯ ಒದಗಿಸಲು ಮನವಿ ಮಾಡುತ್ತೇವೆ, ಎಂದು ಹೇಳಿದರು.
೩. ಈ ಘಟನೆಯಿಂದಾಗಿ ಭರೂಚನಲ್ಲಿರುವ ವೀರ ಬಿರಸಾ ಬ್ರಿಗೇಡ ಹಾಗೂ ಇತರ ಕೆಲವು ಸಂಘಟನೆಗಳು ಸಂಘಟಿತವಾಗಿವೆ. ಅವರು ಜಿಲ್ಲಾಧಿಕಾರಿಗಳಿಗೆ ಮುಸಲ್ಮಾನರ ಮೇಲೆ ಕಾರ್ಯಾಚರಣೆ ಮಾಡಲು ಮನವಿ ಮಾಡಿದ್ದಾರೆ.
ಸಂಪಾದಕೀಯ ನಿಲುವು
|