ಹಮಾಸ್‌ನ 25 ಭಯೋತ್ಪಾದಕರನ್ನು ಹತ್ಯೆ ಗೈದ ಇಸ್ರೇಲ್‌ ಮಹಿಳಾ ಸೇನಾಧಿಕಾರಿ !

ನವದೆಹಲಿ – ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಐದನೇ ದಿನವೂ ಮುಂದುವರೆದಿದೆ. ಈ ಯುದ್ಧದಲ್ಲಿ ಶೌರ್ಯದ ಅನೇಕ ಸುದ್ದಿಗಳು ಈಗ ಬೆಳಕಿಗೆ ಬರುತ್ತಿವೆ. ಇಸ್ರೇಲ್‌ನ ಮಹಿಳಾ ಸೇನಾಧಿಕಾರಿಯೊಬ್ಬರು ಹಮಾಸ್‌ನ 25 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಮಹಿಳಾ ಸೇನಾಧಿಕಾರಿಯ ಹೆಸರು ಇನಬಲ ಲಿಬರಮನ್ ಎಂದಾಗಿದೆ. ಅವಳು ಇಸ್ರೇಲ್‌ನ ನಿರ ಎಂ ಕಿಬುತ್ಜ ನ ಭದ್ರತಾ ಮುಖ್ಯಸ್ಥೆಯಾಗಿದ್ದಾರೆ.

ಹಮಾಸ್ ಭಯೋತ್ಪಾದಕರು ರಾಕೆಟ್‌ಗಳನ್ನು ಹಾರಿಸುತ್ತಿರುವಾಗ ಇನಬಲ ಲಿಬರ್‌ಮನ್ ಸೈನಿಕರು ಮತ್ತು ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ನೀಡಿದರು. ಲಿಬರ್‌ಮನ್ ಮತ್ತು ಇತರ ಅಧಿಕಾರಿಗಳು ಗೆರಿಲ್ಲಾ ಕಾವ್ಯದೊಂದಿಗೆ ಹಲವಾರು ಗಂಟೆಗಳ ಕಾಲ ಭಯೋತ್ಪಾದಕರ ವಿರುದ್ಧ ಹೋರಾಡಿದರು ಮತ್ತು ಲಿಬರ್‌ಮನ್ 25 ಭಯೋತ್ಪಾದಕರನ್ನು ಹತ್ಯೆ ಗೈದರು. ಇದರಿಂದಾಗಿ ಇಸ್ರೇಲ್ ನಗರವು ಭಯೋತ್ಪಾದಕರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಇಸ್ರೇಲ್ ಸರಕಾರ ಅವರ ಧೈರ್ಯವನ್ನು ಗುರುತಿಸಿ ಗೌರವಿಸಿದೆ.

ಸಂಪಾದಕೀಯ ನಿಲಿವು

ಇಸ್ರೇಲ್‌ನಂತೆ ಭಾರತದಲ್ಲಿ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹಿಂದೂಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತರಬೇತಿ ನೀಡಲಾಗಿದೆಯೇ ?